Advertisement

ಗೆಳೆಯರ ಜತೆ Netflix password ಹಂಚಿಕೊಂಡಿದ್ದೀರಾ?ಇನ್ಮುಂದೆ ಹೆಚ್ಚುವರಿ ಶುಲ್ಕ ಪಾವತಿಸಬೇಕು

04:52 PM Mar 17, 2022 | Team Udayavani |

ನವದೆಹಲಿ: ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ಪ್ಲ್ಯಾಟ್ ಫಾರಂ ನೆಟ್ ಫ್ಲಿಕ್ಸ್ ಖಾತೆ ಹೊಂದಿರುವವರು ತಮ್ಮ ಖಾತೆಯ ಪಾಸ್ ವರ್ಡ್ ಅನ್ನು ಗೆಳೆಯ/ಗೆಳತಿಯರು ಹಾಗೂ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಂಡು ಉಚಿತವಾಗಿ ವೆಬ್ ಸೀರಿಸ್ , ಸಿನಿಮಾ ವೀಕ್ಷಿಸುತ್ತಿದ್ದರೆ ಇನ್ನು ಮುಂದೆ ಅದಕ್ಕೆ ಕಡಿವಾಣ ಬೀಳಲಿದೆ.

Advertisement

ಇದನ್ನೂ ಓದಿ:ಇದು ಅಪಾಯಕಾರಿ: ನಾಗರಹಾವುಗಳ ಜತೆ ಹುಡುಗಾಟವಾಡಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದ!

ಇದೀಗ ಜನಪ್ರಿಯ ನೆಟ್ ಫ್ಲಿಕ್ಸ್ ತನ್ನ ಬಳಕೆದಾರರು ತಮ್ಮ ಖಾತೆಯ ಪಾಸ್ ವರ್ಡ್ ಗಳನ್ನು ಬೇರೊಬ್ಬರ ಜತೆ ಹಂಚಿಕೊಂಡರೆ ಅದಕ್ಕೆ ಹೆಚ್ಚುವರಿಯಾಗಿ ಶುಲ್ಕ ವಿಧಿಸಲು ಸಿದ್ಧತೆ ನಡೆಸಿರುವುದಾಗಿ ವರದಿ ತಿಳಿಸಿದೆ.

ನೆಟ್ ಫ್ಲಿಕ್ಸ್ ಖಾತೆ ಹೆಚ್ಚು ಜನಪ್ರಿಯಗೊಂಡಿದ್ದರೂ ಕೂಡಾ, ನೆಟ್ ಫ್ಲಿಕ್ಸ್ ಅನ್ನು ಯಾವಾಗ ಮತ್ತು ಹೇಗೆ ಶೇರ್ ಮಾಡಿಕೊಳ್ಳಬಹುದು ಎಂಬ ಬಗ್ಗೆ ಬಳಕೆದಾರರು ಕೆಲವೊಂದು ಗೊಂದಲ ಸೃಷ್ಟಿಸಿದ್ದಾರೆ. ಇದರ ಪರಿಣಾಮ ನೆಟ್ ಫ್ಲಿಕ್ಸ್ ಖಾತೆಗಳನ್ನು ತಮ್ಮ ಕುಟುಂಬ ಸದಸ್ಯರ (ಅಥವಾ ಗೆಳೆಯರು) ಜತೆ ಹಂಚಿಕೊಳ್ಳುವುದರಿಂದ ಹೂಡಿಕೆ ನಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವಂತಾಗಿದೆ ಎಂದು ನೆಟ್ ಫ್ಲಿಕ್ಸ್ ನ ನಿರ್ದೇಶಕ ಚೆಂಗಾಯಿ ಲೊಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶುಲ್ಕ ಹೇಗೆ ವಿಧಿಸಲಾಗುತ್ತದೆ?

