ದುಬಾೖ: ದುಬಾೖ ಟೆಸ್ಟ್‌ನಲ್ಲಿ ಪಾಕಿಸ್ಥಾನದ ಹಿಡಿತ ಬಿಗಿಗೊಂಡಿದೆ. 462 ರನ್ನುಗಳ ಕಠಿನ ಗುರಿ ಪಡೆದ ಆಸ್ಟ್ರೇಲಿಯ 136ಕ್ಕೆ 3 ವಿಕೆಟ್ ಕಳೆದುಕೊಂಡು 4ನೇ ದಿನದಾಟ ಮುಗಿಸಿದೆ. ಆಸ್ಟ್ರೇಲಿಯದ ಆರಂಭ ಭರವಸೆ ಯಿಂದಲೇ ಕೂಡಿತ್ತು. ಉಸ್ಮಾನ್ ಖ್ವಾಜಾ (ಬ್ಯಾಟಿಂಗ್ 50) ಮತ್ತು ಆರನ್ ಫಿಂಚ್ (49) ಮೊದಲ ವಿಕೆಟಿಗೆ 29.4 ಓವರ್‌ಗಳಿಂದ 87 ರನ್ ಪೇರಿಸಿದರು. ಆದರೆ ಈ ಹಂತದಲ್ಲಿ ಘಾತಕ ಬೌಲಿಂಗ್ ಸ್ಪೆಲ್ ಒಂದನ್ನು ಸಂಘಟಿಸಿದ ಮಧ್ಯಮ ವೇಗಿ ಮೊಹಮ್ಮದ್ ಅಬ್ಟಾಸ್ 7 ಎಸೆತಗಳ ಅಂತರದಲ್ಲಿ 3 ವಿಕೆಟ್ ಉಡಾಯಿಸಿ ಪಾಕಿಸ್ಥಾನಕ್ಕೆ ಮೇಲುಗೈ ಒದಗಿಸಿದರು. ಫಿಂಚ್ ವಿಕೆಟ್ ಉರುಳಿಸಿದ ಬಳಿಕ ಶಾನ್ ಮಾರ್ಷ್, ಮಿಚೆಲ್ ಮಾರ್ಷ್ ಅವರನ್ನು ಶೂನ್ಯಕ್ಕೆ ಉರುಳಿಸಿದರು. ನೋಲಾಸ್ 87ರಲ್ಲಿದ್ದ ಆಸ್ಟ್ರೇಲಿಯ, ಇದೇ ಮೊತ್ತಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಟಕ್ಕೆ ಸಲುಕಿತು. ಪಾಕಿಸ್ಥಾನ 6ಕ್ಕೆ 181 ರನ್ ಗಳಿಸಿ ದ್ವಿತೀಯ ಸರದಿಯನ್ನು ಡಿಕ್ಲೇರ್ ಮಾಡಿತ್ತು.
ಸಂಕಿಪ್ತ ಸ್ಕೋರ್
ಪಾಕಿಸ್ಥಾನ-482 ಮತ್ತು 6 ವಿಕೆಟಿಗೆ 181 ಡಿಕ್ಲೇರ್. ಆಸ್ಟ್ರೇಲಿಯ-202 ಮತ್ತು 3 ವಿಕೆಟಿಗೆ 136.