Advertisement

ಕುರಿ ರಫ್ತು ಯೋಜನೆ ರದ್ದು

12:31 PM Jul 02, 2018 | Team Udayavani |

ನಾಗ್ಪುರ: ಜೈನ ಸಮುದಾಯ ಪ್ರಬಲವಾಗಿ ಆಕ್ಷೇಪಿಸಿದ್ದರಿಂದ ನಾಗ್ಪುರ ವಿಮಾನ ನಿಲ್ದಾಣದಿಂದ ಯುಎಇಗೆ ಕುರಿ, ಆಡುಗಳ ರಫ್ತು ಪ್ರಸ್ತಾವ ರದ್ದು ಮಾಡಲಾಗಿದೆ. ರಾಜ್ಯಸಭಾ ಸದಸ್ಯ ಡಾ| ವಿಕಾಸ್‌ ಮಹಾತ್ಮೆ  ಈ ಯೋಜನೆಗೆ ಆಸಕ್ತಿ ತೋರಿಸಿದ್ದರು. ಇದರಿಂದಾಗಿ ಸ್ಥಳೀಯ ರೈತರಿಗೆ ಆದಾಯ ಜತೆಗೆ ಸ್ವಂತ ಉದ್ಯೋಗಕ್ಕೂ ದಾರಿ ಮಾಡಿ ಕೊಟ್ಟಂತಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದರು. ಆದರೆ ಜೈನ ಸಮುದಾಯದ ನಾಯಕರು ಅದನ್ನು  ಪ್ರತಿಭಟಿಸಿದ್ದರು. ಮಹಾರಾಷ್ಟ್ರ ಸಿಎಂ ದೇವೇಂದ್ರ ಫ‌ಡ್ನವೀಸ್‌ ಮತ್ತು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸುವಂತೆ ಮಹಾತ್ಮೆಗೆ ಸೂಚನೆ ನೀಡಿದ್ದರು. ಹೀಗಾಗಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next