Advertisement

ಟಗರು ಸಾಕಾಣಿಕೆಯಿಂದ ಖುಲಾಯಿಸಿದ ಅದೃಷ್ಟ

01:42 PM Nov 27, 2021 | Team Udayavani |

ಮುದಗಲ್ಲ: ಕೃಷಿಯಲ್ಲಿ ನಷ್ಟ ಅನುಭವಿಸಿದ ತಂದೆ-ತಾಯಿ ನೋಡಿದ ಮಗ ಟಗರು ಸಾಕಾಣಿಕೆಯನ್ನೇ ಉಪ ಕಸಬು ಮಾಡಿಕೊಳ್ಳುವ ಮೂಲಕ ವರ್ಷಕ್ಕೆ ಸುಮಾರು 10 ಲಕ್ಷ ರೂ. ಸಂಪಾದಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ.

Advertisement

ಇದು ಪಟ್ಟಣ ಸಮೀಪದ ಹೆಗ್ಗಾಪುರ ತಾಂಡಾ ನಿವಾಸಿ ಸುರೇಶ ಬಾಪಣ್ಣ ಅವರ ಯಶೋಗಾಥೆ. ಸುರೇಶ ಆರಂಭದಲ್ಲಿ 30 ಟಗರು ಮರಿ ಸಾಕಾಣಿಕೆ ಮಾಡಿ 6 ತಿಂಗಳಲ್ಲಿ ಎರಡು ಲಕ್ಷ ಲಾಭ ಪಡೆದಿದ್ದ. ನಂತರ ತಮ್ಮ ಹೊಲದಲ್ಲಿಯೇ ಬೃಹತ್‌ ತಗಡಿನ ಶೆಡ್‌ ನಿರ್ಮಿಸಿ 100ರಿಂದ 150 ಟಗರು ಮರಿ ಸಾಕುತ್ತಿದ್ದಾನೆ.

ಕಳೆದ ಎರಡು ವರ್ಷದಿಂದ ಪ್ರತಿ ಆರು ತಿಂಗಳಿಗೆ 100-120 ಟಗರು ಮರಿಗಳನ್ನು ಸಾಕಾಣಿಕೆ ಮಾಡಿ ಆರು ತಿಂಗಳಿಗೊಮ್ಮೆ ಮಾರಾಟ ಮಾಡುತ್ತಾನೆ. 5ರಿಂದ 6 ಸಾವಿರ ರೂ.ಗಳಂತೆ ಟಗರು ಮರಿ ಖರೀದಿಸಿ ಆರು ತಿಂಗಳ ನಂತರ 14 ರಿಂದ 15 ಸಾವಿರಕ್ಕೆ ಮಾರುವ ಮೂಲಕ ಕೈ ತುಂಬಾ ಹಣ ಪಡೆಯುತ್ತಿದ್ದಾನೆ.

ಟಗರಿನ ಮರಿಗಳಿಗೆ ಶೇಂಗಾ, ತೊಗರಿ ಮೇವು, ಹಸಿ-ಒಣ ಮೇವಿನ ಜತೆ ಬೆಳಗ್ಗೆ ಮೆಕ್ಕೆಜೋಳ ನೀಡಲಾಗುತ್ತದೆ. ವೈದ್ಯರ ಸಲಹೆ ಪಡೆದು ಕುರಿ, ಮೇಕೆಗಳಿಗೆ ಉತ್ತಮ ಆಹಾರ, ಔಷಧ ಮತ್ತು ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿದರೆ ಎಂತಹ ವಾತಾವರಣದಲ್ಲೂ ಟಗರು ಸಾಕಬಹುದು ಎನ್ನುತ್ತಾರೆ ನಾಗಲಾಪುರ ಪಶು ಆಸ್ಪತ್ರೆ ವೈದ್ಯ ಪ್ರಭು.

ಇದನ್ನೂ ಓದಿ:ಒಮಿಕ್ರಾನ್ ಭೀತಿ ; ವಿಮಾನ ಸಂಚಾರ ಸ್ಥಗಿತಗೊಳಿಸಲು ಪ್ರಧಾನಿಗೆ ಕೇಜ್ರಿವಾಲ್ ಮನವಿ

Advertisement

ಒಟ್ಟಿನಲ್ಲಿ ಕೊರೊನಾ ಸಂಕಷ್ಟದಲ್ಲಿ ಕೆಲಸಗಳೇ ಸಿಗದ ಪರಿಸ್ಥಿತಿ ಉಂಟಾಗಿದ್ದು, ಸುರೇಶ ಟಗರು ಮರಿ ಮೂಲಕ ಜೀವನದಲ್ಲಿ ಯಶಸ್ಸು ಕಾಣಲು ಹೊಸ ಮಾರ್ಗ ಕಂಡುಕೊಂಡಿದ್ದಾನೆ.

ಪ್ರತಿ ಟಗರು ಮರಿಗೆ 1ರಿಂದ 2 ಸಾವಿರ ರೂ. ಖರ್ಚು ಬರುತ್ತದೆ. ಹೊಲಕ್ಕೆ ಕೊಟ್ಟಿಗೆ ಗೊಬ್ಬರ ಸಿಗುತ್ತದೆ. ಇದನ್ನು ರೈತರಿಗೆ ಮಾರಿದರೂ ಪ್ರತಿ ಟ್ರ್ಯಾಕ್ಟರ್‌ಗೆ 6 ಸಾವಿರ ರೂ. ದೊರೆಯುತ್ತದೆ. -ಸುರೇಶ, ಟಗರು ಮರಿ ಸಾಕಾಣಿಕೆದಾರರು

ನಿರುದ್ಯೋಗಿ ಯುವಕನಿಗೆ ಕುರಿ ಸಾಕಾಣಿಕೆ ಮಾಡಲು ಸಲಹೆ ನೀಡಿದ್ದೆ. ಆತ ತನ್ನ ಛಲ ಹಾಗೂ ಪರಿಶ್ರಮದಿಂದ ಬದುಕು ಕಟ್ಟಿಕೊಂಡಿದ್ದಾನೆ. -ಟಿ.ಆರ್‌. ನಾಯ್ಕ, ನಿವೃತ್ತ ಡಿಐಜಿಪಿ, ಆಶಿಹಾಳ ತಾಂಡಾ

-ದೇವಪ್ಪ ರಾಠೊಡ

Advertisement

Udayavani is now on Telegram. Click here to join our channel and stay updated with the latest news.

Next