Advertisement
– ಕೊರೊನಾ ನಿಯಂತ್ರಿಸಲು ಇಲಾಖೆಯಿಂದ ಏನು ಕ್ರಮ ಕೈಗೊಳ್ಳುತ್ತಿದ್ದೀರಾ ?65 ಸಾವಿರ ಅಂಗನವಾಡಿ ಕಾರ್ಯಕರ್ತೆ ಯರು ಫ್ರಂಟ್‌ಲೆçನ್ ವಾರಿಯರ್ಸ್ ಆಗಿ ಕಾರ್ಯ ನಿರ್ವ ಹಿಸುತ್ತಿದ್ದಾರೆ. ಪ್ರತೀ ದಿನ ಮನೆ ಮನೆಗೆ ತೆರಳಿ ಸಮೀಕ್ಷೆ, ಕೊರೊನಾ ಸೋಂಕಿತರ ಆರೋಗ್ಯ ವಿಚಾ ರಿಸುವ ಕೆಲಸ ಮಾಡುತ್ತಿದ್ದಾರೆ. ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ ಮನೆಗೆ ಆಹಾರ ತಲು ಪಿ ಸು ವುದು. ಮಕ್ಕಳಿಗೆ ಚುಚ್ಚು ಮದ್ದು ಹಾಕಿಸುವ ಕೆಲಸ ಮಾಡುತ್ತಿದ್ದಾರೆ. ಗ್ರಾಮ ಪಂಚಾಯತ್ ಟಾಸ್ಕ್ ಫೋರ್ಸ್ ಸದಸ್ಯರಾಗಿ ಕಾರ್ಯ ನಿರ್ವ ಹಿಸುತ್ತಿದ್ದಾರೆ.
ಹಿರಿಯ ನಾಗರಿಕರು ಹಾಗೂ ವಿಕಲ ಚೇತನರ ಬಗ್ಗೆ ಇಲಾಖೆ ಕಾಳಜಿ ವಹಿಸಿದೆ.
ಅನೇಕರು ವೃದ್ಧಾ ಶ್ರಮ ದಲ್ಲಿರುತ್ತಾರೆ. ಹಾಸಿಗೆ ಹಿಡಿದಿರುತ್ತಾರೆ. ಕೋವಿಡ್ ಲಸಿಕೆ ಕೇಂದ್ರಕ್ಕೆ ಬರಲು ಆಗದವರಿಗೆ ಅವರ ಮನೆಗಳಿಗೆ ಹೋಗಿ ಲಸಿಕೆ ನೀಡಲು ಆರೋಗ್ಯ ಸಚಿವರ ಜತೆ ಮಾತನಾಡಿದ್ದೇನೆ. ಶೀಘ್ರ ವೇ ಅವರಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುವುದು. – ಮೂರನೇ ಅಲೆ ಮಕ್ಕಳಿಗೆ ಅಪಾಯಕಾರಿ ಎನ್ನಲಾಗಿದೆ. ಇದನ್ನು ಎದುರಿಸಲು ಏನು ಸಿದ್ಧತೆ ಮಾಡಿದ್ದೀರಿ?
ಮಕ್ಕಳ ರಕ್ಷಣೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಎಲ್ಲ ಜಿಲ್ಲೆಗಳಲ್ಲಿ ಕೋವಿಡ್ ಕೇರ್ ಕೇಂದ್ರ ತೆರೆಯಲು ತೀರ್ಮಾ ನಿಸಲಾಗಿದೆ. 1098 ಟೋಲ್ ಫ್ರೀ ನಂಬರ್ ತೆರೆಯಲಾಗಿದೆ. ಅಗತ್ಯ ಬಿದ್ದರೆ, ಜಿಲ್ಲಾ ಕೇಂದ್ರಗಳಲ್ಲಿ ಮಕ್ಕಳ ವಿಶೇಷ ಕೋವಿಡ್ ಕೇರ್ ಕೇಂದ್ರ ತೆರೆದು ಅಲ್ಲಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.
Related Articles
ಅವಕಾಶವಿಲ್ಲ. ಕೊರೊನಾದಿಂದ ತಂದೆ, ತಾಯಿ ನಿಧನ ಹೊಂದಿದರೆ, ಸರಕಾರ ಮಕ್ಕಳ ರಕ್ಷಣೆ ಮಾಡ ಲಿದೆ. ಯಾರಾದರೂ ಮಕ್ಕಳನ್ನು ದತ್ತು ತೆಗೆದು ಕೊಳ್ಳಲು ಮುಂದೆ ಬಂದರೆ ಕಾನೂನು ಪ್ರಕಾರ ದತ್ತು ನೀಡುವ ವ್ಯವಸ್ಥೆ ಮಾಡಲಾಗುವುದು.
Advertisement
– ಆಶಾ, ಅಂಗನವಾಡಿ ಕಾರ್ಯಕರ್ತೆಯರ ರಕ್ಷಣೆಗೆ ಯಾವ ರೀತಿಯ ಕ್ರಮ ಕೈಗೊಂಡಿದ್ದೀರಾ?ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆ ಯರಿಗೆ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ನೀಡಲಾ ಗುತ್ತಿದೆ. ಕೋವಿಡ್‌ನಿಂದ ಮೃತರಾದರೆ 30 ಲಕ್ಷ ರೂ. ವಿಮೆ ಪರಿಹಾರ ನೀಡಲಾಗುತ್ತಿದೆ. ಕಳೆದ ವರ್ಷ ಮೃತಪಟ್ಟ 25 ಅಂಗನವಾಡಿ ಕಾರ್ಯಕರ್ತೆಯರಿಗೆ ಪರಿಹಾರ ನೀಡಲಾಗಿದೆ.