Advertisement

ಷಟಸ್ಥಲ ಶಿವಯೋಗ ಅನುಭವ ಶಿಬಿರ ಫೆ. 22ರಂದು

10:15 AM Jan 07, 2019 | |

ಬಸವಕಲ್ಯಾಣ: ನಗರದ ಬಸವ ಮಹಾಮನೆಯಲ್ಲಿ ನಡೆಯುವ ಷಟಸ್ಥಲ ಶಿವಯೋಗ ಅನುಭವ ಶಿಬಿರ ಮತ್ತು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವನ್ನು ಫೆ. 22ರಿಂದ 24ರ ವರೆಗೆ ಆಯೋಜಿಸಲು ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ. ನಾರಾಯಣ ಮಾತನಾಡಿ, ಬಸವಾದಿ ಶರಣರು ಮತ್ತು ಡಾ| ಬಿ.ಆರ್‌. ಅಂಬೇಡ್ಕರ ಅವರು ಹೇಗೆ ಸಮಾಜ ಉದ್ಧಾರಕ್ಕಾಗಿ ಹೋರಾಟ ಮಾಡಿದ್ದರು. ಅದನ್ನು ಮುಂದುವರಿಸುಕೊಂಡು ಹೋಗುವ ಚಳವಳಿ ಇದಾಗಿದೆ. ಬೆಲ್ದಾಳ ಶರಣರು ಅಂತಹ ಕಾರ್ಯ ಮಾಡುತ್ತಿರುವುದು ಮಹತ್ವದಾಗಿದೆ ಎಂದು ಹೇಳಿದರು.

ಇದು ಮುಂದಿನ ಯುವ ಪೀಳಿಗೆಗಳಿಗೆ ಮಾದರಿ ಗ್ರಂಥವಾಗಲಿದೆ. ಗ್ರಂಥಕ್ಕೆ ಬೇಕಾಗುವ ಅನುದಾನ, ಖರ್ಚು ವೆಚ್ಚಕ್ಕೆ ಸಹಕಾರ ಮಾಡುವುದಾಗಿ ಭರವಸೆ ನೀಡಿದರು.
 
ಕಲುಬುರಗಿ ಕಾಂಗ್ರೆಸ್‌ ಮುಖಂಡ ತಿಪ್ಪಣ್ಣ ಕಮಕನೂರ ಮಾತನಾಡಿ, 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸಾಮಾಜಿಕ ನ್ಯಾಯದ ಪರವಾಗಿ ಹೋರಾಟ ಮಾಡಿ ಇಡಿ ಮನುಕುಲಕ್ಕೆ ಹೇಗೆ ಮಾದರಿಯಾಗಿ ಮಹಾ ಪುರುಷರಾಗಿದ್ದಾರೆಯೋ ಅವರ ದಾರಿಯಲ್ಲಿಯೇ 21ನೇ ಶತಮಾನದಲ್ಲಿ ಬೆಲ್ದಾಳ ಶಣರು ಬಸವಣ್ಣನವರಂತೆ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಬೆಲ್ದಾಳ ಶರಣರು ಮಾತನಾಡಿ, ನಮ್ಮ 70ನೇ ವರ್ಷದ ಜನ್ಮದಿನ ನಿಮಿತ್ಯ ನಮ್ಮ ಸಾಧನೆ ಬಗ್ಗೆ ಲೇಖನಗಳು ಸಂಗ್ರಹಿಸಿ ನಮ್ಮ ಸಾಧನೆ ನಡೆದು ಬಂದ ದಾರಿ ಕುರಿತು ಗ್ರಂಥ ನೀಡಲಿದ್ದಾರೆ. ಬಸವ ಬೆಳಗು ಗ್ರಂಥ ಬಿಡುಗಡೆಯಾಗಲಿದೆ. ಇದಕ್ಕೆ ಗೌರವ ಸಂಪಾದಕರು ಖ್ಯಾತ ಸಾಹಿತಿಗಳು ಬೆಂಗಳೂರಿನ ಡಾ| ಸಿದ್ದಲಿಂಗಯ್ಯ, ಅಭಿನಂದನಾ ಗ್ರಂಥ ಸಂಪಾದಕರು ಇತಿಹಾಸಕಾರರು ಕಲಬುರಗಿಯ ಡಾ| ಗಾಂಧಿಜಿ ಸಿ. ಮೋಳಕೆರೆ ಅವರು ಸೇರಿದಂತೆ ಹಿರಿಯ ಸಾಹಿತಿಗಳು ಸಂಪಾದಕರಾಗಿದ್ದಾರೆ ಎಂದು ಹೇಳಿದರು.

ದಿಲೀಪ ಸಿಂಧೆ, ಅಭಿನಂದನಾ ಗ್ರಂಥ ಸಂಪಾದಕ ಡಾ. ಗಾಂಧೀ ಜಿ ಸಿ. ಮೋಳಕೆರೆ, ರವಿ ಬೊರಾಳೆ, ನಗರಸಭೆ ಪೌರಾಯುಕ್ತ ಸುರೇಶ ಬಬಲಾದೆ, ಕಲಬುರಗಿಯ ಬಸವರಾಜ, ಜೋಶಿ, ಸಂಜು ಗಾಯವಾಡ, ಪಿಂಟು ಕಾಂಬಳೆ ಪರತಾಪುರ, ರವಿ ಸಿಂಗಾರೆ, ದತ್ತು ಮುಲಗೆ, ಶರಣರು ಆಲಗುಡೆ, ಶೀತಲ ಸಿಂಧೆ, ಸಿಕಿಂದರ್‌ ಸಿಂಧೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next