Advertisement

ಬೀದಿ ನಾಯಿಗೆ ತುತ್ತು ಹಾಕಿದ ಕ್ರಿಕೆಟಿಗ ಶೆಲ್ಡನ್ ಜಾಕ್ಸನ್‌

03:29 PM Apr 09, 2020 | keerthan |

ಸೌರಾಷ್ಟ್ರ: ಕೋವಿಡ್-19 ವೈರಸ್‌ ಬಿಸಿ ಮನುಷ್ಯರಿಗೆ ಮಾತ್ರವಲ್ಲ, ಮೂಕ ಪ್ರಾಣಿಗಳಿಗೂ ತಟ್ಟಿದೆ. ಹೌದು, ಅದೆಷ್ಟೋ ಬೀದಿ ನಾಯಿಗಳು ಅನ್ನ ಆಹಾರವಿಲ್ಲದೆ ದಿನನಿತ್ಯ ಪ್ರಾಣ ಬಿಡುತ್ತಿವೆ.

Advertisement

ಇಂತಹ ಸಂದರ್ಭದಲ್ಲಿ ಬೀದಿ ನಾಯಿಗಳ ಹಸಿವಿನ ಕೂಗಿಗೆ ಸೌರಾಷ್ಟ್ರದ ಕ್ರಿಕೆಟಿಗ ಶೆಲ್ಡನ್‌ ಜಾಕ್ಸನ್‌ ಸ್ಪಂದಿಸಿದ್ದಾರೆ. ಬಿಸ್ಕತ್‌ ಸೇರಿದಂತೆ ಕೆಲವು ಆಹಾರ ಸಾಮಗ್ರಿಗಳನ್ನುತಮ್ಮ ಕಾರಿನಲ್ಲಿ ತುಂಬಿಕೊಂಡು ಸೌರಾಷ್ಟ್ರದ ಬೀದಿಗಳಲ್ಲಿ ಒಂದು ಸುತ್ತು ಹಾಕಿದ ಬ್ಯಾಟ್ಸ್‌ಮನ್‌ ಬೀದಿ ನಾಯಿಗಳ ಹಸಿವು ನೀಗಿಸಿ ಮಾನವೀಯತೆ ಮೆರೆದಿದ್ದಾರೆ.

ಇದೇ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ವಾಸಿಸುವ ಬಡವರಿಗೂ ಜಾಕ್ಸನ್‌ ಆಹಾರ ಹಂಚಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸೌರಾಷ್ಟ್ರ ತಂಡದ ಪರವಾಗಿ ಆಡುವ ಶೆಲ್ಡನ್ ಜ್ಯಾಕ್ಸನ್ ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಆಡುತ್ತಾರೆ.

ಕ್ರಿಕೆಟಿಗರಾದ ಗೌತಮ್ ಗಂಭಿರ್, ಸುರೇಶ್ ರೈನಾ, ಸಚಿನ್ ತೆಂಡೂಲ್ಕರ್ ಮುಂತಾದವರು ಕೋವಿಡ್-19 ವಿರುದ್ಧದ ಹೋರಾಟಕ್ಕೆ ಹಣಕಾಸಿನ ನೆರವು ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next