ಮನೆಗೊಬ್ಬ ಕಲಾವಿದ ಸಿಗುತ್ತಾನೆ. ಇದೇ ಊರಿನ “ಶೇಷಗಿರಿ ಕಲಾತಂಡ’, ಎಲ್ಲರಿಗೂ ವೇದಿಕೆ ಒದಗಿಸಿದೆ. ಪರಿಣಾಮವಾಗಿ, ನೀನಾಸಂ, ರಂಗಾಯಣದ ಕಲಾವಿದರಿಗೆ ಪೈಪೋಟಿ ನೀಡುವ ಮಟ್ಟಕ್ಕೆ
ಶೇಷಗಿರಿ ಕಲಾತಂಡದ ಕಲಾವಿದರು ಅಭಿನಯಿಸುತ್ತಿದ್ದಾರೆ.
Advertisement
Related Articles
Advertisement
ನಾಟಕ “ಪ್ರಭು’…ಹಳ್ಳಿಯ ಜನರಲ್ಲಿ ನಾಟಕದ ಆಸಕ್ತಿ ಹುಟ್ಟಿಸಿ ಅವರನ್ನು ನಾಟಕ ಕಲಾವಿದರನ್ನಾಗಿಸಿದ್ದರ ಹಿಂದಿರುವ ದೊಡ್ಡ ವ್ಯಕ್ತಿ-ಶಕ್ತಿ ಪ್ರಭು ಗುರಪ್ಪನವರ. ಇವರೇ ಈ ಕಲಾತಂಡದ ಅಧ್ಯಕ್ಷರು. ಇವರೇ ಈ ತಂಡದ ತಾಯಿಬೇರು. 35 ವರ್ಷಗಳ ಹಿಂದೆ ಗಜಾನನ ಯುವಕ ಮಂಡಳ ಕಟ್ಟಿ ಅದನ್ನು ಪರಿಪೂರ್ಣ ಕಲಾ ತಂಡವಾಗಿ ನಿರ್ಮಿಸಿದ್ದೇ ಇವರು. ವೃತ್ತಿಯಲ್ಲಿ ಶೇಷಗಿರಿಯ ಪೋಸ್ಟ್ ಮಾಸ್ಟರ್ ಆಗಿರುವ ಇವರಿಗೆ ನಾಟಕ ಕಲೆಯಲ್ಲಿ ಅತೀವ ಆಸಕ್ತಿ. ಈ ಆಸಕ್ತಿಯೇ ಇಂದು ನಾಟಕ ಕಲಾ ತಂಡವೊಂದು ಬೆಳೆಯುವಂತೆ ಮಾಡಿತು. ಶೇಷಗಿರಿಯಲ್ಲಿನ ರಂಗ ಚಟುವಟಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಇಲ್ಲಿ ಧ್ವನಿ, ಬೆಳಕು, ವಸತಿ ಹೀಗೆ ಸಕಲ ಸೌಕರ್ಯದೊಂದಿದ ರಂಗಮಂದಿರ ನಿರ್ಮಿಸಿದೆ. ಆ ಮೂಲಕ ಗ್ರಾಮದ ರಂಗಚಟುವಟಿಕೆಯನ್ನು ಬೆಂಬಲಿಸಿದೆ. ಪ್ರಸ್ತುತ 30ಕ್ಕೂ ಹೆಚ್ಚು ಮಕ್ಕಳು, 40ಕ್ಕೂ ಹೆಚ್ಚು ಯುವ ಕಲಾವಿದರು ತಂಡದಲ್ಲಿದ್ದು ಬೇರೆ ತಂಡಗಳೊಂದಿಗೆ, ಸ್ವತಂತ್ರವಾಗಿ ನಾಟಕ ಪ್ರದರ್ಶನದಲ್ಲಿ ತೊಡಗಿಕೊಂಡಿದ್ದಾರೆ. ಈ ತಂಡದಲ್ಲಿರುವವರು ಬಹುಪಾಲು ಅನಕ್ಷರಸ್ಥರು, ಕೃಷಿ ಕೂಲಿಕಾರ್ಮಿಕರು. ಆದರೆ, ಇವರೊಳಗಿರುವ ಕಲಾ ಪ್ರತಿಭೆಗೆ ಯಾವುದೇ ಬಡತನವಿಲ್ಲ. ಇವರು ರಂಗ ವೇದಿಕೆಗೆ ಪ್ರವೇಶಿಸಿದರೆ ಅಲ್ಲಿ ಕಲಾ ಸರಸ್ವತಿಯೂ ತಲೆದೂಗುವಂತೆ ಪ್ರೌಢಿಮೆ ಮೆರೆಯುತ್ತಾರೆ. ಶೇಷಗಿರಿಯ ರಂಗಾಸಕ್ತರಿಗೆ, ರಂಗಕರ್ಮಿ ಸತೀಶ ಕುಲಕರ್ಣಿ, ಶ್ರೀಪಾದ ಭಟ್ಟ, ನಾಗರಾಜ ಧಾರೇಶ್ವರ, ಡಾ. ಗಣೇಶ್ ಸೇರಿದಂತೆ ಅನೇಕ ರಂಗ ಪರಿಣಿತರು ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಈ ತಂಡ ಈಗ ನೀನಾಸಂ, ರಂಗಾಯಣ, ಧಾರವಾಡದ ಆಟಮಾಟ, ಬೆಂಗಳೂರಿನ ರಂಗಶಂಕರ…ಹೀಗೆ ಅನೇಕ ಕಲಾ ತಂಡದೊಂದಿಗೆ ಸೇರಿಕೊಂಡು ಪ್ರದರ್ಶನದಲ್ಲಿ ತೊಡಗಿದೆ. ಹೋಗ್ತಾ ಇರ್ತಾರೆ, ಬರ್ತಾ ಇರ್ತಾರೆ
ಪ್ರಭು ಗುರಪ್ಪನವರ, ಆರಂಭದಲ್ಲಿ ಗ್ರಾಮದ ಯುವಕರು, ಮಕ್ಕಳು, ಆಸಕ್ತರನ್ನು ಸೇರಿಸಿಕೊಂಡು ಯುವಜನೋತ್ಸವ, ಜಾತ್ರೆ, ಸ್ಪರ್ಧೆಗಳಲ್ಲಿ ಮನರಂಜನೆಗಾಗಿ ನಾಟಕವಾಡಿಸುತ್ತಿದ್ದರು. ತನ್ಮೂಲಕ ಗ್ರಾಮದ ಜನರಲ್ಲಿ ನಾಟಕಾಸಕ್ತಿ ಮೂಡಿಸಿದರು. ತಜ್ಞರನ್ನು ಕರೆಸಿ ರಂಗ ತರಬೇತಿ, ಬೇಸಿಗೆ ಶಿಬಿರಗಳ ಮೂಲಕ ಅವರಿಗೆ ತರಬೇತಿ ನೀಡಿ ಕಲಾವಿದರನ್ನಾಗಿ ಮಾಡಿದರು. ಈ ತರಬೇತಿ ಆಧರಿಸಿ ರಾಜ್ಯದ ತುಂಬೆಲ್ಲ ಬೀದಿ ನಾಟಕ ನೀಡಿದರು. ಇವರ ಈ ತಂಡದಲ್ಲಿ ಮೂರು ತಲೆಮಾರಿನ ಕಲಾವಿದರು ಇದ್ದಾರೆ. ಮಕ್ಕಳು ಶಿಕ್ಷಣಕ್ಕಾಗಿ, ಕಾಲೇಜು ಹುಡುಗರು ಉದ್ಯೋಗಕ್ಕಾಗಿ, ಮಧ್ಯಮ ವಯಸ್ಸಿನವರು ವಯೋಸಹಜ ನಿರಾಸಕ್ತಿಯಿಂದಾಗಿ ತಂಡದಿಂದ ಹೊರಹೋಗಿದ್ದಾಗೆಲ್ಲ ಮತ್ತೆ ಹೊಸ ಮಕ್ಕಳು, ಯುವಕರು, ಆಸಕ್ತರು ಸೇರಿಕೊಳ್ಳುತ್ತಲೇ ಇದ್ದಾರೆ. ಇವರ ಈ ಕಲಾ ಸೇವೆಗೆ ಕಾರ್ಯದರ್ಶಿ ನಾಗರಾಜ ಧಾರೇಶ್ವರರ ನೆರವೂ ಇದೆ. ನಡೆದು ಬಂದ ಹಾದಿ
“ಕಪ್ಪು ನೆಲದ ಕೆಂಪು ಕಥೆ’ಯಿಂದ ಹಿಡಿದು ಇಲ್ಲಿಯವರೆಗೆ ಶೇಷಗಿರಿ ಕಲಾತಂಡದವರು ಹಲವಾರು ನಾಟಕಗಳನ್ನು ಆಡಿದ್ದಾರೆ. “ಕತ್ತಲಿನಿಂದ ಬೆಳಕಿನೆಡೆಗೆ’, “ರಕ್ತ ಸಿಂಧೂರ’, ಮಾಯಾ ಕನ್ನಡಿ, ದೀಪಾವಳಿ, ಕಥೆಯಾದ ಕಾಳ, ಕುವೆಂಪು ಕಾವ್ಯದೃಶ್ಯ, “ತುಂಡು ದನ’ ಮುಂತಾದ ನಾಟಕಗಳಿಂದ ರಂಗ ತಂಡಕ್ಕೂ, ಊರಿಗೂ ಹೆಸರು ಬಂದಿದೆ. “ಇವ ನಮ್ಮವ’ ನಾಟಕ 75 ಪ್ರದರ್ಶನ ಕಂಡಿದೆ. “ವಾಲಿವಧೆ’ನಾಟಕದ 40ನೇ ಪ್ರದರ್ಶನ ಬೆಂಗಳೂರು ಇನ್‌ಫೋಸಿಸ್‌ನಲ್ಲಿ ನಡೆಯಲಿದೆ. ಎಚ್.ಕೆ. ನಟರಾಜ