Advertisement

ಕೊಹ್ಲಿ, ಜಡೇಜಾ ʻಪಠಾಣ್‌ʼ ಸ್ಟೆಪ್‌ಗೆ ಶಾರೂಖ್‌ ಖಾನ್‌ ಫಿದಾ..!

04:26 PM Feb 14, 2023 | Team Udayavani |

ನವದೆಹಲಿ: ಪಠಾಣ್‌ ಸಿನೆಮಾ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿದ ಬಳಿಕ ಶಾರೂಖ್‌ ಖಾನ್‌ ಟ್ವಿಟರ್‌ನಲ್ಲಿ ಪ್ರೇಮಿಗಳ ದಿನದ ಅಂಗವಾಗಿ #AskSRK ಅನ್ನೋ ಪ್ರಶ್ನೋತ್ತರ ಸೆಷನ್‌ ಒಂದನ್ನು ಹಮ್ಮಿಕೊಂಡಿದ್ದರು.

Advertisement

ಕೆಲವು ನಿಮಿಷಗಳ ಕಾಲ ನಡೆದ ಈ ಸೆಷನ್‌ನಲ್ಲಿ ಸುಮಾರಷ್ಟು ಜನ ಕೇಳಿದ ಪ್ರಶ್ನೆಗಳಿಗೆ ಶಾರೂಖ್‌  ತಮಾಷೆಯಾಗಿಯೇ ಉತ್ತರಿಸಿದರು. ಕೆಲವು ಮಂದಿ ಶಾರೂಖ್‌ ಮತ್ತು ಪತ್ನಿ ಗೌರಿ ಖಾನ್‌ ಅವರ ನಡುವಿನ ಪ್ರೀತಿಯ ವಿಚಾರಕ್ಕೆ ಸಂಬಂಧಿಸಿ ಅವರ ಕಾಲೆಳೆಯುವ ಪ್ರಯತ್ನವನ್ನೂ ಮಾಡಿದ್ರು. ಎಲ್ಲದಿಕ್ಕೂ ಶಾರೂಖ್‌ ಫನ್ನಿಯಾಗಿ ಸಂಯಮದಿಂದ ಉತ್ತರಿಸಿದ್ದಾರೆ.

ಈ ಮಧ್ಯೆ ಅಭಿಮಾನಿಯೋರ್ವ ಇತ್ತೀಚಿನ ಭಾರತ-ಆಸ್ಟ್ರೇಲಿಯಾ‌ ನಡುವಿನ ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸಂದರ್ಭ ವಿರಾಟ್‌ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರು ಪಠಾಣ್‌ ಚಿತ್ರದ ʻಝೂಮೆ ಜೋ ಪಠಾಣ್‌ʼ ಹಾಡಿಗೆ ಸ್ಟೆಪ್‌ ಹಾಕಿದ್ದರ ಬಗ್ಗೆ ವಿಚಾರಿಸುತ್ತಾ, ನಿಮಗೆ ಏನನ್ನಿಸಿತ್ತು ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಶಾರೂಖ್‌, ʻವಿರಾಟ್‌ ಮತ್ತು ಜಡೇಜಾ ಇಬ್ಬರೂ ನನಗಿಂತ ಚೆನ್ನಾಗಿ ಸ್ಟೆಪ್‌ ಹಾಕಿದ್ದಾರೆ. ನಾನೂ ವಿರಾಟ್‌ ಹಾಗೂ ಜಡೇಜಾರಿಂದ ಕಲಿಯಬೇಕಾಗಿದೆʼ ಎಂದು ಬರೆದುಕೊಂಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next