Advertisement

ರಿಜಿಸ್ಟರ್ ಮದುವೆ ವೇಳೆ ಯುವತಿಗೆ ಕೋವಿಡ್ ಇದೆ ಎಂದು ಚೀರಿಕೊಂಡ ಪೋಷಕರು: ನಂತರ ಆದದ್ದೇನು ?

12:23 PM Jul 27, 2020 | Mithun PG |

ಮಧ್ಯಪ್ರದೇಶ: ಪ್ರೀತಿಸಿದ ಜೋಡಿಯೊಂದು  ತಮ್ಮ ಮದುವೆಯನ್ನು ಧೃಢಿಕರಿಸಲು (ವಿವಾಹ ನೋಂದಣಿ) ಬಂದ ವೇಳೆ ಹುಡುಗಿಗೆ ಕೋವಿಡ್ ವೈರಸ್ ಇದೆ ಎಂದು ಕುಟುಂಬಸ್ಥರು ಚೀರಿಕೊಂಡ ಘಟನೆ ಖಾಂಡ್ವಾ ಗ್ರಾಮದಲ್ಲಿ ನಡೆದಿದೆ.

Advertisement

22 ವರ್ಷದ ಯುವತಿಯೊಬ್ಬಳು ತನ್ನದೇ ಜಾತಿಯ ಹುಡುಗನನ್ನು ಪ್ರೀತಿಸಿದ್ದಳು. ಮಾತ್ರವಲ್ಲದೆ ರಿಜಿಸ್ಟರ್ ಮದುವೆಯಾಗಲು ಸಬ್ ರಿಜಿಸ್ಟರ್ ಆಪೀಸ್ ಗೆ ತೆರಳಿದ್ದ ವೇಳೆ ಹುಡುಗಿಯ ಪೋಷಕರು ತಮ್ಮ ಮಗಳಿಗೆ ಕೋವಿಡ್ ವೈರಸ್ ಇದೆ ಎಂದು ಕೂಗಿಕೊಂಡಿದ್ದಾರೆ. ಇದರಿಂದ ಬೆದರಿದ ಟೈಪಿಸ್ಟ್ ಸೇರಿದಂತೆ ಇತರರು ಮದುವೆಯನ್ನು ಧೃಢಿಕರಿಸಲು ನಿರಾಕರಿಸಿದ್ದಾರೆ.

ಅಲ್ಲಿದ್ದ ವಕೀಲರು  ಕೂಡ ಯಾವುದೇ ಧೃಡೀಕರಣ ಪ್ರಕ್ರಿಯೆ ನಡೆಸುವ  ಮೊದಲು ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಯುವತಿಗೆ ಸೂಚನೆ ನೀಡಿದ್ದಾರೆ. ಈ ಸಮಯದಲ್ಲಿ ಹುಡುಗನ ಪೋಷಕರು ಆತನನ್ನು ಕರೆದುಕೊಂಡು ಹೋಗಿ ಕ್ವಾರಂಟೈನ್ ಆಗಿದ್ದಾರೆ.

ಅದಾಗ್ಯೂ ಜಿಲ್ಲಾ ಆರೋಗ್ಯ ಅಧಿಕಾರಿಗಳ ಆ ಪ್ರದೇಶದಲ್ಲಿ ಯಾವುದೇ ಕೋವಿಡ್ ಪ್ರಕರಣಗಳು ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ.

Advertisement

ನಂತರದಲ್ಲಿ ಹುಡುಗನ ಕುಟುಂಬಸ್ಥರು  ಹುಡುಗಿಯನ್ನು ಇಷ್ಟಪಟ್ಟರೂ  ಕೂಡ ಹುಡುಗಿಯ ಕುಟುಂಬಸ್ಥರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ  ಕಾರಣದಿಂದಲೇ  ಕೋವಿಡ್ ನೆಪವೊಡ್ಡಿ ವಿವಾಹ ನೋಂದಣಿಗೆ ಅಡ್ಡಿಪಡಿಸಲಾಗಿದೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next