Advertisement

ಶ್ಯಾಮಸುಂದರ ದಕ್ಷಿಣ ಭಾರತದ ಅಂಬೇಡ್ಕರ್‌: ತಾರಾರಾಮ ಮೇಹ್ನಾ

03:51 PM Jan 11, 2021 | Team Udayavani |

ಬೀದರ: ಜನಪರ ಹೋರಾಟಗಾರರಾಗಿದ್ದ ಬಿ. ಶ್ಯಾಮಸುಂದರ ಅವರು ದಲಿತ ಚಳವಳಿಯ ನಾಯಕರಾಗಿರದೇ ಮೂಲ ಭಾರತಿಯರ ನಾಯಕಾರಾಗಿದ್ದರು. ಅವರು ದಕ್ಷಿಣ ಭಾರತದ ಅಂಬೇಡ್ಕರ್‌ ಆಗಿದ್ದಾರೆ ಎಂದು ರಾಷ್ಟ್ರೀಯ ಮೂಲ ನಿವಾಸಿ ಸಂಘದ ಅಧ್ಯಕ್ಷ ತಾರಾರಾಮ ಮೇಹ್ನಾ ಬಣ್ಣಿಸಿದರು.

Advertisement

ನಗರದ ರಂಗ ಮಂದಿರದಲ್ಲಿ ರವಿವಾರ ಬಿ. ಶ್ಯಾಮಸುಂದರ ಅವರ 112ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶ್ಯಾಮಸುಂದರ ಅವರು ಉತ್ತರ ಪ್ರದೇಶದಲ್ಲಿ 1968ರಲ್ಲಿ ನಡೆಸಿದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮುಸ್ಲಿಂರು ಭವಿಷ್ಯದಲ್ಲಿ ದಲಿತರಂತೆ ಶೋಷಣೆಗೊಳಗಾಗಲಿದ್ದಾರೆ ಎಂದು ನುಡಿದಿದ್ದ ಭವಿಷ್ಯ ಈಗ ನಿಜವಾಗುತ್ತಿದೆ ಎಂದರು.

ಶ್ಯಾಮಸುಂದರರ ಸೋದರಳಿಯ ನರಸಿಂಗರಾವ ಹೈದರಾಬಾದ್‌ ಕಾರ್ಯಕ್ರಮ ಉದ್ಘಾಟಿಸಿ, ಮೂಲ ಭಾರತಿಯರು ಮೂಢನಂಬಿಕೆಗಳಿಗೆ ಅಂಟಿಕೊಂಡಿರುವ ಕಾರಣ ಇಂದಿಗೂ ಶೋಷಣೆಗೆ ಒಳಗಾಗುತ್ತಿದ್ದಾರೆ. ಮೂಲ ಭಾರತಿಯರು ಮೂಢನಂಬಿಕೆಗಳಿಂದ ದೂರವಿದ್ದು, ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಜುಲೆ ಕಾರ್‌ ಹಾಸ್ಮಿ ಮಾತನಾಡಿ, ಶೇರ್‌-ಎ-ದಖನ್‌ ಎಂಬ ಬಿರುದು ಪಡೆದಿರುವ ಶ್ಯಾಮಸುಂದರ ಅವರು ಶೋಷಿತ ವರ್ಗಗಳ ಏಕತೆ ಹಾಗೂ ಏಳ್ಗೆಗಾಗಿ ಹೋರಾಟ ಮಾಡಿದ ಮಹಾನ್‌ ವ್ಯಕ್ತಿಯಾಗಿದ್ದರು. ಕಾಂಗ್ರೆಸ್ಸಿನ ಅನೇಕ ಪ್ರಮುಖರು ಅವರ ಗರಡಿಯಲ್ಲಿ ಪಳಗಿದರಾಗಿದ್ದಾರೆ. ಭಾಲ್ಕಿ ದ್ವಿಸದಸ್ಯ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ, ನಿಜಾಂ ಆಡಳಿತದಲ್ಲಿ ಸಂಪುಟ ದರ್ಜೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಅವರು ಲೋಕಸಭೆ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು. ಆದರೆ, ಅಂಬೇಡ್ಕರರವರಿಗೆ ಕಾಂಗ್ರೆಸ್‌ ಸೋಲಿಸಿದಂತೆ ಶ್ಯಾಮಸುಂದರ ಅವರನ್ನು ಸೋಲಿಸಲು ಪ್ರಧಾನಿ ನೆಹರು ಅವರು ಬೀದರಗೆ ಆಗಮಿಸಿ ಚುನಾವಣಾ ಪ್ರಚಾರ ನಡೆಸಿದ್ದರು ಎಂದು ಹೇಳಿದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರೇಮಸಾಗರ ದಾಂಡೇಕರ್‌, ಸಮಾಂತರ ಭಾರತ ನಿರ್ದೇಶಕ ಎಸ್‌. ವರುಣಕುಮಾರ, ದಾದಾಸಾಹೇಬ್‌ ಕಾನ್ಸಿರಾಮರ ಸೋದರಳಿಯ ಪ್ರಭಜಿತಸಿಂಗ್‌, ಕಲಬುರಗಿ ವಿವಿ ಪ್ರಾಧ್ಯಾಪಕ ವಿ.ಟಿ ಕಾಂಬಳೆ, ದಲಿತ ಮುಖಂಡ ಅನಿಲಕುಮಾರ ಬೆಲ್ದಾರ, ಪ್ರಕಾಶ ಮೂಲಭಾರತಿ, ಬಿ.ಬಿ ಮೇಶ್ರಂ ಅವರು
ಮಾತನಾಡಿದರು.

