Advertisement

ಮನೋಹರ್‌ ಅವಧಿ ಇನ್ನೆರಡು ತಿಂಗಳು ವಿಸ್ತರಣೆ ?

10:06 AM Apr 25, 2020 | Sriram |

ಹೊಸದಿಲ್ಲಿ: ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)ನ ಮಂಡಳಿ ಸಭೆ ಮುಂದೂಡುವ ಸಾಧ್ಯತೆಯಿದೆ.

Advertisement

ಹೀಗಾಗಿ ಐಸಿಸಿ ಚೇರ್ಮನ್‌ ಶಶಾಂಕ್‌ ಮನೋಹರ್‌ ಅವರು ಇನ್ನೆರಡು ತಿಂಗಳು ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ಕೋವಿಡ್-19 ಸಮಸ್ಯೆ ಇಲ್ಲದಿದ್ದರೆ ಮನೋಹರ್‌ ಮುಂದಿನ ಜೂನ್‌ನಲ್ಲಿ ಹುದ್ದೆಯಿಂದ ಕೆಳಗಿಳಿಯಬೇಕಿತ್ತು.

ಮನೋಹರ್‌ ಬಳಿಕ ಈ ಪ್ರತಿಷ್ಠಿತ ಹುದ್ದೆಯನ್ನು ಇಂಗ್ಲೆಂಡ್‌ ಆ್ಯಂಡ್‌ ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ)ಯ ಚೇರ್ಮನ್‌ ಕಾಲಿನ್‌ ಗ್ರೇವ್ಸ್‌ ಆಲಂಕರಿಸುವುದು ಖಚಿತವಾಗಿದೆ. ಎರಡು ವರ್ಷಗಳ ಚೇರ್ಮನ್‌ ಹುದ್ದೆಯನ್ನು ಮೂರನೇ ಬಾರಿ ಸ್ವೀಕರಿಸದಿರಲು ಮನೋಹರ್‌ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಮನೋಹರ್‌ ಹೊರಹೋಗುವುದು ಖಚಿತ, ಆದರೆ ಜೂನ್‌ನಲ್ಲಿ ನಡೆಯಬೇಕಾದ ಮಂಡಳಿ ಸಭೆ ಮುಂದೂಡುವ ಸಾಧ್ಯತೆ ಇರುವ ಕಾರಣ ಅವರು ಇನ್ನೆರಡು ತಿಂಗಳು ಹುದ್ದೆಯಲ್ಲಿ ಇರುವ ಸಾಧ್ಯತೆಯಿದೆ ಎಂದು ಹೆಸರು ಹೇಳಲು ಇಚ್ಛಿಸದ ಐಸಿಸಿ ಮಂಡಳಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಗ್ರೇವ್ಸ್‌ ಫೇವರಿಟ್‌
2020ರ ನವೆಂಬರ್‌ನಲ್ಲಿ ಇಸಿಬಿಯ ಚೇರ್ಮನ್‌ ಹುದ್ದೆ ಯಿಂದ ಕೆಳಗಿಳಿಯಲಿರುವ ಗ್ರೇವ್ಸ್‌ ಅವರು ಐಸಿಸಿಯ ಉನ್ನತ ಹುದ್ದೆಗೇರುವ ಫೇವರಿಟ್‌ ವ್ಯಕ್ತಿಯಾಗಿದ್ದಾರೆ. ಅವರಿಗೆ ಇಂಗ್ಲೆಂಡ್‌, ನ್ಯೂಜಿಲ್ಯಾಂಡ್‌, ಆಸ್ಟ್ರೇಲಿಯ ಮತ್ತು ವೆಸ್ಟ್‌ಇಂಡೀಸ್‌ ಮಂಡಳಿಗಳು ಗ್ರೇವ್ಸ್‌ ಅವರಿಗೆ ಬೆಂಬಲ ಸೂಚಿಸಲಿವೆ. ಅವರು ಬಿಸಿಸಿಐ ಜತೆಯೂ ನಿಕಟ ಸಂಪರ್ಕ ಇಟ್ಟುಕೊಂಡಿದ್ದಾರೆ. ಆದರೆ ಬಿಸಿಸಿಐ ಇಷ್ಟರವರೆಗೆ ಅವರಿಗೆ ನೇರ ಬೆಂಬಲ ವ್ಯಕ್ತಪಡಿಸಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next