Advertisement
ಬದಲಾದ ವಿನ್ಯಾಸ
Related Articles
Advertisement
ಪಾಳು ಬಿದ್ದಂತೆ ಇತ್ತು
ಶಾಸ್ತ್ರೀ ಪ್ರತಿಮೆಗೂ ಸೂಕ್ತ ಭದ್ರತೆ ಇರಲಿಲ್ಲ. ಶಾಸ್ತ್ರೀ ಸರ್ಕಲ್‌ನ ಸೌಂದರ್ಯ ಹೆಚ್ಚಿಸಬೇಕೆಂದು ಅನೇಕ ಸಮಯದಿಂದ ಬೇಡಿಕೆ ಇತ್ತು. ಅನೇಕ ವರ್ಷಗಳಿಂದ ಕುಂದಾಪುರದ ಸ್ವಾಗತ ದ್ವಾರ ಎಂದೇ ಪರಿಗಣಿಸಲ್ಪಟ್ಟಿರುವ ಶಾಸ್ತ್ರೀ ವೃತ್ತ ಸೌಂದರ್ಯಹೀನವಾಗಿತ್ತು. ಫ್ಲೈಓವರ್, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾದ ಬಳಿಕವಂತೂ ಅನಾಥವಾದಂತಿತ್ತು. ನಗರಕ್ಕೆ ಪ್ರವೇಶ ಮಾಡುವಾಗಲೇ ದೊರೆಯುವ ವೃತ್ತ ಇದಾದ ಕಾರಣ ಇದರ ಸೌಂದರ್ಯ ಕಂಡೇ ಸುಂದರ ಕುಂದಾಪುರ ಕಲ್ಪನೆಗೆ ಪೂರಕ ಮನಃಸ್ಥಿತಿ ನಿರ್ಮಾಣವಾಗುತ್ತದೆ ಎಂದು ಪುರಸಭೆ ಆಡಳಿತ ಭಾವಿಸಿದೆ. ಈ ನಿಟ್ಟಿನಲ್ಲಿ ಪುರಸಭೆ ವೃತ್ತ ನಿರ್ಮಾಣಕ್ಕೆ ಮುಂದಾಗಿದೆ.
ಪ್ರತಿಮೆ, ಉದ್ಯಾನವನ ಆಗಿಲ್ಲ
ಶಾಸ್ತ್ರೀ ಸರ್ಕಲ್ ಪುರ ಸಭೆ ವ್ಯಾಪ್ತಿಗೆ ಬರುತ್ತದೆ. ಅದರ ಉಸ್ತುವಾರಿ, ನಿರ್ವಹಣೆ, ನವೀಕರಣ ಎಲ್ಲವೂ ಪುರಸಭೆ ಪಾಲಿಗೆ. ಆದರೆ ಈವರೆಗೆ ನವೀಕರಣ ಕಾರ್ಯ ನಡೆದಿರಲಿಲ್ಲ. ಏಕೆಂದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 10 ವರ್ಷಗಳ ಕಾಲ ಇಲ್ಲಿ ಹೆದ್ದಾರಿ ಕಾಮಗಾರಿ ಎಂದು ದಿನ ದೂಡಿತ್ತು. ವಸ್ತುಗಳನ್ನು ತಂದು ರಾಶಿ ಹಾಕಿತ್ತು. ರಸ್ತೆ ಅಗೆದು ಹೊಸ ರಸ್ತೆ ಮಾಡದೇ ಬಾಕಿ ಯಾದ ಕಾರಣ ವೃತ್ತದ ಆಧುನೀಕರಣ ಮಾತ್ರ ಸಾಧ್ಯವಾಗಿರಲಿಲ್ಲ. ಈಗ ವೃತ್ತದ ಮಂಟಪ ಆಗಿದ್ದು ಪ್ರತಿಮೆ, ಉದ್ಯಾನವನ, ಸುತ್ತಲಿನ ಕಬ್ಬಿಣದ ತಡೆ, ಬೆಳಕಿನ ವ್ಯವಸ್ಥೆ ಆಗಿಲ್ಲ, ಹೈಮಾಸ್ಟ್ ಲೈಟ್ ಸ್ಥಳಾಂತರ ಕಾರ್ಯ ಆಗಿಲ್ಲ.
