Advertisement

ಬರದಿಂದ ತತ್ತರಿಸಿದ್ದವರಿಗೀಗ ನೆರೆಭೀತಿ

05:20 PM Aug 08, 2019 | Team Udayavani |

ಶಿಕಾರಿಪುರ: ತಾಲೂಕಿನ ಅಂಜನಾಪುರ ಸೇರಿದಂತೆ ಅಂಬ್ಲಿಗೊಳ್ಳ ಜಲಾಶಯಗಳು ಕಳೆದ ಮೂರ್ನಾಲ್ಕು ದಿನದಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಜಲಾಶಯಗಳು ಭರ್ತಿಯಾಗಿದ್ದು ಕಳೆದ ನಾಲ್ಕೈದು ವರ್ಷಗಳಿಂದ ಬರಗಾಲದಿಂದ ತತ್ತರಿಸಿದ್ದ ತಾಲೂಕಿನ ರೈತರಲ್ಲಿ ಮುಖದಲ್ಲಿ ಮಂದಹಾಸ ಕಾಣುವಂತಾಗಿದೆ. ಜೊತೆಗೆ ಕೆಲವು ಕಡೆ ಅತೀ ಮಳೆಯಿಂದಾಗಿ ಮನೆ, ಶಾಲೆ ,ಜಮೀನು ಮುಂತಾದ ಸಣ್ಣ ಪುಟ್ಟ ಕಟ್ಟಡಗಳು ನೆಲಕ್ಕೆ ಉರುಳಿದ್ದು ಯಾವುದೇ ಪ್ರಾಣಹಾನಿಯಾಗಿಲ್ಲ.

Advertisement

ತಾಲೂಕಿನ ಶಿರಾಳಕೊಪ್ಪ ಹಾಗೂ ಶಿಕಾರಿಪುರದ ಸಂಪರ್ಕ ಸೇತುವೆಯಾದ ಗೌರಿಹಳ್ಳದ ಸೇತುವೆ ಅತೀ ಹೆಚ್ಚಿನ ಮಳೆಯಿಂದಾಗಿ ಬಿರುಕು ಬಿಟ್ಟಿದೆ. ವಾಹನ ಸವಾರರಿಗೆ ಹಾಗೂ ನೆರೆಯ ಗ್ರಾಮಗಳ ಜನತೆಗೆ ಗಾಬರಿ ಉಂಟಾಗಿದೆ. ತಾಲೂಕಿನಲ್ಲಿ ಅಮಟೆಕೊಪ್ಪ, ಕಪ್ದಪನಹಳ್ಳಿ, ಜಕ್ಕಿನಕೊಪ್ಪ, ಕಾಗಿನಲ್ಲಿ, ಕಲ್ಮನೆ ಮುಂತಾದ ಗ್ರಾಮಗಳಲ್ಲಿ ಅತೀ ಹೆಚ್ಚು ಮಳೆಯಾಗಿದ್ದು ಹಲವಾರು ಮನೆ ಸಹಿತ ಬೆಳೆಹಾನಿಯಾಗಿದೆ. ತಾಲೂಕಿನ ಸಣ್ಣ ಹನುಮಂತಪ್ಪ ಅವರಿಗೆ ಸೇರಿದ ಬಾಳೆತೋಟಕ್ಕೆ ಸಂಪೂರ್ಣ ನೀರು ನುಗಿದ್ದು ಬೆಳೆಹಾನಿಯಾಗಿದೆ. ಆದರೆ ತಾಲೂಕಿನ ಈಸೂರು ಗ್ರಾಮದಲ್ಲಿ ಅತೀ ಕಡಿಮೆ ಮಳೆಯ ವರದಿಯಾಗಿದ್ದು ಕಸಬಾ ಹೊಬಳಿಯ ಮುಡಬ ಸಿದ್ದಾಪುರ ಗ್ರಾಮದಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಈ ಗ್ರಾಮದಲ್ಲಿ ಭತ್ತದ ಬೆಳೆಗಳು ಹಾನಿಯಾಗಿದೆ.

ಪಟ್ಟಣದ ಗಬ್ಬೂರು ಪ್ರದೇಶದ ವೀರನಗೌಡ ಎಂಬುವರಿಗೆ ಸೇರಿದ ನಾಲ್ಕು ಮನೆಗಳಿಗೆ ಮಳೆಯ ನೀರು ನುಗ್ಗಿ ರಾತ್ರಿ ಅಕಾರಿಗಳಿಗೆ ಹಾಗೂ ಮನೆಯ ಮಾಲೀಕರಿಗೆ ನಿದ್ದೆಗೆಡಿಸಿದೆ. ಈ ಸಂಬಂಧ ಪುರಸಭೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಾಯದಿಂದ ನೀರನ್ನು ತೆರವುಗೊಳಿಸಿ ಮನೆಯ ಮಾಲೀಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಅತಿಯಾದ ಮಳೆಯ ಕಾರಣ ಶಿಕಾರಿಪುರ ತಾಲೂಕಿನ ಸರ್ಕಾರಿ ಅರೆ ಸರ್ಕಾರಿ ಹಾಗೂ ಖಾಸಗಿ ಶಾಲಾ- ಕಾಲೇಜುಗಳಿಗೆ ಕಳೆದ ಮಂಗಳವಾರದಿಂದ ರಜಾ ಘೋಷಣೆ ಮಾಡಿದ್ದು ತಾಲೂಕಿನದ್ಯಾಂತ ಇನ್ನೂ ಮುಂದುವರಿದ ಭಾರೀ ಮಳೆಯ ಕಾರಣ ಶುಕ್ರವಾರದ ತನಕ ಮುಂದು ವರೆಸುವ ಸಾಧ್ಯತೆ ಇದೆ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next