Advertisement

ಶೆಲ್ಲಿ ದೆಹಲಿಯ ನೂತನ ಮೇಯರ್‌ ; ಆಲೆ ಮೊಹಮ್ಮದ್‌ ಉಪ ಮೇಯರ್‌

08:56 PM Dec 23, 2022 | Team Udayavani |

ನವದೆಹಲಿ: ದೆಹಲಿ ಮೇಯರ್‌ ಹುದ್ದೆಗೆ ಶೆಲ್ಲಿ ಒಬೆರಾಯ್‌ ಅವರ ಹೆಸರನ್ನು ಆಮ್‌ ಆದ್ಮಿ ಪಕ್ಷ ಘೋಷಿಸಿದೆ. ಅದೇ ರೀತಿ ಉಪ ಮೇಯರ್‌ ಹುದ್ದೆಗೆ ಆಲೆ ಮೊಹಮ್ಮದ್‌ ಇಕ್ಬಾಲ್‌ ಅವರ ಹೆಸರನ್ನು ನಾಮಾಂಕಿತಗೊಳಿಸಿದೆ.

Advertisement

ಈ ಮೊದಲು ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಶೆಲ್ಲಿ ಒಬೆರಾಯ್‌, ಮೊದಲ ಬಾರಿಗೆ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅಧಿಕಾರಕ್ಕೆ ಬಂದರೆ ಮಹಿಳೆಯನ್ನು ಮೇಯರ್‌ ಮಾಡುವುದಾಗಿ ಚುನಾವಣೆ ಸಮಯದಲ್ಲಿ ಆಪ್‌ ಘೋಷಿಸಿತ್ತು.

“ದೆಹಲಿಯನ್ನು ಸ್ವಚ್ಛಗೊಳಿಸುವುದು, ಅದು ಕಂಗೊಳಿಸುವಂತೆ ಮಾಡುವುದು ನನ್ನ ಆದ್ಯತೆಯಾಗಿದೆ. ನಾವು ದೆಹಲಿಯನ್ನು ಸ್ಮಾರ್ಟ್‌ ಸಿಟಿ ಮಾಡುತ್ತೇವೆ,’ ಎಂದು ಶೆಲ್ಲಿ ಹೇಳಿದ್ದಾರೆ.

250 ವಾರ್ಡ್ ಸದಸ್ಯ ಬಲದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 133 ವಾರ್ಡ್ ಗಳಲ್ಲಿ ಅಮೋಘ ಗೆಲುವು ಸಾಧಿಸುವ ಮೂಲಕ ಬಿಜೆಪಿಯಿಂದ ಅಧಿಕಾರ ಕಸಿದಿತ್ತು. ಬಿಜೆಪಿ 105 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಕೇವಲ 8 ವಾರ್ಡ್ ಗಳಲ್ಲಿ ಜಯಗಳಿಸಿ ಮೂರನೇ ಸ್ಥಾನ ಪಡೆದುಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next