Advertisement

ಮತ್ತೂಮ್ಮೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ: ಮುನಿಯಪ್ಪ

04:39 PM Dec 06, 2022 | Team Udayavani |

ಶಿಡ್ಲಘಟ್ಟ: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ನೀತಿ, ಧೋರಣೆಗಳಿಂದ ಜನ ರೋಸಿ ಹೋಗಿದ್ದಾರೆ. ಮತ್ತೂಮ್ಮೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಆಶಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಮಾಜಿ ಸಚಿವ ವಿ.ಮುನಿಯಪ್ಪ ಹೇಳಿದರು.

Advertisement

ಜಿಪಂ, ತಾಪಂ, ಮಳಮಾಚನಹಳ್ಳಿ ಗ್ರಾಪಂನಿಂದ ಮಳಮಾಚನಹಳ್ಳಿ ಸರ್ಕಾರಿ ಪ್ರೌಢಶಾಲಾ ಅವರಣದಲ್ಲಿ ನಡೆದ ಭಾರತ್‌ ನಿರ್ಮಾಣ್‌ ರಾಜೀವ್‌ ಗಾಂಧಿ ಸೇವಾ ಕೇಂದ್ರ, ಸಂಜೀವಿನಿ ಭವನ, (ಎನ್‌.ಆರ್‌. ಎಲ್‌.ಎಂ) ಅಂಗನವಾಡಿ ಕೇಂದ್ರ, ಡಿಜಿಟಲ್‌ ಲೈಬ್ರಲ, ಗ್ರಾಮೀಣ ಉದ್ಯಾನವನ, ಸರ್ಕಾರಿ ಪ್ರೌಢ ಶಾಲಾ ಕೊಠಡಿ ಉದ್ಘಾಟನೆ ಹಾಗೂ ನಿವೇಶನ ರಹಿತರಿಗೆ ಹಕ್ಕುಪತ್ರಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಕೇಂದ್ರದಲ್ಲಿ ಬದಲಾವಣೆ ನೆಪದಲ್ಲಿ ಅಧಿಕಾರ ನೀಡಿದ ಜನರು, ಇದೀಗ ಸರ್ಕಾರದ ನೀತಿಗಳ ವಿರುದ್ಧ ಆಕ್ರೋ ಶಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.

ನರೇಗಾ ಯೋಜನೆ ಬಳಸಿಕೊಳ್ಳಿ: ಗ್ರಾಮಸ್ಥರು ಪಕ್ಷಾತೀತವಾಗಿ ನರೇಗಾ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು. ಚುನಾವಣೆ ಸಂದರ್ಭದಲ್ಲಿ ರಾಜಕಾರಣ ಮಾಡಿಕೊಂಡು ಬೇರೆ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿಗೆ ಎಲ್ಲರು ಕೈ ಜೋಡಿಸಬೇಕು. ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

27 ಗ್ರಾಪಂ ಕಟ್ಟಡ ನಿರ್ಮಾಣ: ಕೋಚಿಮುಲ್‌ ನಿರ್ದೇಶಕ ಆರ್‌.ಶ್ರೀನಿವಾಸ್‌ ಮಾತನಾಡಿ, ದೇಶ ವಿವಿಧ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿದರು, ಸಹ ಗ್ರಾಮ ಸ್ವರಾಜ್ಯದ ಸೊಗಡು ಉಳಿಸಿಕೊಂಡಿದೆ. ಮಳಮಾಚನಹಳ್ಳಿಯಲ್ಲಿ ಕಾರ್ಪೋರೇಟ್‌ ಕಂಪನಿಯ ಮಾದರಿಯಲ್ಲಿ ಗ್ರಾಪಂ ಕಚೇರಿ ನಿರ್ಮಿಸಲಾಗಿದೆ. ಈ ಹಿಂದೆ ಶಾಸಕ ವಿ.ಮುನಿಯಪ್ಪ ಅವರು ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಕಲ್ಪಿಸುವ ಸಲುವಾಗಿ 27 ಗ್ರಾಪಂ ಕಟ್ಟಡಗಳನ್ನು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಅಭಿವೃದ್ಧಿ ಕಾಮಗಾರಿಗೆ ಅನುದಾನ: ತಾಪಂ ಇಒ ಮುನಿರಾಜು ಮಾತನಾಡಿ, ಮಳಮಾಚನಹಳ್ಳಿ ದೆಹಲಿಯಲ್ಲಿ ಗುರುತಿಸಿಕೊಂಡಿದೆ. ಚೀಮಂಗಲ, ಆನೂರು, ಇ.ತಿಮ್ಮಸಂದ್ರ ಗ್ರಾಪಂಗೆ ಕೇಂದ್ರದ ಅಧ್ಯಯನ ತಂಡ ಬಂದು ಮೆಚ್ಚುಗೆ ವ್ಯಕ್ತಪಡಿಸಿ ದ್ದಾರೆ. ಗ್ರಾಪಂ ವ್ಯಾಪ್ತಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿ ನಡೆಸಲು 43 ಲಕ್ಷ ರೂ. ಅನುದಾನ ಬರುತ್ತದೆ. ಅದರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಟೆಂಡರ್‌ ಕರೆಯಲಾಗಿದೆ ಎಂದರು.

Advertisement

ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ಪಾಪಣ್ಣ, ಉಪಾಧ್ಯಕ್ಷ ಬಿ.ಕೆ.ಲೋಕೇಶ್‌, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ತಾಪಂ ಮಾಜಿ ಅಧ್ಯಕ್ಷ ರಾಜಶೇಖರ್‌, ಪಿಡಿಒ ಶೈಲಾ, ಕಾರ್ಯದರ್ಶಿ ರಾಜಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಬ್ಯಾಟರಾಯಶೆಟ್ಟಿ, ಬಿ.ಬೈರೇಗೌಡ, ಕೃಷ್ಣಯ್ಯ, ಬಸವಪಟ್ಟಣ ಬೈರೇಗೌಡ, ರಾಮಾಂಜಿ, ಯುವ ಮುಖಂಡ ರವಿಗೌಡ, ಗ್ರಾಪಂ ಸದಸ್ಯರಾದ ಡಿ.ಬೈರೇಗೌಡ, ದೇವರಾಜ್‌, ಮುರಳಿ, ಚಂದ್ರಪ್ಪ, ಮುಖಂಡ ಪಾಪಣ್ಣ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next