Advertisement

ನಗರದ ಇಂದಿರಾ ಕ್ಯಾಂಟೀನ್‌ಗೆ ಇಸ್ಕಾನ್‌ ಜತೆ ಒಪ್ಪಂದವಾಗಿಲ್ಲ

12:11 PM Mar 31, 2017 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ “ಇಂದಿರಾ’ ಕ್ಯಾಂಟೀನ್‌ಗೆ ಆಹಾರ ಪೂರೈಸಲು ಇಸ್ಕಾನ್‌ ಜತೆ ಯಾವುದೇ ರೀತಿಯ ಒಪ್ಪಂದ ಮಾಡಿಕೊಂಡಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್‌ ಸ್ಪಷ್ಟಪಡಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, “ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 198 ವಾರ್ಡ್‌ಗಳಲ್ಲಿ ಆರಂಭಿಸಲು ಉದ್ದೇಶಿಸಿರುವ “ಇಂದಿರಾ ಕ್ಯಾಂಟೀನ್‌’ಗಳಿಗೆ ಆಹಾರ ಪೂರೈಸಲು ಇಸ್ಕಾನ್‌ ಜತೆ ಇನ್ನೂ ಯಾವುದೇ ರೀತಿಯ ಒಪ್ಪಂದವೂ ಮಾಡಿಕೊಂಡಿಲ್ಲ,” ಎಂದು ಹೇಳಿದರು.

“ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಮಾಡುವ ಕುರಿತು ಇಸ್ಕಾನ್‌ ಜತೆ ಚರ್ಚಿಸಿದ್ದು ನಿಜ. ಆದರೆ, ಅವರು ಒಂದೇ ಕಡೆ ಆಹಾರ ಸಿದ್ಧಪಡಿಸಿ ಎಲ್ಲ 198 ಕ್ಯಾಂಟೀನ್‌ಗಳಿಗೆ ಪೂರೈಸುವುದು ಕಷ್ಟವಾಗುತ್ತದೆ ಎಂದು ತಿಳಿಸಿದರು. ಜತೆಗೆ ಇಸ್ಕಾನ್‌ನವರು ಆಹಾರದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಬಳಕೆ ಮಾಡುವುದಿಲ್ಲ.

ಹೀಗಾಗಿ, ಅವರ ಜತೆ ಒಪ್ಪಂದ ಬೇಡ ಎಂದು ಶಾಸಕರು ಸಲಹೆ ನೀಡಿದ್ದಾರೆ. ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬರುವ ವಿದ್ಯಾರ್ಥಿಗಳು, ಕೂಲಿ ಕೆಲಸ ಮಾಡುವವರು, ರಿûಾ ಚಾಲಕರು, ದುಡಿಯುವ ವರ್ಗದವರಿಗೆ ರಿಯಾಯಿತಿ ದರದಲ್ಲಿ  ಆಹಾರ ನೀಡುವ ಉದ್ದೇಶದಿಂದ ಈ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುತ್ತಿದೆ,” ಎಂದು ತಿಳಿಸಿದರು.

“ಬೆಂಗಳೂರಿನಲ್ಲಿರುವ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ತಲಾ ಒಂದು ಕ್ಯಾಂಟೀನ್‌ ಗಳನ್ನು ಆರಂಭಿಸಿ, ಆಯಾ ಕ್ಷೇತ್ರಗಳಲ್ಲಿರುವ ವಾರ್ಡ್‌ಗಳಿಗೆ ಅಲ್ಲಿಂದಲೆ ಆಹಾರ ಪೂರೈಸಲು ನಿರ್ಧರಿಸಲಾಗಿದೆ. ತಮಿಳುನಾಡಿಗಿಂತ ನಮ್ಮ ರಾಜ್ಯದಲ್ಲಿ ಗುಣಮಟ್ಟದ ಆಹಾರವನ್ನು ಈ ಕ್ಯಾಂಟೀನ್‌ಗಳಲ್ಲಿ ಪೂರೈಕೆ ಮಾಡಲಾಗುವುದು,” ಎಂದರು.

Advertisement

250 ಮಂದಿಗಷ್ಟೇ ಊಟ? 
“ಚೈನ್ನೆನಲ್ಲಿ ಕಾರ್ಯನಿರ್ವಹಿಸುತ್ತಿರುವ “ಅಮ್ಮಾ ಕ್ಯಾಂಟೀನ್‌’ನಲ್ಲಿ ಊಟ -ತಿಂಡಿ ಪೂರೈಕೆ 250 ಜನರಿಗೆ ಮಿತಿ ಹೇರಲಾಗಿದೆ. ಅದೇ ರೀತಿ ನಾವು ಮಿತಿಯನ್ನು ನಿಗದಿಗೊಳಿಸಲು ಉದ್ದೇಶಿಸಿದ್ದೇವೆ. ಒಂದು ಕ್ಯಾಂಟೀನ್‌ಗೆ 250 ಜನರನ್ನು ಮಿತಿಗೊಳಿಸಿದರೆ, 198 ಕ್ಯಾಂಟೀನ್‌ಗಳಿಗೆ 49,500 ಮಂದಿ ಬರಬಹುದು ಎಂದು ಅಂದಾಜು ಮಾಡಲಾಗಿದೆ,” ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್‌ ತಿಳಿಸಿದ್ದಾರೆ.  

ಕ್ಯಾಂಟೀನ್‌ಗಳು ಪ್ರಾರಂಭವಾದ ನಂತರ ನಮಗೆ ಗ್ರಾಹಕರ ನಿಖರ ವಿವರ ಲಭ್ಯವಾಗುತ್ತದೆ. ಆರಂಭಿಕವಾಗಿ ರಾಜ್ಯ ಸರ್ಕಾರ‌ವು ಈ ಕ್ಯಾಂಟೀನ್‌ಗಳಿಗೆ 100 ಕೋಟಿ ರೂ.ಗಳ ಅನುದಾನವನ್ನು ಒದಗಿಸಿದೆ. ಸದ್ಯದಲ್ಲೇ  ಹೋಟೆಲ್‌ ಮಾಲೀಕರ ಸಂಘ ಹಾಗೂ ಸಂಘ ಸಂಸ್ಥೆಗಳ ಜೊತೆ ಸಭೆ ನಡೆಸಿ ಅಂತಿಮ ರೂಪು-ರೇಷೆ ಸಿದ್ಧಪಡಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next