Advertisement

ರಾಜ್ ಕುಂದ್ರಾ ‘ಕಾಮ’ ಕಾಂಡ ಬಿಚ್ಚಿಟ್ಟ ನಟಿ ಶೆರ್ಲಿನ್ ಚೋಪ್ರಾ

03:25 PM Jul 29, 2021 | Team Udayavani |

ಮುಂಬೈ : ನೀಲಿ ಸಿನಿಮಾಗಳ ನಿರ್ಮಾಣ ಪ್ರಕರಣದಡಿ ಬಂಧನಕ್ಕೊಳಗಾಗಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಶೆರ್ಲಿನ್ ಚೋಪ್ರಾ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.

Advertisement

2019 ರಲ್ಲಿ ಶೆರ್ಲಿನ್ ಚೋಪ್ರಾ ಆ್ಯಪ್ ಕುರಿತು ಮಾತುಕತೆಗೆಂದು ರಾಜ್ ಕುಂದ್ರಾ ತಮ್ಮನ್ನು ಕರೆದಿದ್ದರು. ವ್ಯವಹಾರದ ಮಾತುಕತೆ ಬಳಿಕ ಬಲವಂತವಾಗಿ ನನಗೆ ಕಿಸ್ ಮಾಡಲು ಬಂದರು. ನಾನು ಎಷ್ಟೇ ವಿರೋಧಿಸಿದರೂ ಕೇಳಲಿಲ್ಲ. ಈ ವೇಳೆ ಆತನಿಂದ ತಪ್ಪಿಸಿಕೊಳ್ಳೆಂದು ಟಾಯ್ಲೆಟ್ ರೂಮಿಗೆ ಹೋಗಿ ಅಡಗಿಕೊಂಡೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಕುಂದ್ರಾ ಕುರಿತು ಮತ್ತೊಂದು ವಿಚಾರ ಬಿಚ್ಚಿಟ್ಟಿರುವ ಶೆರ್ಲಿನ್, ಆತ ಪತ್ನಿ ಶಿಲ್ಪಾ ಶೆಟ್ಟಿ ಜೊತೆಗೆ ತನ್ನ ಸಂಬಂಧ ಸರಿ ಇಲ್ಲ ಎಂದು ಹೇಳಿಕೊಂಡಿದ್ದರಂತೆ. ಆಕೆಯ ಜೊತೆ ನನ್ನ ಸಂಬಂಧ ಸರಿಯಿಲ್ಲ. ಹಾಗಾಗಿ ನಾನು ಸದಾ ಒತ್ತಡದಲ್ಲಿ ಇರುತ್ತೇನೆ ಎಂದಿದ್ದನಂತೆ.

ಹೇಳಿಕೆ ದಾಖಲಿಸಿದ ಶೆರ್ಲಿನ್ :

ಇನ್ನು ಕಳೆದ ಏಪ್ರಿಲ್ ನಲ್ಲಿ ರಾಜ್ ಕುಂದ್ರಾ ವಿರುದ್ಧ ಶೆರ್ಲಿನ್ ದೂರು ನೀಡಿದ್ದರಂತೆ. ಅವರ ದೂರಿನಡಿ ದಾಖಲಾಗಿರುವ ಪ್ರಕರಣದಡಿ ತಮ್ಮ ಹೇಳಿಕೆ ನೀಡುವ ಉದ್ದೇಶದಿಂದ ಇಂದು (ಜು.29) ಮುಂಬೈ ಪೊಲೀಸರ ಎದುರು ಶೆರ್ಲಿನ್ ಹಾಜರಾಗಿದ್ದರು.

Advertisement

ಇನ್ನು ಸದ್ಯ ರಾಜ್ ಕುಂದ್ರಾ ಅವರನ್ನು ಮುಂಬೈ ಕೋರ್ಟ್ ಮತ್ತೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next