Advertisement

ರಾಹುಲ್‌ ಗಾಂಧಿ ಭೇಟಿಯಾದ ಶತ್ರುಘ್ನ ಸಿನ್ಹಾ; ಎ.6ರಂದು ಕಾಂಗ್ರೆಸ್‌ಗೆ

09:20 AM Mar 29, 2019 | Team Udayavani |

ಹೊಸದಿಲ್ಲಿ : ಬಂಡುಕೋರ ಬಿಜೆಪಿ ನಾಯಕ, ಮಾಜಿ ಬಾಲಿವುಡ್‌ ನಟ, ಶತ್ರುಘ್ನ ಸಿನ್ಹಾ ಅವರು ಇಂದು ಗುರುವಾರ ಹೊಸದಿಲ್ಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ.

Advertisement

ಎಪ್ರಿಲ್‌ 6ರಂದು ಶತ್ರುಘ್ನ ಸಿನ್ಹಾ ಕಾಂಗ್ರೆಸ್‌ ಪಕ್ಷ ಸೇರಲಿರುವುದಾಗಿ ಮೂಲಗಳು ಹೇಳಿವೆ.

ರಾಹುಲ್‌ ಗಾಂಧಿ ಅವರನ್ನು ಅವರ ಇಲ್ಲಿನ ನಿವಾಸದಲ್ಲಿ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿನ್ಹಾ ತಾನು ಬೇಗನೆ ಕಾಂಗ್ರೆಸ್‌ ಪಕ್ಷ ಸೇರುವುದಾಗಿ ಹೇಳಿದರು.

ಹಿರಿಯ ಕಾಂಗ್ರೆಸ್‌ ನಾಯಕ ಶಕ್ತಿಸಿನ್ಹ ಗೋಹಿಲ್‌ ಅವರು ಶತ್ರುಘ್ನ ಸಿನ್ಹಾ ಎಪ್ರಿಲ್‌ 6ರಂದು ಕಾಂಗ್ರೆಸ್‌ ಸೇರಲಿದ್ದಾರೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next