ಮಲಪ್ಪುರಂ: ದುಬಾೖನಲ್ಲಿ ವೈದ್ಯಕೀಯ ವೃತ್ತಿಯಲ್ಲಿರುವ ಕಲ್ಲಿ ಕೋಟೆಯ ಕಡಲುಂಡಿ ಮೂಲದ ಶಬಾನಾ ಸುಲೈ ಮಾನ್ (27) ಎಂಬ ಮುಸ್ಲಿಂ ಸಮು ದಾಯದ ಯುವತಿ ಇನ್ನೀಗ ಆನೆಗಳಿಗೆ ತರಬೇತಿ ನೀಡುವ ಮಾವುತರಾಗಲಿದ್ದಾರೆ. ಈ ಮೂಲಕ ಅವರು ಕೇರಳದ ಮೊದಲ ಮುಸ್ಲಿಂ ಮಹಿಳಾ ಮಾವುತ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಮನಿಶೆÏàರಿ ರಾಜೇಂದ್ರ ಎಂಬ ಹೆಸರಿನ ಆನೆಯನ್ನು ಶಬಾನಾ ಸುಲೈ ಮಾನ್‌ಗೆ ನಿಯಂತ್ರಿಸಲು ಸಾಧ್ಯವಾಗುತ್ತಿದೆ. ಪ್ರಾಣಿಗಳ ಬಗೆಗಿನ ಪ್ರೀತಿ ಅವರ ಕುಟುಂಬದಿಂದಲೇ ಬಂದಿದೆ. ಅವರ ಅಜ್ಜ ಕೇರಳದ ಮೊದಲ ಸರ್ಕಸ್ ಕಂಪೆನಿ “ಗ್ರೇಟ್ ಮಲಬಾರ್ ಸರ್ಕಸ್’ ಅನ್ನು ಹೊಂದಿದ್ದರು. ಸದ್ಯ ಶಬಾನಾ ಮೊದಲ ಹಂತದ ತರಬೇತಿಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದ್ದಾರೆ.
ಪಾಲಕ್ಕಾಡ್ ಜಿಲ್ಲೆಯ ಓಟ್ಟಪ್ಪಾಲಂ ಸಮೀಪ ಇರುವ ವರಿಕ್ಕಶೆÏàರಿ ಮನಾದಲ್ಲಿ ಈ ತರಬೇತಿ ನಡೆದಿದೆ. ಮೊದಲು ಅವರು ಆನೆಯ ತರಬೇತಿ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದು ಮನಿಶೆÏàರಿ ಹರಿದಾಸ್ ಎಂಬವರಲ್ಲಿ. 3 ಆನೆಗಳ ಮಾಲಕರಾಗಿರುವ ಅವರು ಶಬಾನಾರ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪ ಡಿಸಿ, ಬೆಂಬಲ-ತರಬೇತಿ ನೀಡಿ ದರು.
ಆರಂಭದಲ್ಲಿ ಅವರು ಆನೆಗಳ ಬಗ್ಗೆ ನಡೆಸಲಾಗಿರುವ ಸಂಶೋಧನಾತ್ಮಕ ಲೇಖನ-ವರದಿಗಳನ್ನು ಅಧ್ಯಯನ ಮಾಡಿದರು. ಅವುಗಳ ಬಗ್ಗೆ ಖುದ್ದಾಗಿ ತರಬೇತಿ ಪಡೆದಾಗ ಮಾತ್ರ ಸರಿಯಾದ ಅಧ್ಯಯನ ಪೂರ್ತಿಯಾದೀತೆಂದು ತಿಳಿದ ಶಬಾನಾ, ಅನಂತರ ಹರಿದಾಸನ್‌ರನ್ನು ಸಂಪರ್ಕಿಸಿದ್ದಾರೆ.
“ದೇಗುಲಗಳಲ್ಲಿ ಉತ್ಸವಗಳ ವೇಳೆ ಆನೆಗಳನ್ನು ನಿಭಾಯಿಸುವುದರ ಬಗ್ಗೆ ತರಬೇತಿ ಪಡೆ ಯಲಿದ್ದೇನೆ. ಇಂಥ ಅವಕಾಶಗಳಿಗಾಗಿ ನಿರೀಕ್ಷೆಯಲ್ಲಿದ್ದೇನೆ’ ಎಂದು ಅವರು ಹೇಳಿದ್ದಾರೆ.