Advertisement

ಶೀಂಟೂರು ನಾರಾಯಣ ರೈ ಆದರ್ಶ ವ್ಯಕ್ತಿ: ಡಾ|ಬನಾರಿ

09:30 AM Aug 15, 2017 | Harsha Rao |

ಪುತ್ತೂರು: ಸೇನಾನಿಯಾಗಿ, ಶಿಕ್ಷಕನಾಗಿ ಸತ್ಯ, ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ, ಮೌಲ್ಯಯುತ ವ್ಯಕ್ತಿತ್ವದಿಂದ ಜೀವನ ದಲ್ಲಿ ಮುನ್ನಡೆದ ಶೀಂಟೂರು ನಾರಾಯಣ ರೈ ಓರ್ವ ಆದರ್ಶ ವ್ಯಕ್ತಿ ಎಂದು ಸಾಹಿತಿ, ವೈದ್ಯ ಡಾ| ರಮಾನಂದ ಬನಾರಿ ಮಂಜೇಶ್ವರ ಹೇಳಿದರು.

Advertisement

ಅವರು ಸೋಮವಾರ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಸಂಸ್ಥೆಯ ಸ್ಥಾಪಕ ಶೀಂಟೂರು ನಾರಾಯಣ ರೈ ಅವರ ಶೀಂಟೂರು ಸ್ಮೃತಿ-2017 ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮಾಭಿವೃದ್ಧಿಯ ಕನಸಿನೊಂದಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಇವರು ಸಮಾಜಕ್ಕೆ ಸ್ಫೂರ್ತಿಯಾಗಿದ್ದರು. ಶಿಕ್ಷಕನಾಗಿ ಶಿಸ್ತಿನ ವ್ಯಕ್ತಿತ್ವವನ್ನು ಬೋಧಿಸಿದ ಅವರು, ಅದೇ ಜೀವನ ತಣ್ತೀಗಳನ್ನು ತನ್ನ ಮಕ್ಕಳಿಗೂ ಧಾರೆ ಎರೆದು ಸಮಾಜದ ಆಸ್ತಿಯಾಗಿಸಿದ್ದಾರೆ. ಇದಕ್ಕೆ ಅವರ ಪುತ್ರ ಸವಣೂರು ಸೀತಾರಾಮ ರೈ ಅವರು ಸಾಕ್ಷಿ ಎಂದರು.

ಯುವಕರು ಸೇನೆ ಸೇರಿ ಶೀಂಟೂರು ಸಮ್ಮಾನ ಪುರಸ್ಕೃತ ಮಣಿಪಾಲ ವಿ.ವಿ. ವಸತಿ ನಿಲಯಗಳ ಪ್ರಧಾನ ನಿಲಯ ಪಾಲಕ ಕರ್ನಲ್‌ ಪ್ರೇಮ್‌ ಕುಮಾರ್‌ ಶೆಟ್ಟಿ ಮಾತನಾಡಿ, ಶಿಕ್ಷಕ ಹಾಗೂ ಸೈನಿಕ ಸಮಾಜಕ್ಕೆ ಆದರ್ಶ ಪ್ರಾಯರು. ಇದಕ್ಕೆ ಶೀಂಟೂರು ನಾರಾಯಣ ರೈ ಅವರು ಉದಾಹರಣೆ. ಯುವ ಜನತೆ ದೇಶ ರಕ್ಷಣೆಗಾಗಿ ಸೈನ್ಯಕ್ಕೆ ಸೇರಬೇಕು ಎಂದರು.
ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಉದ್ಘಾಟಿಸಿ ಮಾತನಾಡಿ, ಸಮಾಜ ಸೇವೆಗೆ ತಂದೆಯವರ ಆದರ್ಶ ಬದುಕು ಪ್ರೇರಣೆಯಾಗಿದೆ ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾರಶ್ಮಿ ವಿದ್ಯಾಲಯದ ಆಡಳಿತಾಧಿಕಾರಿ ಅಶ್ವಿ‌ನ್‌ ಎಲ್‌. ಶೆಟ್ಟಿ ಮಾತನಾಡಿ, ನಮ್ಮ ಕೆಲಸದ ಮೇಲೆ ಶ್ರದ್ಧೆ, ಪ್ರೀತಿ ಇದ್ದಾಗ ಅದರಿಂದ ಯಶಸ್ಸು ಸಾಧ್ಯ ಅನ್ನುವುದಕ್ಕೆ ಶೀಂಟೂರು ನಾರಾಯಣ ರೈ ಅವರು ಉದಾಹರಣೆ ಎಂದರು.

Advertisement

ಲಕ್ಷ ರೂ ದೇಣಿಗೆ
ಉದ್ಯಮಿ ಅರಿಯಡ್ಕ ಚಿಕ್ಕಪ್ಪ ನಾೖಕ್‌ ಶೀಂಟೂರು ನಾರಾಯಣ ಶಿಕ್ಷಣ ಪ್ರತಿಷ್ಠಾನಕ್ಕೆ 1 ಲಕ್ಷ ರೂ ದೇಣಿಗೆ ನೀಡಿದರು. ಮೈಸೂರು ಬೆಮೆಲ್‌ ಸಂಸ್ಥೆಯ ನಿವೃತ್ತ ಎಂಜಿನಿಯರ್‌ ಎಸ್‌. ಸುಧಾಕರ ರೈ ಸ್ಥಾಪಕರ ಪ್ರತಿಮೆಗೆ ಹಾರಾರ್ಪಣೆಗೈದರು.
ಕಸ್ತೂರಿ ಕಲಾ ಎಸ್‌. ರೈ, ಎಸ್‌ಎನ್‌ಆರ್‌ ರೂರಲ್‌ ಎಜುಕೇಶನ್‌ ಟ್ರಸ್ಟಿಗಳಾದ ಎನ್‌. ಸುಂದರ ರೈ ಸವಣೂರು, ಡಾ| ರಾಜೇಶ್‌ ರೈ ಮಂಗಳೂರು, ವಾದಿರಾಜ ಪೆಜತ್ತಾಯ, ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಪ್ರಾಂಶುಪಾಲ ಸೀತಾರಾಮ ಕೇವಳ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮೀ ಎಸ್‌. ರೈ ಉಪಸ್ಥಿತರಿದ್ದರು.

ನ್ಯಾಯವಾದಿ ಎನ್‌. ಜಯಪ್ರಕಾಶ್‌ ರೈ ವಂದಿಸಿದರು. ಉಪನ್ಯಾಸಕರಾದ ಸರಿತಾ ಕೆ., ಗುರುರಾಜ್‌ ಕೆ ಹಾಗೂ ಧನ್ಯಾ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಜೀವಿತ್‌, ಅಝೀಮಾ ಬಾನು, ಯಜ್ಞೆàಶ್‌ ಕೆ, ಶಫಾÌನ್‌, ನದಿಯಾ, ಸ್ವಾತಿ ಎಚ್‌, ನವ್ಯಾ ಎ., ಸುಶ್ಮಿತಾ ಎಸ್‌.ಕೆ. ಅವರಿಗೆ ಶೀಂಟೂರು ನಾರಾಯಣ ರೈ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ತಲಾ 5,000 ರೂ. ನಗದು ಬಹುಮಾನ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next