ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಕುರಿ, ಮೇಕೆ ಕಳ್ಳರ ಹಾವಳಿ ಮುಂದುವರಿದಿದ್ದು, ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಕುರಿ ಮತ್ತು ಮೇಕೆಯನ್ನುಹೊತ್ತೂಯ್ದಿರುವ ಘಟನೆ ಭಾನುವಾರ ರಾತ್ರಿ ತಾಲೂಕಿನಲಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಲಿಂಗನಹಳ್ಳಿ ಗ್ರಾಮದ ನಾಗೇಶ್ ಎನ್ನುವವರದೊಡ್ಡಿಯಲ್ಲಿದ್ದ ಎಂಟು ಮೇಕೆ ಮತ್ತು ಒಂದು ಕುರಿಯನ್ನು ದುಷ್ಕರ್ಮಿಗಳು ಹೊತ್ತೂಯ್ದಿದ್ದಾರೆ. ಈ ಕುರಿತು 112ಗೆಮಾಹಿತಿ ದೊರೆತು ಕೂಡಲೇ ಸ್ಥಳಕ್ಕೆ ದೌಡಾಯಿಸಿದರಾದರೂ ಆರೋಪಿಗಳು ಪರಾರಿಯಾಗಿದ್ದಾರೆ. ತಾಲೂಕಿನಲ್ಲಿ ಮೇಕೆ,ಕುರಿ ಹಿಂಡಿನ ಮೇಲೆ ಚಿರತೆ ದಾಳಿ ಪ್ರಕರಣ ಒಂದುಕಡೆಯಾದರೆ, ಮತ್ತೂಂದು ಕಡೆಯಲ್ಲಿ ಕಳ್ಳರ ಹಾವಳಿಯು ತೀವ್ರಗೊಂಡಿರುವುದು ಕುರಿ, ಮೇಕೆ ಸಾಕಾಣಿಕೆದಾರರುಚಿಂತೆಗೆ ಒಳಗಾಗುವಂತೆ ಮಾಡಿದೆ.
ಇನೋವಾ ಕಾರಿನಲ್ಲಿ ಪರಾರಿ: ಕೆಲ ದಿನಗಳ ಹಿಂದೆಯಷ್ಟೇ ಮೇಲಿನನಾಯಕರಂಡಹಳ್ಳಿ ಗ್ರಾಮದ ನರಸಪ್ಪ ಎಂಬುವವರ ಮೇಕೆ ದೊಡ್ಡಿಯ ಬಾಗಿಲಿನ ಬೀಗ ಮುರಿದು ನಾಲ್ಕುಮೇಕೆಗಳನ್ನು ಕಳವು ಮಾಡಲಾಗಿತ್ತು. ಈ ಕುರಿತಂತೆಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.ಆದರೆ, ಮರುದಿನ ರಾತ್ರಿ ಮತ್ತೆ ತೋಟದಲ್ಲಿ ಮೇಕೆ ಸಾಕಾಣಿಕೆಯ ಶೆಡ್‌ಗೆ ಕಳ್ಳರು ನುಗ್ಗಲು ಯತ್ನಿಸಿದ್ದರು. ಈಸಂದರ್ಭದಲ್ಲಿ ಮಚ್ಚು, ದೊಣ್ಣೆಗಳಿಂದ ಹಲ್ಲೆಗೆ ಮುಂದಾಗುತ್ತಿದ್ದಂತೆ ಕಳ್ಳರು ಪರಾರಿಯಾಗಿದ್ದರು. ಮರುದಿನಸಹ ಗ್ರಾಮದ ಅಂಚಿನ ಮಂಜುನಾಥ್ ಅವರಿಗೆ ಸೇರಿರುವ ಮೇಕೆ ದೊಡ್ಡಿಯ ಬಾಗಿಲಿನ ಬೀಗಿ ಒಡೆಯುತ್ತಿದ್ದ ಶಬ್ದಕ್ಕೆಮಂಜುನಾಥ್ ಮನೆಯಿಂದ ಹೊರಬರುತ್ತಿದ್ದಂತೆ ಕಳ್ಳರು ಇನೋವಾ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಖದೀಮರು ಪತ್ತೆಯಾಗಿಲ್ಲ :
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಆರು ತಿಂಗಳಿಂದ ಈಚೆಗೆ ವಿವಿಧ ಗ್ರಾಮಗಳಲ್ಲಿ ಕುರಿ, ಮೇಕೆ, ರಾಸುಗಳ ಕಳವುಪ್ರಕರಣಗಳು ನಡೆಯುತ್ತಲೇ ಇವೆ. ಆದರೆ, ಇದುವರೆಗೂ ಒಂದೇ ಒಂದು ಪ್ರಕರಣದಲ್ಲೂ ಕಳ್ಳರು ಪತ್ತೆಯಾಗಿಲ್ಲ. ಈಬಗ್ಗೆ ಪೊಲೀಸ್ ಅಧಿಕಾರಿಗಳು ಚುರುಕು ಕಾರ್ಯಾಚರಣೆನಡೆಸಬೇಕಿದೆ. ಯಾವ ಭಯವಿಲ್ಲದೇ ಮಧ್ಯರಾತ್ರಿ ಕಳ್ಳತನಕ್ಕೆದುಷ್ಕರ್ಮಿಗಳು ತಮ್ಮ ಕೈಚಳಕ ತೋರುತ್ತಿದ್ದು, ಇದರಿಂದ ರೈತರು ಆತಂಕದಲ್ಲಿಯೇ ರಾತ್ರಿ ಕಳೆಯುವಂತೆ ಮಾಡಿದೆ.