Advertisement
ಶೀಘ್ರ ಕಂಚಿನ ಪುತ್ಥಳಿ ಬರಲಿದೆ:
Related Articles
Advertisement
ಕುಂದಾಪುರ ಶಾಸ್ತ್ರಿ ಸರ್ಕಲ್, ಶಾಸ್ತ್ರಿ ಪಾರ್ಕ್ ಹೆಸರು ವಾಸಿ. ಕುಂದಾಪುರಕ್ಕೆ ಎಲ್ಲಿಂದಲೇ ಬಂದರೂ ಬಸ್ಸಿನಿಂದಿಳಿಯಲು ಸೂಚನೆ ಕೊಡುವುದು ಇದೇ ವೃತ್ತವನ್ನು. ಯಾವುದೇ ಸ್ಥಳದ ಗುರುತು ಪರಿಚಯ ಹೇಳಬೇಕಾದರೂ ಶಾಸ್ತ್ರಿ ಸರ್ಕಲನ್ನು ಹೆಸರಿಸುತ್ತಾರೆ. ಇಲ್ಲಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಕನ್‌ಸ್ಟ್ರಕ್ಷನ್ಸ್ ಕಂಪೆನಿ ಮೂಲಕ ನೀಡಿದ ಲಾಲ್‌ಬಹದ್ದೂರ್ ಶಾಸಿŒಗಳ
ಸುಂದರ ಪ್ರತಿಮೆಯಿತ್ತು. ಹಸುರು ಹುಲ್ಲಿನ ನಡುವೆ ಶಿಲೆಯ ಮೇಲೆ ಕೂರಿಸಲ್ಪಟ್ಟ ಶಾಸಿŒ ವಿಗ್ರಹವುಳ್ಳ ಸರ್ಕಲ್ ಈಚಿನ ದಿನಗಳಲ್ಲಿ ಬೀಡಾಡಿಗಳ ತಾಣವಾಗಿತ್ತು. ಹೊಸ ಪ್ರತಿಮೆ ಬರುವ ಹಿನ್ನೆಲೆಯಲ್ಲಿ ಇಲ್ಲಿದ್ದ ಹಳೆ ವಿಗ್ರಹವನ್ನು ಈಗ ಫೆರಿ ಪಾರ್ಕ್‌ನಲ್ಲಿ ಇರಿಸಲಾಗಿದೆ.
ತೆರವು:
ಸರ್ಕಲ್‌ನ ಸುತ್ತ ಬೇಲಿ ಹಾಗೂ ಉದ್ಯಾನ ಮಾಡುವ ಚಿಂತನೆ ಪುರಸಭೆಗಿದೆ. ಇದಕ್ಕೆ ಪುರಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿಯವರು ಅಳವಡಿಸಿದ ಬೃಹತ್ ದೀಪಗಳು ಅಡ್ಡಿಯಾಗಿದ್ದವು. ಅವುಗಳನ್ನು ತೆರವು ಮಾಡಲು ಈ ಹಿಂದೆಯೇ ಮನವಿ ಮಾಡಲಾಗಿತ್ತು. ವೆಚ್ಚ ಭರಿಸುವ ಭರವಸೆ ನೀಡಲಾಗಿತ್ತು. ಅದರಂತೆ ಈಗ ಹೈಮಾಸ್ಟ್ ದೀಪ ತೆರವಾಗಿದೆ. ಇನ್ನು ತಡೆಬೇಲಿ, ಪಾರ್ಕ್ ರಚನೆಯಾಗಲಿದೆ. ಇದರಿಂದ ಪ್ರತಿಮೆಗೆ ಸೂಕ್ತ ಭದ್ರತೆ ಇಲ್ಲ ಎನ್ನುವ ಕೊರಗು ಮರೆಯಾಗಲಿದೆ. ಶಾಸ್ತ್ರಿ ಸರ್ಕಲ್‌ನ ಸೌಂದರ್ಯ ಹೆಚ್ಚಿಸಬೇಕೆಂದು ಅನೇಕ ಸಮಯದಿಂದ ಬೇಡಿಕೆ ಇದೆ. ಇದರ ಸೌಂದರ್ಯ ಕಂಡೇ ಸುಂದರ ಕುಂದಾಪುರ ಕಲ್ಪನೆಗೆ ಪೂರಕ ಮನಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆಡಳಿತ ಇಂತಹ ಕೆಲಸಕ್ಕೆ ಕೈ ಹಾಕಿತ್ತು. ಆದರೆ ಆರಂಭ ವಿಘ್ನ ಎಂಬಂತೆ ಟೆಂಡರ್ ವಹಿಸಿಕೊಳ್ಳಲು ಯಾರೂ ಮುಂದಾಗದೇ ಬಳಿಕ ಎರಡನೆ ಟೆಂಡರ್, ಸಿಂಗಲ್ ಟೆಂಡರ್ ಎಂದೆಲ್ಲ ಆಗಿ ಕಾಮಗಾರಿ ಆರಂಭವಾದ ಬಳಿಕ ಆರೋಪಗಳ ಸರಮಾಲೆಯೇ ಬಂದು ಆಡಳಿತ ಅನೇಕ ಬಾರಿ ಮುಜುಗರಕ್ಕೆ ಒಳಗಾಗಿದೆ.
