Advertisement

Politics: ಶಶಿ ತರೂರ್‌ ವಿರುದ್ಧ ನಿರ್ಮಲಾ ಸೀತಾರಾಮನ್‌ ಸ್ಪರ್ಧೆ?

11:34 PM Sep 29, 2023 | Team Udayavani |

ಕಲ್ಲಿಕೋಟೆ: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇರಳದ ಆರು ಲೋಕಸಭಾ ಕ್ಷೇತ್ರಗಳ ಮೇಲೆ ತನ್ನ ಗಮನ ಕೇಂದ್ರೀಕರಿಸಲು ಬಿಜೆಪಿ ನಿರ್ಧರಿಸಿದೆ. ಇದೇ ವೇಳೆ ರಾಷ್ಟ್ರ ಮಟ್ಟದ ನಾಯಕರನ್ನು ಕೇರಳದ ಸ್ಪರ್ಧಾ ಕಣಕ್ಕೆ ಇಳಿಸಲು ಭಾಜಪ ಚಿಂತಿಸಿದೆ.

Advertisement

ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅವರ ವಿರುದ್ಧ ತಿರುವನಂತಪುರ ಕ್ಷೇತ್ರದಿಂದ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌ ಅಥವಾ ರಾಜೀವ್‌ ಚಂದ್ರಶೇಖರ್‌ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಪಾಲಕ್ಕಾಡ್‌ ಕ್ಷೇತ್ರದಿಂದಲೂ ಇವರ ಹೆಸರುಗಳು ಕೇಳಿಬಂದಿದೆ. ಈಗಾಗಲೇ ಪಾಲಕ್ಕಾಡ್‌ ಕ್ಷೇತ್ರದಲ್ಲಿ ಸ್ಥಳೀಯ ನಾಯಕ ಸಿ.ಕೃಷ್ಣಕುಮಾರ್‌ ಅವರು ಸಂಘಟನೆಯಲ್ಲಿ ತೊಡಗಿದ್ದಾರೆ. ಈಗಿರುವಾಗ ಹೊರಗಿನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಎಷ್ಟು ಸೂಕ್ತ ಎಂದು ಪಕ್ಷದೊಳಗೆ ಪ್ರಶ್ನೆ ಉದ್ಭವಿಸಿದೆ.

ಇನ್ನೊಂದೆಡೆ, ತ್ರಿಶ್ಶೂರ್‌ ಕ್ಷೇತ್ರದಲ್ಲಿ ಸುರೇಶ್‌ ಗೋಪಿ ಅವರು ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂದು ಈಗಾಗಲೇ ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುಂದರನ್‌ ಸ್ಪಷ್ಟಪಡಿಸಿದ್ದಾರೆ. ಅಟ್ಟಿಂಗಲ್‌ ಕ್ಷೇತ್ರದಿಂದ ಕೇಂದ್ರ ಸಚಿವ ಕೇಂದ್ರ ಸಚಿವ ವಿ.ಮುರಳೀಧರನ್‌, ಪಟ್ಟಣಂತಿಟ್ಟ ಕ್ಷೇತ್ರದಿಂದ ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್‌ ಅಥವಾ ಸಿನಿಮಾ ನಟ ಉನ್ನಿ ಮುಕುಂದನ್‌, ಕಾಸರಗೋಡು ಕ್ಷೇತ್ರದಿಂದ ಪಿ.ಕೆ.ಕೃಷ್ಣದಾಸ್‌ ಅಥವಾ ಕೆ.ಶ್ರೀಕಾಂತ್‌, ಎರ್ನಾಕುಲಂ ಕ್ಷೇತ್ರದಿಂದ ಅನೀಲ್‌ ಆಂಟೋನಿ ಅಥವಾ ವಿನೀತಾ ಹರಿಹರನ್‌ ಕಣ್ಣಕ್ಕಿಳಿಸಲು ಬಿಜೆಪಿ ಚಿಂತಿಸಿದೆ. ಇದೇ ವೇಳೆ ಪಕ್ಷ ಬಲವಾಗಿರುವ ಕ್ಷೇತ್ರದಲ್ಲಿ ಶೋಭಾ ಸುರೇಂದ್ರನ್‌ ಅವರು ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next