Advertisement

ಈ ಸಂದರ್ಭದಲ್ಲಿ ಸೈಯ್ಯದ್‌ ಮಕ್ಸೂದ್‌ ಮತ್ತು ವರುಣಕುಮಾರ ಅವರು ಸಂಗ್ರಹಿಸಿರುವ ಉರ್ದು ಭಾಷೆಯಿಂದ ಕನ್ನಡಕ್ಕೆ ಅನುವಾದಿತ ಬಿ. ಶ್ಯಾಮಸುಂದರ ಪುಸ್ತಕ, ಮೀನಿ ಡೈರಿ, ಕ್ಯಾಲಿಂಡರನ್ನು ಬಿಡುಗಡೆ ಮಾಡಲಾಯಿತು. ಜನ್ಮ ದಿನಾಚರಣೆ ಸಮಿತಿಯ ಅಧ್ಯಕ್ಷ ಮಹಾದೇವ ಕಾಂಬಳೆ ಮಾತನಾಡಿದರು.

ಬಾಮ್‌ ಸೇಫ್‌ ರಾಷ್ಟ್ರೀಯ ಅಧ್ಯಕ್ಷ ಬಿ.ಡಿ. ಬೋರಕರ್‌, ಹೈದ್ರಾಬಾದನ ಎಂಎಲ್‌ಸಿ ಅಮೀನ್‌ ಜಾಫ್ರಿ, ಮಾಜಿ ಎಂಎಲ್‌ಸಿ ಮಾರುತಿ ಡಿ. ಮಾಲೆ, ಅಣ್ಣಾಭಾವು ಸಾಠೆರವರ, ಮರಿಮೊಮ್ಮಗ ವಿಲಾಸ ಸಾಠೆ, ಮಣಿರಾಮ್‌, ಮಾವಳ್ಳಿ ಶಂಕರ, ಸೈಯದ್‌ ಮಕ್ಸೂದ್‌, ಪ್ರೊ.| ಅನ್ವರ್‌ ಖಾನ್‌, ವಿಠಲದಾಸ ಪ್ಯಾಗೆ, ರಮೇಶ ಡಾಕುಳಗಿ ಇದ್ದರು. ಸುರೇಶ ಟಾಳೆ ಸ್ವಾಗತಿಸಿದರು. ಅಶೋಕಕುಮಾರ ಮಾಳಗೆ ನಿರೂಪಿಸಿದರು.

ಶ್ಯಾಮಸುಂದರರು ನಿಜಾಮನ ಆಡಳಿತದಲ್ಲಿ ಭೂಹೀನರಿಗೆ ಭೂ ಮಾಲೀಕರನ್ನಾಗಿ ಮಾಡಿದ್ದರು. ಆದರೆ, ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳು ತಿದ್ದುಪಡಿ ಮೂಲಕ ರೈತರ ಕತ್ತು ಹಿಸುಕುವ ಕಾರ್ಯ ಮಾಡುತ್ತಿದೆ. ಉತ್ತರ ಭಾರತದಲ್ಲಿ ನಡೆಯುತ್ತಿರುವ ಚಳವಳಿಗೆ ಕೇಂದ್ರ ದಿನಕ್ಕೊಂದು ಹೆಸರು ನೀಡುತ್ತಿದೆ. ಇಲ್ಲಿಯವರೆಗೆ ರೈತ ಚಳವಳಿಗಾರರೊಂದಿಗೆ ಕೇಂದ್ರ ಸರ್ಕಾರದ ಪ್ರತಿನಿಧಿ ಗಳು ನಡೆಸಿದ್ದ 9 ಸುತ್ತಿನ ಮಾತುಕತೆ ವಿಫಲಗೊಂಡಿದೆ.
ತಾರಾರಾಮ ಮೇಹ್ನಾ, ರಾಷ್ಟ್ರೀಯ ಮೂಲ ನಿವಾಸಿ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next