Advertisement

ರಾಕೇಶ್ ರೋಷನ್ ಮೇಲೆ ಶೂಟೌಟ್ ಪ್ರಕರಣ: ಪರಾರಿಯಾಗಿದ್ದ ಶಾರ್ಪ್ ಶೂಟರ್ ಬಂಧನ

03:27 PM Oct 10, 2020 | Nagendra Trasi |

ಮಹಾರಾಷ್ಟ್ರ/ಥಾಣೆ:ಬಾಲಿವುಡ್ ಖ್ಯಾತ ನಿರ್ದೇಶಕ ರಾಕೇಶ್ ರೋಷನ್ ಅವರ ಮೇಲೆ 2000ನೇ ಇಸವಿಯಲ್ಲಿ ದಾಳಿ ನಡೆಸಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ನಟೋರಿಯಸ್ ಕ್ರಿಮಿನಲ್, ಶಾರ್ಪ್ ಶೂಟರ್ ನನ್ನು ಬಂಧಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಕುಖ್ಯಾತ ಕ್ರಿಮಿನಲ್ ಸುನೀಲ್ ವಿ ಗಾಯಕ್ವಾಡ್ ನನ್ನು ಶುಕ್ರವಾರ 9ಗಂಟೆ ರಾತ್ರಿ ಕಲ್ವಾದ ಪಾರ್ಸಿಕ್ ಸರ್ಕಲ್ ಪ್ರದೇಶದಲ್ಲಿ ಬಂಧಿಸಲಾಗಿದೆ. ಗಾಯಕ್ವಾಡ್ ಪಾರ್ಸಿಕ್ ಸರ್ಕಲ್ ಪ್ರದೇಶಕ್ಕೆ ಬರುತ್ತಾನೆ ಎಂಬ ಖಚಿತ ಮಾಹಿತಿ ಪಡೆದ ನಂತರ ಆತನನ್ನು ಬಂಧಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ಅನಿಲ್ ಹೊನ್ರಾವ್ ತಿಳಿಸಿದ್ದಾರೆ.

ಗಾಯಕ್ವಾಡ್ ವಿರುದ್ಧ 11 ಕೊಲೆ ಪ್ರಕರಣ, ಏಳು ಕೊಲೆ ಯತ್ನದ ಪ್ರಕರಣಗಳು ದಾಖಲಾಗಿದ್ದವು. 2000ನೇ ಇಸವಿಯಲ್ಲಿ ರಾಕೇಶ್ ರೋಷನ್ ಮೇಲೆ ನಡೆಸಿದ ದಾಳಿಯೂ ಸೇರಿದೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.

2000ನೇ ಇಸವಿ ಜನವರಿಯಲ್ಲಿ ಮುಂಬೈನ ಪಶ್ಚಿಮ ವಲಯದಲ್ಲಿನ ಸಾಂತಾ ಕ್ರೂಝ್ ಕಚೇರಿಯ ಹೊರಭಾಗದಲ್ಲಿ ರಾಕೇಶ್ ರೋಷನ್ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಆರೋಪಿ ಆರು ಸುತ್ತು ಗುಂಡಿನ ದಾಳಿ ನಡೆಸಿದ್ದ, ಇದರಲ್ಲಿ ಎರಡು ಗುಂಡು ರಾಕೇಶ್ ರೋಷನ್ ಗೆ ತಗುಲಿತ್ತು ಎಂದು ವರದಿ ಹೇಳಿದೆ.

ಕೊಲೆ ಪ್ರಕರಣದ ಆರೋಪದಲ್ಲಿ ಗಾಯಕ್ವಾಡ್ ಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಾಸಿಕ್ ಸೆಂಟ್ರಲ್ ಜೈಲಿನಲ್ಲಿದ್ದ ಈತ ಜೂನ್ 26ರಂದು 28 ದಿನಗಳ ಕಾಲದ ಪೆರೋಲ್ ಮೇಲೆ ಹೊರಬಂದಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Advertisement

ಪೆರೋಲ್ ಅವಧಿ ಮುಗಿದ ನಂತರ ಗಾಯಕ್ವಾಡ್ ಜೈಲಿಗೆ ವಾಪಸ್ ಆಗಲಿದ್ದಾನೆ ಎಂದು ಅಧಿಕಾರಿಗಳು ನಿರೀಕ್ಷಿಸಿದ್ದರು. ಆದರೆ ಆತ ಹಾಗೆ ಮಾಡದೆ ಅಡಗಿಕೊಂಡಿದ್ದ. ಕೊನೆಗೂ ಕಳೆದ ರಾತ್ರಿ ಪೊಲೀಸರು ಮತ್ತೆ ಬಂಧಿಸಿದ್ದಾರೆ.

ಅಧಿಕಾರಿಗಳ ಮಾಹಿತಿ ಪ್ರಕಾರ, 1999 ಮತ್ತು 2000ನೇ ಇಸವಿ ವೇಳೆ ಈ ಕ್ರಿಮಿನಲ್ ಸಕ್ರಿಯನಾಗಿದ್ದ. ಅಲ್ಲದೇ ಹಲವಾರು ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿದ್ದ. ಗಾಯಕ್ವಾಡ್ ಕುಖ್ಯಾತ ಗ್ಯಾಂಗ್ ಗಳಾದ ಅಲಿ ಬುಡೇಶ್ ಮತ್ತು ಸುಭಾಶ್ ಸಿಂಗ್ ಠಾಕೂರ್ ನೇತೃತ್ವದ ಗ್ಯಾಂಗ್ ಜತೆ ಸಂಪರ್ಕ ಹೊಂದಿದ್ದ.

Advertisement

Udayavani is now on Telegram. Click here to join our channel and stay updated with the latest news.

Next