Advertisement

ಭರ್ಜರಿ ಕುರಿ ವ್ಯಾಪಾರ

08:14 AM Jan 15, 2019 | |

ಹೊನ್ನಾಳಿ: ಪಟ್ಟಣದ ಸೇರಿದಂತೆ ಸುತ್ತಮುತ್ತಲ ಅನೇಕ ಗ್ರಾಮಗಳಲ್ಲಿ ಸಾಲು ಸಾಲಾಗಿ ಗ್ರಾಮ ದೇವತೆಗಳ ಹಬ್ಬ ಮತ್ತು ಜಾತ್ರೆಗಳಿರುವುದರಿಂದ ಪಟ್ಟಣದಲ್ಲಿ ರವಿವಾರ ವಿಶೇಷ ಕುರಿ ಸಂತೆ ನಡೆಯಿತು. ಸಾಮಾನ್ಯ ದಿನಗಳಲ್ಲಿ ಕೇವಲ ಪ್ರತಿ ಬುಧವಾರ ಮಾತ್ರ ಕುರಿ ಸಂತೆ ಸೇರುತ್ತದೆ.

Advertisement

ಪಟ್ಟಣದ ಖಾಸಗಿ ಬಸ್‌ ನಿಲ್ದಾಣದ ಸಮೀಪ ನಡೆವ ಸಂತೆಯಲ್ಲಿ ಕುರಿ ಸಾಕಾಣಿಕೆ ಮಾಡುವ ಸುತ್ತಮುತ್ತಲ ಗ್ರಾಮಗಳ ರೈತರು ಸಾವಿರಾರು ಕುರಿಗಳೊಂದಿಗೆ ಆಗಮಿಸಿ ಭರ್ಜರಿ ವಹಿವಾಟು ನಡೆಸಿದರು. ಇದೇ ತಿಂಗಳ 21 ಮತ್ತು 22ರಂದು ಪಟ್ಟಣದ ಗ್ರಾಮ ದೇವತೆ ದುರ್ಗಾಂಬಿಕೆ ಜಾತ್ರೆ ನಡೆಯಲಿರುವುದರಿಂದ ಕುರಿ ವ್ಯಾಪಾರಕ್ಕೆ ಮತ್ತಷ್ಟು ಮೆರಗು ಬಂದಿತ್ತು. ಗಾತ್ರ ಮತ್ತು ವಯಸ್ಸಿಗನುಗುಣವಾಗಿ ಕುರಿಗಳು 6 ಸಾವಿರದಿಮದ 20 ಸಾವಿರ ರೂ. ವರೆಗೆ ಮಾರಾಟವಾದವು.

ಪಟ್ಟಣ ಪಂಚಾಯಿತಿ ಸದಸ್ಯ ಹೊಸಕೇರಿ ಸುರೇಶ್‌ ಈ ಕುರಿತು ಮಾತನಾಡಿ, ಹೊನ್ನಾಳಿ ತಾಲೂಕು ಕೇಂದ್ರಕ್ಕೆ ಸುತ್ತಮುತ್ತಲ ಪ್ರದೇಶಗಳಿಂದ ಉತ್ತಮ ರಸ್ತೆ ಸಂಪರ್ಕವಿದೆ. ಈ ಭಾಗದಲ್ಲಿ ಕುರಿ, ಮೇಕೆ, ಅಡುಗಳ ಸಾಕಾಣಿಕೆ ಕೂಡ ಹೆಚ್ಚಿನ ಪ್ರಮಾಣದಲ್ಲಿದ್ದು, ದೂರದ ಶಿವಮೊಗ್ಗ, ಭದ್ರಾವತಿ, ಸಾಗರ, ಹಿರೇಕೆರೂರು, ಹರಿಹರ, ದಾವಣಗೆರೆ ಆಯನೂರು, ತಿಮ್ಮಿನಕಟ್ಟ, ಸೇರಿದಂತೆ ಹತ್ತಾರು ಪ್ರದೇಶಗಳಿಂದ ಕುರಿ ಖರೀದಿಗೆ ಜನ ಇಲ್ಲಿಗೆ ಅಗಮಿಸುತ್ತಾರೆ. ಇಲ್ಲಿನ ಕುರಿ ಮಾರುಕಟ್ಟೆಗೆ ವ್ಯವಸ್ಥಿತ ರೂಪ ನೀಡಬೇಕಾದ ಅಗತ್ಯವಿದೆ. ಕುರಿಗಳ ಬೇಡಿಕೆ ಸರಿದೂಗಿಸಲು ಬುಧವಾರದೊಂದಿಗೆ ಪ್ರತಿ ಭಾನುವಾರ ಕೂಡ ಕುರಿ ಸಂತೆ ನಡೆಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next