ಹೊಸದಿಲ್ಲಿ: ಪ.ಜಾತಿಗಳ ಒಳವರ್ಗೀಕರಣ ಮತ್ತು ಒಳಮೀಸಲಾತಿಗೆ ಸಂಬಂಧಿಸಿ ಇತ್ತೀಚೆಗೆ ಸುಪ್ರೀಂ ಕೋರ್ಟ್
ನೀಡಿದ್ದ ತೀರ್ಪು ಜಾರಿಗೆ ಬರಬಾರದು ಎಂದು ಆಗ್ರಹಿಸಿ ದಲಿತ ಹಾಗೂ ಆದಿವಾಸಿ ಸಮುದಾಯಗಳ ರಾಷ್ಟ್ರೀಯ ಒಕ್ಕೂಟ ಆ.21ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಒಳಮೀಸಲಾತಿಗೆ ಸಂಬಂಧಿಸಿ ನಿರ್ಧಾರ ಕೈಗೊ ಳ್ಳುವ ಅಧಿ ಕಾರ ರಾಜ್ಯ ಸರಕಾರಗಳಿಗೆ ಇವೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪು ಸಂವಿಧಾನ ನೀಡಿರುವ ಹಕ್ಕುಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಒಕ್ಕೂಟ ಅಭಿ ಪ್ರಾ ಯ ಪ ಟ್ಟಿದೆ.
ದತ್ತಾಂಶ ಬಿಡುಗಡೆಗೆ ಮನವಿ: ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ಸರಕಾರಿ ನೌಕರರ ಜಾತಿ ದತ್ತಾಂಶ ವನ್ನು ಪ್ರಧಾನಿ ಮೋದಿ ಶೀಘ್ರ ಬಿಡುಗಡೆ ಮಾಡಬೇಕು. ಆ ಮೂಲಕ ಕೇಂದ್ರ ಸರಕಾರದಲ್ಲಿ ಈ ಪಂಗಡಗಳ ಪ್ರಾತಿನಿಧ್ಯದ ಸರಿಯಾದ ಚಿತ್ರಣ ಬಹಿರಂಗವಾಗಬೇಕು ಎಂದು ಒಕ್ಕೂಟವು ಆಗ್ರಹಿಸಿದೆ. ಈ ವಿಚಾರವಾಗಿ ಸಂಬಂಧಿತ ವ್ಯಕ್ತಿಗಳ ಜತೆ ಚರ್ಚಿಸದೆ, ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ವಜಾಗೊಳಿಸಬೇಕು ಎಂದೂ ಒಕ್ಕೂಟ ಆಗ್ರಹಿಸಿದೆ.