Advertisement

ಧ್ವನಿವರ್ಧಕ ಬಳಕೆ ಕೋರ್ಟ್ ಆದೇಶದಂತೆ ಕ್ರಮ : ಜೊಲ್ಲೆ

05:18 PM Apr 06, 2022 | Team Udayavani |

ಕೊಪ್ಪಳ: ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕ ಬಳಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರು ಹೇಳಿದರು.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಧ್ವನಿವರ್ಧಕ ಬಳಕೆಯ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಈ ಹಿಂದೆಯೇ ಒಂದು ನಿರ್ದೇಶನ ನೀಡಿದ್ದು, ಯಾವುದೇ ಧಾರ್ಮಿಕ ಸಂಸ್ಥೆಗಳು ಒಂದು ನಿರ್ಧಿಷ್ಟ ಪ್ರಮಾಣದ ಧ್ವನಿವರ್ಧಕ ಬಳಕೆ ಮಾಡುವಂತೆ ಸೂಚಿಸಿದೆ. ಆ ನಿಯಮ ಪಾಲನೆಯಾಗಿಲ್ಲ. ಈಗ ಆ ನಿಯಮಗಳ ಪಾಲನೆ ಮಾಡಲಾಗುತ್ತಿದೆ ಅಷ್ಟೇ. ಕೋರ್ಟ್ ಆದೇಶದಂತೆ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. ಇದರಿಂದ ಅಲ್ಪಸಂಖ್ಯಾತರ ಮತಗಳು ನಮಗೆ ಬರಲ್ಲ ಎನ್ನುವ ವಿಚಾರ ಬೇರೆಯೇ ಮಾತು ಎಂದರು.

ಬೆಂಗಳೂರಿನಲ್ಲಿ ಉರ್ದು ಮಾತನಾಡಲು ಬರುವುದಿಲ್ಲ ಎನ್ನುವ ಕಾರಣಕ್ಕೆ ಓರ್ವನ ಕೊಲೆ ನಡೆದಿರುವ ವಿಚಾರ ನನಗೆ ಗೊತ್ತಿಲ್ಲ. ಆ ಬಗ್ಗೆ ನಾನೇನು ಮಾತನಾಡುವುದಿಲ್ಲ ಎಂದರು.

ಇದನ್ನೂ ಓದಿ: ಹಳೆ ಮೀನು ಮಾರುಕಟ್ಟೆ ಸ್ವಚ್ಛತೆ ಮಾಡದ್ದಕ್ಕೆ ಆಕ್ರೋಶ: ಪುರಸಭೆ ಮುತ್ತಿಗೆ ಹಾಕಿದ ಮಹಿಳೆಯರು

ನಮ್ಮಲ್ಲಿನ ಅಂಜಿನಾದ್ರಿಯೇ ಅಧೀಕೃತ. ಅದಕ್ಕಾಗಿ ನಾವು 100 ಕೋಟಿ ಅನುದಾನ ಮೀಸಲಿಟಿದ್ದೇವೆ. ಈಗಾಗಲೇ ಅಯೋಧ್ಯಾದಲ್ಲಿ ರಾಮಜನ್ಮ ಸ್ಥಳ ನಿರ್ಮಿಸಲಾಗುತ್ತಿದೆ. ಕರ್ನಾಟಕದಲ್ಲಿ ಅಂಜಿನಾದ್ರಿ ಪ್ರಸಿದ್ದ ಸ್ಥಳ. ಇದರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಿದೆ. ಅದರಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಅಂಜಿನಾದ್ರಿಯಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ. ಬೆಟ್ಟದ ಕೆಳಗೆ ಜಾಗ ಪಡೆಯಲು 5.50 ಕೋಟಿ ಕಾಯ್ದಿರಿಸಿದೆ. ಮುಂದಿನ ದಿನದಲ್ಲಿ ಮಾಸ್ಟರ್ ಪ್ಲಾನ್ ಮಾಡಿ ಅಂಜಿನಾದ್ರಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ಟಿಟಿಡಿಯ ಬಗ್ಗೆ ನಾನು ಮಾತನಾಡಲ್ಲ. ನಮ್ಮ ಅಂಜಿನಾದ್ರಿಯೇ ಅಧೀಕೃತ. ಅದಕ್ಕಾಗಿ ನಾವು ಅನುದಾನ ಘೋಷಣೆ ಮಾಡಿದ್ದೇವೆ ಎಂದರು.

Advertisement

ನರೇಂದ್ರ ಮೋದಿ ದೈವ ಸ್ವರೂಪಿ :

ಪ್ರಧಾನಿ ನರೇಂದ್ರ ಮೋದಿ ಅವರು ದೈವೀ ಸ್ವರೂಪಿಯಾಗಿದ್ದಾರೆ. ಸ್ವಾಮಿ ವಿವೇಕಾನಂದರ ಪುನರ್ಜನ್ಮವಾಗಿದ್ದಾರೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಹೇಳಿದರು.

ದೇಶ ಪ್ರೇಮ, ದೇಶಾಭಿಮಾನದ ಬಗ್ಗೆ ನರೇಂದ್ರ ಮೋದಿ ಅವರು ಚಿಕಾಗೋದಲ್ಲಿನ ಭಾಷಣದಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದರು. ಈ ಹಿಂದೆ ಭಾರತವನ್ನು ವಿಶ್ವ ನೋಡುವ ದೃಷ್ಟಿಕೋನವೇ ಬೇರೆಯಾಗಿತ್ತು.

ಆದರೆ ಈಗ ಭಾರತವನ್ನು ಜಗತ್ತು ನೋಡುವ ದೃಷ್ಟಿಕೋನವೇ ಬೇರೆಯಾಗಿದೆ. ಸ್ವಾಮಿ ವಿವೇಕಾನಂದರ ಪುನರ್ಜನ್ಮವೇ ನರೇಂದ್ರ ಮೋದಿಯಾಗಿದ್ದಾರೆ. ಪ್ರಧಾನಿ ಅವರ ಕಾರ್ಯವನ್ನು ಇಡೀ ಜಗತ್ತು ನೋಡುತ್ತಿದೆ ಎಂದು ಬಣ್ಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next