Advertisement

ನೆಟ್ ಫ್ಲಿಕ್ಸ್  ಖಾತೆಯ ಮುಖ್ಯ ಬಳಕೆದಾರರಿಗೆ ಇ-ಮೇಲ್ ಮೂಲಕ ಕೋಡ್ ಕಳುಹಿಸಲಾಗುತ್ತದೆ. ಒಂದು ವೇಳೆ ನೆಟ್ ಫ್ಲಿಕ್ಸ್ ಖಾತೆಯನ್ನು ಮನೆಯ ಮತ್ತೊಬ್ಬ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳುವ ಸಂದರ್ಭದಲ್ಲಿ ಬಳಕೆದಾರ ಕಡ್ಡಾಯವಾಗಿ ಕೋಡ್ ಅನ್ನು ವೆರಿಫೈ ಮಾಡಬೇಕಾಗುತ್ತದೆ. ಇದರಿಂದಾಗಿ ನೆಟ್ ಫ್ಲಿಕ್ಸ್ ಖಾತೆಯ ಒಂದು ಪಾಸ್ ವರ್ಡ್ ಎಷ್ಟು ಮೊಬೈಲ್ ನಲ್ಲಿ ಬಳಕೆಯಾಗುತ್ತಿದೆ ಎಂಬುದು ತಿಳಿಯಲಿದ್ದು, ಈ ಮೂಲಕ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

ನೆಟ್ ಫ್ಲಿಕ್ಸ್ ಈಗಾಗಲೇ ಕುಟುಂಬ ಸದಸ್ಯರಲ್ಲದವರ ಜೊತೆ ತಮ್ಮ ನೆಟ್ ಫ್ಲಿಕ್ಸ್ ಪಾಸ್ ವರ್ಡ್ ಗಳನ್ನು ಹಂಚಿಕೊಂಡಲ್ಲಿ ಹೆಚ್ಚುವರಿಯಾಗಿ 2ರಿಂದ 3 ಡಾಲರ್ ಹಣ ಪಾವತಿಸುವ ಎರಡು ಹೊಸ ಫೀಚರ್ ಅನ್ನು ಆಯ್ದ ಪ್ರದೇಶದಲ್ಲಿ ಜಾರಿಗೆ ತಂದಿದೆ. ಅಲ್ಲದೇ ಇತ್ತೀಚೆಗಷ್ಟೇ ಬ್ರಿಟನ್ ಮತ್ತು ಐರ್ಲೆಂಡ್ ನಲ್ಲಿ ನೆಟ್ ಫ್ಲಿಕ್ಸ್ ಸಬ್ಸ್ ಕ್ರಿಪ್ಶನ್ ಬೆಲೆಯನ್ನು ಹೆಚ್ಚಿಸಿರುವುದಾಗಿ ವರದಿ ತಿಳಿಸಿದೆ.

ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ಪ್ಲ್ಯಾಟ್ ಫಾರಂ ನೆಟ್ ಫ್ಲಿಕ್ಸ್ ಬ್ರಿಟನ್ ನಲ್ಲಿ 14 ಮಿಲಿಯನ್ ಸಬ್ಸ್ ಕ್ರೈಬರ್ ಅನ್ನು ಹೊಂದಿದ್ದು, ಐರ್ಲೆಂಡ್ ನಲ್ಲಿ 6,00,000 ಸಬ್ಸ್ ಕ್ರೈಬರ್ ಇದ್ದಾರೆ. ಸ್ಟ್ಯಾಂಡರ್ಡ್ ಸಬ್ಸ್ ಕ್ರಿಪ್ಶನ್ ನಲ್ಲಿ ಎರಡು ಡಿವೈಸ್ ಗಳಲ್ಲಿ ಎಚ್ ಡಿ ದರ್ಜೆಯ ವಿಡಿಯೋ ವೀಕ್ಷಿಸಲು 7.82 ಡಾಲರ್ ಶುಲ್ಕ ವಿಧಿಸಿತ್ತು. ಆದರೆ ಈಗ ಬ್ರಿಟನ್ ನಲ್ಲಿ 9.13 ಡಾಲರ್ ಗೆ ಏರಿಕೆ ಮಾಡಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next