ತಾಂತ್ರಿಕವಾಗಿ ಇದು ಹೆದ್ದಾರಿ :
ಶಾಸ್ತ್ರಿ ಸರ್ಕಲ್ ಪುರಸಭೆ ವ್ಯಾಪ್ತಿಗೆ ಬರುತ್ತದೆ. ಅದರ ಉಸ್ತುವಾರಿ, ನಿರ್ವಹಣೆ, ನವೀಕರಣ ಎಲ್ಲವೂ ಪುರಸಭೆ ಪಾಲಿಗೆ. ಆದರೆ ಈವರೆಗೆ ನವೀಕರಣ ಕಾರ್ಯ ನಡೆದಿರಲಿಲ್ಲ. 10 ವರ್ಷಗಳ ಕಾಲ ಇಲ್ಲಿ ಹೆದ್ದಾರಿ ಕಾಮಗಾರಿ ಎಂದು ದಿನದೂಡಿದ ಪರಿಣಾಮ, ಕಾಮಗಾರಿಯ ವಸ್ತುಗಳನ್ನು ತಂದು ಹಾಕಿದ ಕಾರಣ, ರಸ್ತೆ ಅಗೆದು ಹೊಸ ರಸ್ತೆ ಮಾಡದೇ ಬಾಕಿಯಾದ ಕಾರಣ ವೃತ್ತದ ಆಧುನೀಕರಣ ಮಾಡಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಎಪ್ರಿಲ್‌ವರೆಗೆ ಅಂದರೆ ಫ್ಲೈಓವರ್ ಕಾಮಗಾರಿ ಪೂರ್ಣವಾಗುವವರೆಗೆ ಈ ವೃತ್ತದ ಸಮೀಪ ಹಾದು ಹೋದ ರಸ್ತೆಯೇ ರಾಷ್ಟ್ರೀಯ ಹೆದ್ದಾರಿಯಾಗಿತ್ತು. ಈಗಲೂ ವೃತ್ತದ ಸಮೀಪ ಹೋದ ರಸ್ತೆ ಸರ್ವಿಸ್ ರಸ್ತೆಯಾದರೂ ಕಾಮಗಾರಿ ಪೂರ್ಣಗೊಂಡು ಪ್ರಾಧಿಕಾರಕ್ಕೆ ಹಸ್ತಾಂತರವಾಗದ ಕಾರಣ ತಾಂತ್ರಿಕವಾಗಿ ಇದು ಹೆದ್ದಾರಿಯೇ ಆಗಿದೆ.
ಹೈಮಾಸ್ಟ್ ದೀಪ ತೆರವಾದ ಬಳಿಕ ತಡೆಬೇಲಿ ರಚನೆ ಆಗಲಿದೆ. ಪ್ರತಿಮೆ ನಿರ್ಮಾಣ ಮುಗಿದ ಕೂಡಲೇ ಕುಂದಾಪುರಕ್ಕೆ ತಂದು ಮುಂದಿನ ಕಾರ್ಯ ನಡೆಯಲಿವೆ. -ಗಿರೀಶ್ ಜಿ.ಕೆ.,ಸ್ಥಾಯೀ ಸಮಿತಿ ಅಧ್ಯಕ್ಷ, ಪುರಸಭೆ