Advertisement

ಬರಗಾಲ ವೀಕ್ಷಿಸಿದ ಶೆಟ್ಟರ

12:56 PM Aug 03, 2017 | |

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿನ ಬರಗಾಲವನ್ನು ಮನಮುಟ್ಟುವಂತೆ ಮನವರಿಕೆ ಮಾಡಿಕೊಡುವಲ್ಲಿ “ಬರಗಾಲ’ ಚಿತ್ರ ಯಶಸ್ವಿಯಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಹೇಳಿದರು. ನಗರದ ಶೃಂಗಾರ ಚಿತ್ರಮಂದಿರದಲ್ಲಿ ಆರ್‌.ಮಹಾಂತೇಶ ನಿರ್ದೇಶನದ, ಉತ್ತರ ಕರ್ನಾಟಕದ ಕಲಾವಿದರು ಅಭಿನಯಿಸಿದ ಚಲನಚಿತ್ರ ವೀಕ್ಷಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. 

Advertisement

ತಾಂತ್ರಿಕವಾಗಿ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಕಳೆದ 3-4 ವರ್ಷಗಳಿಂದ ನಿರೀಕ್ಷಿತ ಪ್ರಮಾಣದ ಮಳೆ ಬೀಳದೆ ಗ್ರಾಮೀಣ ಭಾಗದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬೆಳೆ ಇಲ್ಲದ ಹೊಲಗಳು, ಬತ್ತಿದ ಕೆರೆಗಳು, ನೀರಿಗಾಗಿ ಜನರು ಹಾಗೂ ಜಾನುವಾರುಗಳ ಅಲೆದಾಟ ಮನಸಿಗೆ ಮುಟ್ಟುವಂತೆ ಚಿತ್ರೀಕರಿಸಲಾಗಿದೆ ಎಂದರು.

ಚಿತ್ರದಲ್ಲಿ ಕೃತ್ರಿಮತೆ ಎಂಬುದಿಲ್ಲ. ಸಹಜವಾಗಿಯೇ ಸ್ಥಿತಿ-ಗತಿಯನ್ನು ತೋರಿಸಲಾಗಿದೆ. ಬರದ ಸ್ಥಿತಿ ಕುರಿತು ಪತ್ರಿಕೆಗಳಲ್ಲಿ ಹಾಗೂ ಟಿವಿಗಳಲ್ಲಿ ನೋಡುತ್ತಿದ್ದೆವು. ಆದರೆ ಚಲನಚಿತ್ರದ ಮೂಲಕ ಬರದ ನೈಜ ಸ್ಥಿತಿಯನ್ನು ತೋರಿಸಲಾಗಿದೆ. ಈ ಭಾಗದ ಕಲಾವಿದರಿಗೆ ಹೆಚ್ಚು ಅವಕಾಶಗಳು ಲಭ್ಯವಾಗಬೇಕು.

ಸಮಾಜದ ಅಂಕು-ಡೊಂಕುಗಳನ್ನು ತೋರಿಸುವ ಇನ್ನಷ್ಟು ಚಲನಚಿತ್ರಗಳು ನಿರ್ಮಾಣಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಚಿತ್ರ ನಿರ್ದೇಶಕ ಆರ್‌.ಮಹಾಂತೇಶ, ನಟರಾದ ಸಾಧು ಕಠಾರೆ, ಹೊರಕೇರಿ, ರಾಮಕೃಷ್ಣ, ಮಹಾಪೌರ ಡಿ.ಕೆ.ಚವ್ಹಾಣ, ಬಿಜೆಪಿ ಮುಖಂಡರಾದ ನಾಗೇಶ ಕಲುರ್ಗಿ, ರಾಘವೇಂದ್ರ ರಾಮದುರ್ಗ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next