Advertisement

6 ತಿಂಗಳಲ್ಲಿ 1 ಲಕ್ಷ ಗೋವುಗಳಿಗೆ ಆಶ್ರಯ; 50 ಮೆಗಾ ಗೋಶಾಲೆ ತೆರೆಯಲು ತೀರ್ಮಾನ

08:50 PM Apr 19, 2022 | Team Udayavani |

ಅಲಹಾಬಾದ್‌: ಉತ್ತರಪ್ರದೇಶದ ಬೀಡಾಡಿ ದನಗಳ ಹಾವಳಿ ಸಮಸ್ಯೆಗೆ ಇತಿಶ್ರೀ ಹಾಡಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರ್ಕಾರ ವಿಶೇಷ ಯೋಜನೆ ರೂಪಿಸಿದೆ.

Advertisement

ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರೂಪಿಸಲಾಗಿರುವ ಈ ಯೋಜನೆಯ ಮೊದಲ ಹಂತದಲ್ಲಿ, 100 ದಿನಗಳಲ್ಲಿ ಸುಮಾರು 50 ಸಾವಿರ ಬೀಡಾಡಿ ದನಗಳಿಗೆ ಆಶ್ರಯ ತಾಣ ನಿರ್ಮಿಸಲು, ಮುಂದಿನ ಆರು ತಿಂಗಳಲ್ಲಿ 1 ಲಕ್ಷ ಗೋವುಗಳಿಗೆ ಆಶ್ರಯ ನೀಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ, 50 ಮೆಗಾ ಗೋ ಶಾಲೆಗಳನ್ನು ನಿರ್ಮಿಸಲು, ಈಗಿರುವ ಗೋ ಶಾಲೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.

ಇದಲ್ಲದೆ, ರಾಜ್ಯದ ಆಯ್ದ ಭಾಗಗಳಲ್ಲಿ ಗೋದಾಮುಗಳನ್ನು ನಿರ್ಮಿಸುವ ಮೂಲಕ ಗೋವುಗಳು ನೈಸರ್ಗಿಕ ಪರಿಸರದಲ್ಲಿ ಯಾವುದೇ ಭೀತಿಯಿಲ್ಲದೆ ಜೀವಿಸಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ.

ಇದನ್ನೂ ಓದಿ:ಪಕ್ಷ ಸಿದ್ದಾಂತ, ನಾಯಕತ್ವ ಇಲ್ಲದ ಕಾಂಗ್ರೆಸ್ ದೇಶವನ್ನೇ ಗೆಲ್ಲಲು ಹೊರಟಿದೆ : ಸಿಎಂ ವ್ಯಂಗ್ಯ

ಏ. 15ರಿಂದ ಅನ್ವಯವಾಗುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹೊಸ ಗುರಿಯನ್ನು ನೀಡಲಾಗಿದೆ. ಅದರಂತೆ, ಅವರು ದಿನಂಪ್ರತಿ ಕನಿಷ್ಠ 10 ಗೋವುಗಳನ್ನು ಗೋ ಶಾಲೆಗಳಿಗೆ ಕಳಿಸಿದ ಲೆಕ್ಕವನ್ನು ಕೊಡಬೇಕೆಂದು ಸೂಚಿಸಲಾಗಿದೆ.

Advertisement

ಇತ್ತೀಚೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪಗೊಂಡಿತ್ತು. ಆಗ, ಪ್ರಧಾನಿ ನರೇಂದ್ರ ಮೋದಿ, ಪುನಃ ಅಧಿಕಾರಕ್ಕೆ ಬಂದರೆ ಈ ಸಮಸ್ಯೆ ಇತ್ಯರ್ಥಪಡಿಸುವುದಾಗಿ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next