Advertisement

ಶಶಿಕುಮಾರ್‌ ಪುತ್ರನ ಚೊಚ್ಚಲ ಚಿತ್ರ ರೆಡಿ

01:11 PM Nov 06, 2020 | Suhan S |

ಹಿರಿಯ ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ಮೊದಲಬಾರಿ ನಾಯಕನಾಗಿ ನಟಿಸಿರುವ “ಸೀತಾಯಣ’ ಚಿತ್ರದಕೆಲಸಗಳು ಸದ್ದಿಲ್ಲದೆ ನಡೆಯುತ್ತಿದೆ. ಇತ್ತೀಚೆಗೆ ಚಿತ್ರತಂಡ, ಚಿತ್ರದಲ್ಲಿ ಬರುವ ಹಾಡೊಂದನ್ನು ಬಿಡುಗಡೆ ಮಾಡಿದೆ.

Advertisement

ಮದುವೆ ಶುಭ ಸಂದರ್ಭದಲ್ಲಿ ರಾಮಾಯಣದ ಶ್ಲೋಕವನ್ನು ಬಳಸುವ ಬದಲು ಅದಕ್ಕೆ ತಕ್ಕಂತೆ ಸಿದ್ಧಪಡಿಸಲಾದ ಹಾಡು ಇದಾಗಿದೆ. ಸೀತೆಯ ಗುಣ ಮತ್ತು ಸೌಂದರ್ಯ ಸಾರುವ ಈ ಗೀತೆಯ ಸಾಲುಗಳಿಗೆ ಗಾಯಕಿ ನಯನಾ ನಾಯರ್‌ ಧ್ವನಿಯಾಗಿದ್ದಾರೆ. ನಟ ಕಂ ನಿರ್ದೇಶಕ ರಿಯಲ್‌ ಸ್ಟಾರ್‌ ಉಪೇಂದ್ರ ಈ ಹಾಡನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಹೊಸ ತಲೆಮಾರಿನ ರೊಮ್ಯಾಂಟಿಕ್‌ ಲವ್‌ ಸ್ಟೋರಿ ಹೊಂದಿರುವ “ಸೀತಾಯಣ’ ಚಿತ್ರಕ್ಕೆ ಪ್ರಭಾಕರ್‌ ಆರಿಪಾಕ್ ನಿರ್ದೇಶನ ಮಾಡುತ್ತಿದ್ದಾರೆ. ” ಕಲರ್‌ ಕ್ಲೌಡ್ಸ್‌ ಎಂಟರ್‌ಟೈನ್ಮೆಂಟ್‌’ ಬ್ಯಾನರ್‌ನಲ್ಲಿ ಲಲಿತಾ ರಾಜಲಕ್ಷ್ಮೀ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನು “ಸೀತಾಯಣ’ ಚಿತ್ರದಲ್ಲಿ ನಾಯಕ ಅಕ್ಷಿತ್‌ ಶಶಿಕುಮಾರ್‌ಗೆ ನಾಯಕಿಯಾಗಿ ಅನಹಿತಾ ಭೂಷಣ್‌ ಜೋಡಿಯಾಗಿ ಅಭಿನಯಿಸಿದ್ದಾರೆ.

ಉಳಿದಂತೆ ವಿಕ್ರಂ ಶರ್ಮಾ, ಶರ್ಮಿತಾ ಗೌಡ, ಮಧು ಸೂದನ್‌, ಮೇಘನಾ ಗೌಡ, ಅಜಯ್‌ಘೋಷ್‌, ಹಿತೇಶ್‌, ವಿಧೆಯುಲೇಖ ರಮನ್‌, ಬಿತ್ರಿಸತ್ತಿ, ಕೃಷ್ಣ ಭಗವಾನ್‌, ಅನಂತ ಬಾಬು, ಗುಂಡು ಸುದರ್ಶನ್‌, ಮಧುಮಣಿ, ಅಪ್ಪರಾವ್‌, ಲೋಬೋ ಮುಂತಾದವರು ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಸೀತಾಯಣ’ ಚಿತ್ರಕ್ಕೆ ಪದ್ಮನಾಭ್‌ ಭಾರದ್ವಾಜ್‌ ಸಂಗೀತ ಸಂಯೋಜಿಸಿದ್ದು, ಕವಿರಾಜ್‌, ಗೌಸ್‌ಪೀರ್‌ ಸಾಹಿತ್ಯವನ್ನು ರಚಿಸಿದ್ದಾರೆ. ಚಿತ್ರಕ್ಕೆ ದುರ್ಗಾಪ್ರಸಾದ್‌ ಕೊಳ್ಳಿ ಛಾಯಾಗ್ರಹಣ, ಪ್ರವೀಣ್‌ ಪುಡಿ ಸಂಕಲನವಿದೆ.ಬೆಂಗಳೂರು, ಮಂಗಳೂರು, ಆಗುಂಬೆ, ವೈಜಾಕ್‌, ಹೈದರಾಬಾದ್‌, ಬ್ಯಾಂಕಾಕ್‌ ಮೊದಲಾದ ಕಡೆಗಳಲ್ಲಿ ಸುಮಾರು 63 ದಿನಗಳ ಕಾಲ “ಸೀತಾಯಣ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ­

Advertisement

Udayavani is now on Telegram. Click here to join our channel and stay updated with the latest news.

Next