Advertisement

ತಾಪಂ ಸಾಮಾನ್ಯ ಸಭೆಗೆ ಬಹಿಷ್ಕಾರ

01:32 PM Feb 01, 2020 | Naveen |

ಶಿಕಾರಿಪುರ: ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಕರೆಯಲಾಗಿದ ಸಾಮಾನ್ಯ ಸಭೆಗೆ ಅಧಿ ಕಾರಿಗಳು ಗೈರಾಗಿರುವ ಕಾರಣದಿಂದ ಸಭೆಯನ್ನು ಬಹಿಷ್ಕರಿಸಿದ ಸದಸ್ಯರು ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.

Advertisement

ತಾಲೂಕಿನ ವಿವಿಧ ಇಲಾಖೆಗಳ ಅನೇಕ ಉನ್ನತ ಆಡಳಿತ ಅಧಿಕಾರಿಗಳು ಗೈರು ಹಾಜರಾದ ಕಾರಣಕ್ಕೆ ಸಭೆಯನ್ನು ಬಹಿಷ್ಕರಿಸಿ ಹೊರನಡೆದ ಘಟನೆ ತಾಪಂ ಸಭಾಂಗಣದಲ್ಲಿ ನಡೆದಿದೆ. ಬೆಳಗ್ಗೆ 11 ಗಂಟೆಗೆ ಆರಂಭಿಸಬೇಕಿದ್ದ ಸಭೆ 12 ಗಂಟೆಯಾದರೂ ಅಧಿ ಕಾರಿಗಳು ಸಭೆಯಲ್ಲಿ ಹಾಜರಾಗದ ಕಾರಣ ಸಭೆ ತಡವಾಗಿ ಆರಂಭವಾಯಿತು. ಸದಸ್ಯರಾದ ಸುರೇಶ್‌ ನಾಯ್ಕ, ಜಯಣ್ಣ, ಪರಮೇಶ್ವರಪ್ಪ, ವಿಜಯಲಕ್ಷ್ಮೀ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್‌ ನಾಯ್ಕ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯಾಗಿರುವ
ಬಿ. ಎಸ್‌. ಯಡಿಯೂರಪ್ಪ ಅವರ ಕ್ಷೇತ್ರವಾಗಿದ್ದು ತಾಲೂಕಿನ ಸರ್ವತೋಮುಖ ಅಭಿವೃದ್ಧಿ, ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ವಿವಿಧ ಇಲಾಖೆಗಳಿಗೆ ಅನೇಕ ರೀತಿಯಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ತಾಲೂಕಿನ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಭೆ ಕರೆಯಲಾಗುತ್ತದೆ.

ಅಧಿಕಾರಿಗಳು ಗೈರಾಗುವ ಮೂಲಕ ಮುಖ್ಯಮಂತ್ರಿಗಳ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಬಾರದೆ ಇರುವ ಕಾರಣಕ್ಕೆ ತಾಪಂ ಇಒ ಪರಮೇಶ್ವರ್‌ ಅಧಿಕಾರಿಗಳ ಪರವಾಗಿ ಆಗಮಿಸಿದ ಸಿಬ್ಬಂ ದಿಗಳಿಗೆ ಎಚ್ಚರಿಕೆ ನೀಡಿದರು. ಗಂಭೀರ ಕಾರಣ ಇಲ್ಲದೇ ಸಭೆಗೆ ಗೈರಾಗಿರುವವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಮುಖ್ಯ ಅಧಿಕಾರಿಗಳನ್ನು ಕಳುಹಿಸದೇ ಸಿಬ್ಬಂಧಿಯನ್ನು ಕಳುಹಿಸಿದ ಕೆಲ ಅಧಿ ಕಾರಿಗಳಿಗೂ ಸೂಚನೆ ನೀಡಿದರು. ಇನ್ನು ಮುಂದೆ ಈ ರೀತಿ ಘಟನೆ
ಮರಳು ಕಳಿಸದಂತೆ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು. ಸಭೆಯಲ್ಲಿ ಅಧ್ಯಕ್ಷ ಶಂಭು ಆರ್‌. ಕೆ., ಉಪಾಧ್ಯಕ್ಷೆ ಪ್ರೇಮಾ ಲೋಕೇಶ್‌, ತಾಪಂ ಸದಸ್ಯರಾದ ದಾಕ್ಷಾಯಣಮ್ಮ, ಗಾಯತ್ರಮ್ಮ, ಮಮತಾ, ವಿಜಯಲಕ್ಷ್ಮೀ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next