Advertisement

ಸ್ವಾಮೀಜಿ ಭೇಟಿ ಸಾಧ್ಯವಾಗದ್ದಕ್ಕೆ ಈಶ್ವರಪ್ಪ ವಿರುದ್ಧ ಶಾ ಅಸಮಾಧಾನ!

03:37 PM Apr 04, 2018 | Team Udayavani |

ಬೆಂಗಳೂರು: ಕಾಗಿನೆಲೆ ಕನಕ ಪೀಠದ ನಿರಂಜನಾನಂದ ಪುರಿ ಶ್ರೀಗಳ ಭೇಟಿ ಸಾಧ್ಯವಾಗದ ಹಿನ್ನಲೆಯಲ್ಲಿ  ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ವಿಧಾನಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ವಿರುದ್ದ  ಅಸಮಾಧಾನ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.

Advertisement

ಮಂಗಳವಾರ ಕಾಗಿನೆಲೆ ಮೂಲ ಮಠಕ್ಕೆ ತೆರಳಿದ್ದ ವೇಳೆ ಶ್ರೀಗಳು ಮಠದಲ್ಲಿ ಇರಲ್ಲಿಲ್ಲ, ಬದಲಾಗಿ ಶಾಖಾ ಮಠದಲ್ಲಿ ಉಳಿದುಕೊಂಡಿದ್ದರು. ಕಿರಿಯ ಶ್ರೀಗಳು ಶಾ ಅವರನ್ನು ಆಶೀರ್ವದಿಸಿದ್ದರು. 

ರಾಹುಲ್‌ಗೆ ಸಾಧ್ಯ, ನಮಗೇಕೆ ಇಲ್ಲ?
ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕಾಗಿನೆಲೆ ಶ್ರೀಗಳನ್ನು ಭೇಟಿಯಾಗಿದ್ದರು, ಆದರೆ ನನಗೆ ಸಾಧ್ಯವಾಗಲಿಲ್ಲ ಏಕೆ ಎಂದು ಶಾ ಈಶ್ವರಪ್ಪ ಬಳಿ ಪ್ರಶ್ನಿಸಿರುವುದಾಗಿ ವರದಿಯಾಗಿದೆ. 

ಕುರುಬ ಸಮುದಾಯದ ನಾಯಕರಾಗಿರುವ ಈಶ್ವರಪ್ಪ ಅವರ ಬಳಿ ಮುಂದಿನ ಬಾರಿ ಶ್ರೀಗಳ ಭೇಟಿಗೆ ದಿನಾಂಕ ನಿಗದಿ ಪಡಿಸಲು ಸೂಚಿಸಿದ್ದಾರೆ ಎಂದು ವರದಿಯಾಗಿದೆ. 

ಕುರುಬ ಸಮುದಾಯದ ಮತಗಳನ್ನು ಸೆಳೆದು ಸಿದ್ದರಾಮಯ್ಯಗೆ ಸೆಡ್ಡು ಹೊಡೆಯಲು ಶಾ ಭಾರೀ ರಣ ತಂತ್ರಗಳನ್ನು ಹಣೆಯುತ್ತಿದ್ದಾರೆ. 

Advertisement

ವೋಟಿಗಾಗಿ ಮಠ, ಮಂದಿರಗಳ ಭೇಟಿಯನ್ನು  ಕಾಂಗ್ರೆಸ್‌ ಮತ್ತು ಬಿಜೆಪಿ ಅಧ್ಯಕ್ಷರು ಪೈಪೋಟಿಗೆ ಬಿದ್ದಂತೆ ಮಾಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next