Advertisement

ಕೆಕೆಸಿಸಿಐ ಅಧ್ಯಕ್ಷರಾಗಿ ಶಶಿಕಾಂತ, ಕಾರ್ಯದರ್ಶಿಯಾಗಿ ಜೇವರ್ಗಿ ಭಾರಿ ಅಂತರದ ಗೆಲುವು

09:20 AM Feb 27, 2023 | Team Udayavani |

ಕಲಬುರಗಿ: ಈ ಭಾಗದ ಪ್ರತಿಷ್ಠಿತ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗೆ ರವಿವಾರ ನಡೆದ ಚುನಾವಣೆಯಲ್ಲಿ ಸಂಸ್ಥೆಯ ಅಧ್ಯಕ್ಷರಾಗಿ ಶಶಿಕಾಂತ ಪಾಟೀಲ್ ಚಿತ್ತಾಪುರ ಭಾರಿ ಮತಗಳ ಅಂತರದಿಂದ ಚುನಾಯಿತರಾಗಿದ್ದಾರೆ.

Advertisement

ಅದೇ ರೀತಿ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಮಂಜುನಾಥ ಜೇವರ್ಗಿ ಸಹ ಭಾರಿ ಮತಗಳ ಅಂತರದಿಂದ ಚುನಾಯಿತರಾಗಿದ್ದಾರೆ. ಶಶಿಕಾಂತ ಪಾಟೀಲ್ 1359 ಮತಗಳನ್ನು ಪಡೆದು 800 ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರೆ ಎದುರಾಳಿ ಸಂಸ್ಥೆಯ ಮಾಜಿ ಅಧ್ಯಕ್ಷ ಅಮರನಾಥ ಪಾಟೀಲ್ ಕೇವಲ 500 ಮತ ಪಡೆದು ಹೀನಾಯ ಸೋಲು ಅನುಭವಿಸಿದ್ದಾರೆ.

ಅದೇ ರೀತಿ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಂಜುನಾಥ ಜೇವರ್ಗಿ ಸಹ 1386 ಮತಗಳನ್ನು ಪಡೆದು 850 ಕ್ಕೂ ಹೆಚ್ಚಿನ ಮತಗಳ ಅಂತರದಿಂದ ಜಯ ಸಾಧಿಸಿ ದಾಖಲೆ ನಿರ್ಮಿಸಿದ್ದಾರೆ. ಎದುರಾಳಿ ಪ್ರತಿಸ್ಪರ್ಧಿ ಬಸವರಾಜ ಹಡಗಿಲ್ ಕೇವಲ 514 ಮತಗಳನ್ನು ಪಡೆದು ಹೀನಾಯ ಸೋಲು ಅನುಭವಿಸಿದರು. ನರೇನ್ ಪಾಟೀಲ್ 400 ಅತ್ಯಧಿಕ ಮತಗಳ ಅಂತರದಿಂದ ಕಾರ್ಪೋರೆಟ್ ಸೆಕ್ಟರ್ ದಿಂದ ಚುನಾಯಿತರಾದರು.

ಇದನ್ನೂ ಓದಿ:ಇನ್ನೂ ಗುಣಮುಖವಾಗದ ಜಸ್ಪ್ರೀತ್ ಬುಮ್ರಾ..; ಐಪಿಎಲ್ ನಿಂದಲೂ ಔಟ್!

ಇನ್ನೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿ ಗಿರೀಶ್ ಅಣಕಲ್, ನಾಗರಾಜ ನಿಗ್ಗುಡಗಿ, ಜಗದೀಶ್ ಗಾಜರೆ, ಮಹಾದೇವ ತಾವರಗೇರಾ, ಶರಣಬಸಪ್ಪ ಜೀವಣಗಿ, ಮಹಾದೇವ ಖೇಣಿ, ದಿನೇಶ ಪಾಟೀಲ್, ರವಿಚಂದ್ರ ಪಾಟೀಲ್, ಕೇದಾರ ರಘೋಜಿ, ಜಗದೀಶ್ ಕಡಗಂಚಿ, ಸಂದೀಪ್ ಮಿಶ್ರಾ, ರವಿಶಂಕರ ಜಮದಾರಖಾನ, ಅಲ್ಲೂರಿ ವೆಂಕಟ, ಶಿವರಾಜ ಇಂಗಿನಶೆಟ್ಟಿ, ಅಭಿಜಿತ ಪಡಶೆಟ್ಟಿ ಚುನಾಯಿತರಾಗಿದ್ದಾರೆ.‌

Advertisement

ನಿವೃತ್ತಿ ಪೊಲೀಸ್ ಅಧಿಕಾರಿ ಬಸವರಾಜ ಇಂಗಿನ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಶಶಿಕಾಂತ ಪಾಟೀಲ್ ಹಾಗೂ ಮಂಜುನಾಥ ಜೇವರ್ಗಿ ಗೆಲುವು ಸಾಧಿಸುತ್ತಿದ್ದಂತೆ ವಿಜಯೋತ್ಸವ ಆಚರಿಸಲಾಯಿತು.

ಇನ್ನುಳಿದಂತೆ ರಾಮಕೃಷ್ಣ ಬೋರಾಳಕರ್ ಉಪಾಧ್ಯಕ್ಷರಾಗಿ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಸಂಗಮೇಶ ಕಲ್ಯಾಣಿ ಮತ್ತು ಸಿಎ ಉತ್ತಮ ಬಜಾಜ್ ಖಜಾಂಚಿಯಾಗಿ ಈ ಮುಂಚೆಯೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next