Advertisement

ಖಜೂರಿಮಠದ ಶಾಂತಿಧಾಮಕ್ಕೆ ಪೀಠಾಧಿಪತಿಯಾದ ದಿವಾನ ಶರೀಫರು

11:05 PM Feb 26, 2020 | Lakshmi GovindaRaj |

ರೋಣ: ಆಳಂದ ತಾಲೂಕು ಖಜೂರಿಮಠದ ಪೀಠಾಧಿ ಪತಿ ಮುರುಘರಾಜೇಂದ್ರ ಕೋರಣೇಶ್ವರ ಸ್ವಾಮಿಗಳ ಅಣತಿಯಂತೆ, ನಾಡಿನ ಸ್ವಾಮೀಜಿಗಳ ಸಮ್ಮುಖದಲ್ಲಿ ತಾಲೂಕಿನ ಅಸೂಟಿ ಗ್ರಾಮದ ಖಜೂರಿಮಠದ ಶಾಂತಿಧಾಮಕ್ಕೆ ದಿವಾನ ಶರೀಫರು ಬುಧವಾರ ಪೀಠಾಧಿಪತಿಯಾದರು.

Advertisement

ಹುಟ್ಟಿದ್ದು ಇಸ್ಲಾಂ ಧರ್ಮದಲ್ಲಿಯಾದರೂ ಬಾಲ್ಯಾ ವಸ್ಥೆಯಿಂದಲೇ ಬಸವ ತತ್ವಗಳಿಗೆ ಮಾರು ಹೋಗಿದ್ದ ದಿವಾನ ಸಂತ ಶರೀಫರು, ಓದಿದ್ದು ಕೇವಲ 3ನೇ ತರಗತಿ. 2019, ನ.10ರಂದು ಶರೀಫರ ಇಚ್ಛಾಶಕ್ತಿ ಹಾಗೂ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಲಿಂಗದೀಕ್ಷೆ ನೀಡಲಾಗಿತ್ತು.

ಇವರನ್ನೇ ಮಠದ ಉತ್ತರಾಧಿಕಾರಿಯಾಗಿಸಲು ಮುರುಘ ರಾಜೇಂದ್ರ ಕೊರಣೇಶ್ವರ ಶ್ರೀಗಳು ಇಚ್ಛಿಸಿದ್ದರು. ಶರೀಫ ಅವರಿಗೆ ಈಗಾಗಲೇ ಮದುವೆಯಾಗಿ ನಾಲ್ಕು ಜನ ಮಕ್ಕಳಿದ್ದಾರೆ. ಇದೇ ಸಂದರ್ಭದಲ್ಲಿ ಮುರುಘರಾಜೇಂದ್ರ ಕೋರಣೇಶ್ವರ ಸ್ವಾಮಿಗಳು 9 ಜೋಡಿಗಳ ಸರ್ವಧರ್ಮ ಸಾಮೂಹಿಕ ವಿವಾಹ ಆಯೋಜಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next