Advertisement

ಕುರಿ-ಮೇಕೆಗೆ ರೋಗ ನಿಯಂತ್ರಕ ಲಸಿಕ

04:26 PM Jul 08, 2018 | Team Udayavani |

ನಾರಾಯಣಪುರ: ಕೊಡೇಕಲ್‌ ಹೋಬಳಿ ವ್ಯಾಪ್ತಿಯಲ್ಲಿ ಜಿಲ್ಲೆಗಳ ರೂಪಾಂತರ ಎಂಬ ಕಾರ್ಯಕ್ರಮದಡಿ ಆಯ್ಕೆಯಾದ ರಾಯನಗೋಳ, ಬೋಮ್ಮನಗುಡ್ಡ ಹಾಗೂ ಯರಕಿಹಾಳ ಗ್ರಾಮಗಳಲ್ಲಿನ ಕುರಿ ಮತ್ತು ಮೇಕೆಗಳಿಗೆ ಪಿಪಿಆರ್‌ ರೋಗ ನಿಯಂತ್ರಕ ಲಸಿಕೆ ಹಾಕಲಾಗುತ್ತಿದೆ ಎಂದು ಪಶು ವೈದ್ಯ ಮಹಬೂಬಸಾಬ್‌ ಖಾಜಿ ಹೇಳಿದರು.

Advertisement

ಕೊಡೇಕಲ್‌ ಹೋಬಳಿ ವ್ಯಾಪ್ತಿಯ ರಾಯನಗೋಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಗಳ ರೂಪಾಂತರ ಕಾರ್ಯಕ್ರಮದಡಿ ಪಿಪಿಆರ್‌ ರೋಗ ನಿಯಂತ್ರಣ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದೆ. 

ದೇಶದಲ್ಲಿನ ಅತ್ಯಂತ ಹಿಂದುಳಿದ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಜಿಲ್ಲೆಗಳ ರೂಪಾಂತರ ಎಂಬ ಮಹತ್ವಾಕಾಂಕ್ಷಿ ಕಾರ್ಯಕ್ರಮದಡಿ ರಾಜ್ಯದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಆ ಎರಡು ಜಿಲ್ಲೆಗಳಲ್ಲಿ ಗುರುತಿಸಲಾಗಿರುವ ಆಯ್ದ ಗ್ರಾಮಗಳಲ್ಲಿನ ಎಲ್ಲ ಕುರಿ ಮತ್ತು
ಮೇಕೆಗಳಿಗೆ ಮುಂಜಾಗೃತ ಕ್ರಮವಾಗಿ ಪಿಪಿಆರ್‌ ರೋಗ ನಿಯಂತ್ರಕ ಲಸಿಕೆಯನ್ನು ಕಡ್ಡಾಯವಾಗಿ ಹಾಕಲಾಗುತ್ತಿದೆ ಎಂದು ಹೇಳಿದರು. ಅದೇ ರೀತಿ ಈ ಹಿಂದೆಯೂ ಕೂಡ ಕಾಲು ಬಾಯಿ ರೋಗ ನಿಯಂತ್ರಣಕ್ಕೆ ನಾರಾಯಣಪುರ ಪಶು ಆಸ್ಪತ್ರೆ ವ್ಯಾಪ್ತಿಯ ಗ್ರಾಮಗಳಲ್ಲಿನ ರೈತರ ರಾಸುಗಳಿಗೆ
ಕಡ್ಡಾಯವಾಗಿ ರೋಗ ನಿಯಂತ್ರಕ ಎಫ್‌ಎಂಡಿ ಲಸಿಕೆ ಹಾಕಲಾಗಿದೆ.

ಮುಂಬರುವ ದಿನಗಳಲ್ಲಿ ಕೊಡೇಕಲ್‌ ಹೋಬಳಿ ವ್ಯಾಪ್ತಿಯಲ್ಲಿ ಆಯ್ಕೆಯಾದ ರಾಯನಗೋಳ, ಬೋಮ್ಮನಗುಡ್ಡ ಹಾಗೂ ಯರಕಿಹಾಳ ಮೂರು ಗ್ರಾಮಗಳಲ್ಲಿನ ಹೆಚ್ಚು ಹಾಲು ನೀಡುವ ಸ್ಥಳೀಯ ತಳಿಗಳ ಅಭಿವೃದ್ಧಿಗಾಗಿ ಸಂತಾನೋತ್ಪಾದನೆಗೆ ಅರ್ಹವಾದ ದೇಶಿ ರಾಸುಗಳಾದ ಎಮ್ಮೆ, ಆಕಳುಗಳಿಗೆ ಕೃತಕ ಗರ್ಭಧಾರಣೆ ಮಾಡಲು ಇಲಾಖೆ ನಿರ್ದೇಶನ ನೀಡಿದ್ದು, ಆಯ್ಕೆಯಾಗಿರುವ ಗ್ರಾಮಗಳ ವ್ಯಾಪ್ತಿಯ ಎಮ್ಮೆ, ಆಕಳುಗಳಿಗೆ ಕೃತಕ ಗರ್ಭಧಾರಣೆ ಮಾಡಲಾಗುವುದು. 

ಆಯಾ ಗ್ರಾಮದ ರೈತರು ತಮ್ಮ ವ್ಯಾಪ್ತಿಯಲ್ಲಿ ಕಾರ್ಯಕ್ರಮವನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಸಹಕಾರ ನೀಡುವ ಮೂಲಕ ಯೋಜನೆ ಸದುಪಯೋಗ ಪಡೆಯಬೇಕು ಎಂದು ಹೇಳಿದರು. ಗ್ರಾಮದ ರೈತರು ಸೇರಿದಂತೆ ಪಶು ಆಸ್ಪತ್ರೆ ಸಿಬ್ಬಂದಿ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next