Advertisement

ಶೀಲಾ ದೀಕ್ಷಿತ್‌ ಪದಭಾರ ಸ್ವೀಕಾರ: ಮೊದಲ ಸಾಲಲ್ಲಿ ಟೈಟ್ಲರ್‌; ವಿವಾದ

11:56 AM Jan 16, 2019 | Team Udayavani |

ಹೊಸದಿಲ್ಲಿ : ಅನಾರೋಗ್ಯದ ಕಾರಣಕ್ಕೆ ಅಜಯ್‌ ಮಾಕೆನ್‌ ತೆರುವುಗೊಳಿಸಿದ್ದ ಸ್ಥಾನಕ್ಕೆ, ದಿಲ್ಲಿ ಕಾಂಗ್ರೆಸ್‌ ಘಟಕದ ಅಧ್ಯಕ್ಷೆಯಾಗಿ ಹಿರಿಯ ನಾಯಕಿ ಶೀಲಾ ದೀಕ್ಷಿತ್‌ ಅವರು ಇಂದು ಬುಧವಾರ ಇಲ್ಲಿನ ಕಾಂಗ್ರೆಸ್‌ ಕಚೇರಿಯಲ್ಲಿ ಪದಭಾರ ಸ್ವೀಕರಿಸುವ ಕಾರ್ಯಕ್ರಮದಲ್ಲಿ 1984ರ ಸಿಕ್ಖ್ ವಿರೋಧಿ ಗಲಭೆಯ ಓರ್ವ ಆರೋಪಿಯಾಗಿರುವ ಜಗದೀಶ್‌ ಟೈಟ್ಲರ್‌ ಮೊದಲ ಸಾಲಿನಲ್ಲಿ ಆಸೀನರಾಗಿದ್ದುದು ವ್ಯಾಪಕ ಟೀಕೆ, ಖಂಡನೆ, ವಿವಾದಗಳಿಗೆ ಕಾರಣವಾಯಿತು.

Advertisement

ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಇರುವಂತೆಯೇ ಶೀಲಾ ದೀಕ್ಷಿತ್‌ ಅವರು ದಿಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಪದಭಾರವನ್ನು ಮತ್ತೆ ವಹಿಸಿಕೊಂಡಿದ್ದಾರೆ. 

‘ಸಿಕ್ಖ್ ವಿರೋಧಿ ಗಲಭೆ ಪ್ರಕರಣದಲ್ಲಿ ನನ್ನ ವಿರುದ್ಧ ಯಾವುದೇ ಕೇಸಿಲ್ಲ’ ಎಂದು ಟೈಟ್ಲರ್‌ ಕಾರ್ಯಕ್ರಮದಲ್ಲಿನ ತನ್ನ ಉಪಸ್ಥಿತಿಯು ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಮಾಧ್ಯಮಕ್ಕೆ ಸ್ಪಷ್ಟೀಕರಣ ನೀಡಿದರು. 

‘ಕೋರ್ಟ್‌ ಈಗಾಗಲೇ ತೀರ್ಪು ನೀಡಿರುವಾಗ ನನಗೆ ಇನ್ನೇನು ಹೇಳಲಿಕ್ಕಿದೆ ? ನೀವೆಲ್ಲ ಅನಗತ್ಯವಾಗಿ ನನ್ನ ಹೆಸರನ್ನು ಎತ್ತುತ್ತಿದ್ದೀರಿ – ಯಾಕೆ ? ನನ್ನ ವಿರುದ್ಧ ಎಫ್ಐಆರ್‌ ಇದೆಯಾ ? ಇಲ್ಲ. ಹಾಗಿರುವಾಗ ನೀವ್ಯಾಕೆ ನನ್ನ ಹೆಸರನ್ನು ಎತ್ತುತ್ತೀರಿ ? ಯಾರೋ ಏನೋ ಹೇಳಿದರೆ ನೀವದನ್ನು ನಂಬುತ್ತೀರಿ’ ಎಂದು ಟೈಟ್ಲರ್‌ ಮಾಧ್ಯಮದವರತ್ತ ಗುಡುಗಿದರು. 

Advertisement

Udayavani is now on Telegram. Click here to join our channel and stay updated with the latest news.

Next