ಶಾಸಕರ ಮಧ್ಯಪ್ರವೇಶ: ಕಾಮಗಾರಿ ಕುರಿತು ಶಾಸಕರವರೆಗೆ ದೂರು ಹೋಯಿತು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಪರಾಮರ್ಶೆ ನಡೆಸಿದರು. ಈ ಹಿಂದೆ ಶಾಸ್ತ್ರೀ ಪ್ರತಿಮೆಯನ್ನು ಕೊಡುಗೆಯಾಗಿ ನೀಡಿದ್ದ ಎಸೆಸೆಲ್ಸಿ ಸಂಸ್ಥೆಯನ್ನು ಸಂಪರ್ಕಿಸಿ ಚಾರ್ಮಕ್ಕಿ ನಾರಾಯಣ ಶೆಟ್ಟರ ನೆನಪಿನಲ್ಲಿ ನೀಡಿದ ಪ್ರತಿಮೆಯ ಸ್ಥಳದಲ್ಲಿ ನೂತನ ವೃತ್ತಕ್ಕೆ ಆಗುವಂತಹ ಪ್ರತಿಮೆ ನೀಡಲು ಮನವಿ ಮಾಡಿದರು. ಅದರಂತೆ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಪುಸ್ತಕ ಹಿಡಿದು ನಡೆಯುವ ಭಂಗಿಯ ಶಾಸ್ತ್ರೀಗಳ ಕಂಚಿನ ಪ್ರತಿಮೆ ನಿರ್ಮಾಣ ಹಂತದಲ್ಲಿದೆ. ಮೈಸೂರಿನಲ್ಲಿ ಬೈಂದೂರು ತಾಲೂಕಿನ ನಾಡ ಗುಡ್ಡೆಯಂಗಡಿಯ ಶಿಲ್ಪಿ ಪ್ರತಿಮೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
ಅಧಿಕ ವೆಚ್ಚ
ಮೊದಲ ಹಂತದ ಕಾಮಗಾರಿಗೆ 25 ಲಕ್ಷ, ಎರಡನೆ ಹಂತದ ಕಾಮಗಾರಿಗೆ 25 ಲಕ್ಷ, ಮೂರನೆ ಹಂತದಲ್ಲಿ ಮತ್ತೆ 10 ಲಕ್ಷ ರೂ. ಬೇಕಾಗಬಹುದು ಎಂದು ವೆಚ್ಚದ ಕುರಿತು ಆಕ್ಷೇಪ ಕೇಳಿ ಬಂದಿತ್ತು. ಪುರಸಭೆ ಸಾಮಾನ್ಯ ಸಭೆಯಲ್ಲೂ ಈ ಕುರಿತು ಚರ್ಚೆ ನಡೆದಿತ್ತು. ಕಾಮಗಾರಿ ಹಂತದಲ್ಲಿ ಬಳಸುವ ವಸ್ತುಗಳು ಬದಲಾದ ಕಾರಣ ವೆಚ್ಚ ಹೆಚ್ಚಾಗಿದೆ ಎಂದು ಸಮರ್ಥನೆ ನೀಡಲಾಗಿತ್ತು. ಎರಡು ಬಾರಿ ಟೆಂಡರ್ ಆಹ್ವಾನಿಸಿದಾಗಲೂ ಒಂದೇ ಟೆಂಡರ್ ಬಂದು ಮೂರನೆಯ ಬಾರಿ ಟೆಂಡರ್ ಅಂಗೀ ಕಾರವಾಗಿ ಈಗ ಎರಡನೆ ಹಂತದ ಕಾಮಗಾರಿಗೂ ಏಕ ಟೆಂಡರ್ ಬಂದಿದ್ದು ಪ್ರಕ್ರಿಯೆ ಮುಂದುವರಿಯಲಿಲ್ಲ.
ಪ್ರತಿಮೆ ಆಗುತ್ತಿದೆ: ಹೊಸ ಪ್ರತಿಮೆ ಶಾಸಕರ ಮೂಲಕ ದಾನಿಗಳಿಂದ ಮಂಜೂರಾಗಿದ್ದು ಈವರೆಗೆ ಇದ್ದ ಪ್ರತಿಮೆಯನ್ನು ಫೆರ್ರಿ ಪಾರ್ಕ್‌ನಲ್ಲಿ ಇರಿಸಲಾಗಿದ್ದು ಅಲ್ಲೇ ಶಾಶ್ವತವಾಗಿ ಇರಿಸುವಂತೆ ಅಲ್ಲಿನ ಪುರಸಭೆ ಸದಸ್ಯ ಅಬ್ಬು ಮಹಮ್ಮದ್ ಅವರೂ ಮನವಿ ಮಾಡಿದ್ದಾರೆ. ಶಾಸ್ತ್ರೀ ಸರ್ಕಲ್ ಕಾಮಗಾರಿ ಶೀಘ್ರದಲ್ಲಿ ನಡೆಯಲಿದೆ. ಸರ್ಕಲ್‌ನ ಉಳಿಕೆ ಕಾಮಗಾರಿಗಳಿಗೂ ದಾನಿಗಳಿದ್ದರೆ ಪ್ರಯತ್ನಿಸಲಾಗುವುದು. –ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷೆ, ಪುರಸಭೆ
ಶೀಘ್ರ ಪೂರ್ಣ: ಪ್ರತಿಮೆ ತಯಾರಿ ನಡೆಯುತ್ತಿದ್ದು ಎರಡನೆ ಹಂತದ ಕಾಮಗಾರಿಯ ಟೆಂಡರ್‌ನ ವೆಚ್ಚ ತಗ್ಗಿಸಲಾಗಿದೆ. ಸುಂದರವಾಗಿ ಕಾಣುವಂತೆ ಕಾಮಗಾರಿ ನಡೆಯಲಿದ್ದು ಶೀಘ್ರ ಪೂರ್ಣಗೊಳ್ಳಲಿದೆ. –ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