Advertisement

Sila Nodigalil; ತಮಿಳು ಸಿನಿಮಾಕ್ಕೆ ಶರ್ಮಿಳಾ ಸಾಥ್‌

02:49 PM Nov 14, 2023 | Team Udayavani |

ನಾಯಕಿ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಶರ್ಮಿಳಾ ಮಾಂಡ್ರೆ ಈಗ ತಮಿಳು ಚಿತ್ರವೊಂದರ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಸಿಲ ನೋಡಿಗಳಿಲ ಎಂಬ ಸಿನಿಮಾಕ್ಕೆ ಶರ್ಮಿಳಾ ಸಾಥ್‌ ನೀಡಿದ್ದಾರೆ. ಮಲೇಷಿಯಾ ಮೂಲದ ಪುನ್ನಗೈ ಪೂ ಗೀತಾ ನಿರ್ಮಾಣ ಮಾಡುತ್ತಿದ್ದು, ಶರ್ಮಿಳಾ ಮಾಂಡ್ರೆ ಕ್ರಿಯೇಟಿವ್‌ ಪ್ರೊಡ್ಯೂಸರ್‌ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಹಿಂದೆ “ಮುಂದಿನ ನಿಲ್ದಾಣ’ ಎಂಬ ಚಿತ್ರ ನಿರ್ದೇಶಿಸಿದ್ದ ವಿನಯ್‌ ಭಾರದ್ವಾಜ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

Advertisement

“ಸಿಲ ನೋಡಿಗಳಿಲ ಚಿತ್ರ ನನಗೆ ಸಿಗಲು ಲೂಸಿಯಾ ಪವನ್‌ ಕುಮಾರ್‌ ಕಾರಣ. ಅವರ ಮೂಲಕ ನನಗೆ ಶರ್ಮಿಳಾ ಮಾಂಡ್ರೆ ಅವರ ಪರಿಚಯವಾಯಿತು. ಮಲೇಷಿಯಾದಲ್ಲಿ ಖ್ಯಾತ ಆರ್‌ ಜೆ ಆಗಿ ಕಾರ್ಯನಿರ್ವಹಿಸುತ್ತಿರುವ ಪುನ್ನಗೈ ಪೂ ಗೀತಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ ನಟನೆ ಕೂಡ ಮಾಡಿದ್ದಾರೆ. ಮೂರು ಪ್ರಮುಖ ಪಾತ್ರಗಳ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ರಿಚರ್ಡ್‌ ರಿಷಿ, ಪುನ್ನಗೈ ಪೂ ಗೀತಾ ಹಾಗೂ ಯಶಿಕಾ ಆನಂದ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಲಂಡನ್‌ ನಲ್ಲಿ ವಾಸವಿರುವ ಗಂಡ-ಹೆಂಡತಿ ನಡುವೆ ಮತ್ತೂಬ್ಬ ಯುವತಿಯ ಆಗಮನವಾಗುತ್ತದೆ. ಅಲ್ಲೊಂದು ಕೊಲೆ ಕೂಡ ಆಗುತ್ತದೆ. ಈ ಕೊಲೆ ಮಾಡಿದ್ದು ಯಾರು? ಇದು ನಿಜವಾಗಿಯೂ ಕೊಲೆನಾ? ಎಂಬ ಕುತೂಹಲಕಾರಿ ಅಂಶಗಳು ನಮ್ಮ ಚಿತ್ರದಲ್ಲಿದೆ. ಸಿಲ ನೋಡಿಗಳಿಲ್ಲ ಎಂದರೆ ಕೆಲವೇ ಕ್ಷಣಗಳಲಿ ಎಂದು ಅರ್ಥ. ಐದು ಹಾಡುಗಳು ಈ ಚಿತ್ರದಲ್ಲಿದ್ದು, ಐದು ಖ್ಯಾತ ಸಂಗೀತ ನಿರ್ದೇಶಕರು ಸಂಗೀತ ಸಂಯೋಜನೆ ಮಾಡಿದ್ದಾರೆ. ಮೊದಲು ಚಿತ್ರ ತಮಿಳಿನಲ್ಲಿ ನಿರ್ಮಾಣವಾಗಿ ಬಿಡುಗಡೆಯಾಗುತ್ತಿದೆ. ನಂತರದ ದಿನಗಳಲ್ಲಿ ಕನ್ನಡದಲ್ಲಿಯೂ ನಿರ್ಮಿಸುವ ಯೋಜನೆ ಇದೆ’ಎಂದರು ನಿರ್ದೇಶಕ ವಿನಯ್‌.

“ಗಾಳಿಪಟ 2 ಚಿತ್ರದ ನಂತರ ನಾನು ಪವನ್‌ ಕುಮಾರ್‌ ಅವರ ಜೊತೆ ಈ ಚಿತ್ರದ ಬಗ್ಗೆ ಮಾತನಾಡಿದ್ದೆ. ಅವರು ಧೂಮಂ ಚಿತ್ರದಲ್ಲಿ ಬ್ಯುಸಿಯಾಗಿದ್ದರಿಂದ ವಿನಯ್‌ ಅವರನ್ನು ಪರಿಚಯಿಸಿದರು. ಮುಂದಿನ ನಿಲ್ದಾಣ ಚಿತ್ರ ನೋಡಿದೆ. ವಿನಯ್‌ ಅವರ ನಿರ್ದೇಶನ ಇಷ್ಟವಾಯಿತು. ಈ ಚಿತ್ರವನ್ನು ವಿನಯ್‌ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ನಾನು ಈ ಚಿತ್ರದಲ್ಲಿ ನಟಿಸಿಲ್ಲ. ಕ್ರಿಯೇಟಿವ್‌ ಪ್ರೊಡ್ಯೂಸರ್‌ ಆಗಿ ಕಾರ್ಯ ನಿರ್ವಹಿಸಿದ್ದೇನೆ. ನಿರ್ಮಾಪಕರು ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ನವೆಂಬರ್‌ 24 ರಂದು ಪ್ರಪಂಚದಾದ್ಯಂತ ಈ ಚಿತ್ರ ಬಿಡುಗಡೆಯಾಗಲಿದೆ’ ಎನ್ನುವುದು ಶರ್ಮಿಳಾ ಮಾಂಡ್ರೆ.

Advertisement

Udayavani is now on Telegram. Click here to join our channel and stay updated with the latest news.

Next