ಆನೇಕಲ್: ಭಾನುವಾರ ಸಂಜೆ ಸುರಿದ ಭಾರೀ ಬಿರುಗಾಳಿ ಮಳೆಯಿಂದಾಗಿ ತಾಲೂಕಿನ ಅತ್ತಿಬೆಲೆ ಗಡಿಯಲ್ಲಿ ಪೊಲೀಸರು ಹಾಗೂ ಆರೋಗ್ಯ ಇಲಾಖೆ ತಪಾಸಣೆಗೆಂದು ಹಾಕಿದ್ದ ಶೆಡ್‌ಗಳು ಹಾರಿಹೋಗಿವೆ. ತಮಿಳುನಾಡಿನಿಂದ ಬರುವ ವಾಹನ ತಪಾ ಸಣೆಗೆ ಹಾಗೂ ಜನರನ್ನು ಚೆಕ್ ಮಾಡಿ ಕಳುಹಿಸಲು ಅತ್ತಿಬೆಲೆ ಟೋಲ್ ಬಳಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗಿತ್ತು.
ತಪಾಸಣೆಗೆ ಬಳಸಲು ಬೇಕಾದ ವಸ್ತುಗಳನ್ನು ಈ ಶೆಡ್ ಒಳಗೆ ಇಡಲಾಗಿತ್ತು. ಸಂಜೆ ಸುರಿದ ಭಾರೀ ಬಿರುಗಾಳಿ ಗುಡುಗು ಸತ ಮಳೆಯಿಂದಾಗಿ ಶೆಡ್‌ಗಳು ಗಾಳಿಗೆ ಹಾರಿಹೋಗಿ ತಲೆಕೆಳಗಾಗಿ ಬಿದ್ದಿದ್ದವು. ಗಾಳಿಮಳೆ ಬಂದಿದ್ದರಿಂದ ಸೆಡ್ಡು ಒಳಗೆ ಕುಳಿತಿದ್ದ ಪೊಲೀಸರು ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಹೊರಗೆ ಬಂದಿದ್ದರಿಂದ ಅವಘಡ ಸಂಭವಿಸಿಲ್ಲ.
ಬಿರುಗಾಳಿಯೊಂದಿಗೆ ಭಾರೀ ಮಳೆ ಸುರಿದಿದ್ದರಿಂದ ಒಳಗಿದ್ದ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಂಗಡಿ ಮುಂಗಟ್ಟು ಎದುರು ನಿಂತು ಆಸರೆ ಪಡೆ ದರು. ಸ್ಥಳೀಯವಾಗಿ ವಾಹನದಲ್ಲಿ ಬರುತ್ತಿದ್ದ ಕೆಲ ವರು ಪೊಲೀಸರಿಗೆ ಹಾಗೂ ಆರೋಗ್ಯ ಇಲಾಖೆಯ ವರೆಗೆ ಸಹಾಯ ಮಾಡಿ ಮಾನವೀಯತೆ ಮೆರೆ ದರು. ಮಳೆ ನಿಂತ ನಂತರ ಶೆಡ್ ನಿಲ್ಲಿಸಿಕೊಂಡು ಅದರಲ್ಲೇ ಆಶಾ ಕಾರ್ಯಕರ್ತೆಯರು ತಮ್ಮ ಕೆಲಸ ಮಾಡಿದರು. ಭಾರಿ ಗಾಳಿಗೆ ಕುಳಿತುಕೊಳ್ಳಲು ಹಾಕಿದ್ದ ಕುರ್ಚಿಗಳು ಹೆದ್ದಾರಿಗೆ ಬಂದು ಬಿದ್ದಿದ್ದವು.
ಆನೇಕಲ್ ಪಟ್ಟಣ ಅತ್ತಿಬೆಲೆ-ಸರ್ಜಾಪುರ ಭಾಗ ದಲ್ಲಿ ಭಾರೀ ಮಳೆಯಾಗಿದ್ದರಿಂದ ಅಂಗಡಿಗಳ ಮುಂಗಟ್ಟುಗಳಲ್ಲಿ ಹಾಕಿದ್ದ ನಾಮಪಲಕಗಳು ಗಾಳಿಗೆ ಹಾರಿಹೋಗಿದ್ದವು. ಕರ್ನಾಟಕದ ಗಡಿ ಸೋಲೂರು ಭಾಗದಲ್ಲಿ ಮರಗಳ ಕೊಂಬೆಗಳು ಮುರಿದು ಬಿದ್ದಿದ್ದವು. ಅಲ್ಲಲ್ಲಿ ಮರಗಳು ಧರೆಗೆ ಉರುಳಿದ್ದು, ಸಂಜೆ ಸುರಿದ ಮಳೆಯಿಂದಾಗಿ ಆನೇ ಕಲ್ ತಾಲೂಕಾದ್ಯಂತ ಮರಗಳು ಧರೆಗುರುಳಿವೆ. ಕಾರಣವಿಲ್ಲದೆ ರಸ್ತೆಯಲ್ಲಿ ಓಡಾಡುತ್ತಿದ್ದ ಜನ ಮಳೆಯಿಂದ ಮನೆ ಸೇರಿದರು.