ಮಂಗಳೂರು: ಶರೀಅತ್ ಅಲ್ಲಾಹನಿಂದ ರೂಪಿತವಾಗಿದ್ದು, ಜಗತ್ತು ಅಂತ್ಯಗೊಳ್ಳುವವರೆಗೂ ನೆಲೆಗೊಳ್ಳಲಿದೆ. ಅದಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುವುದು ಮುಸ್ಲಿಮರ ಕರ್ತವ್ಯ. “ಸಮಸ್ತ’ ಶರೀಅತ್ ಸಂರಕ್ಷಣೆಗೆ ಕಟಿಬದ್ಧವಾಗಿದೆ ಎಂದು ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಅಧ್ಯಕ್ಷ ಅಲ್‌ಹಾಜ್ ಸೈಯದ್ ಜಿಫ್ರಿ ಮುತ್ತುಕೋಯ ತಂšಳ್ ಹೇಳಿದರು.
ಸಮಸ್ತ ಶರೀಅತ್ ಸಂರಕ್ಷಣಾ ಸಮಿತಿ ವತಿಯಿಂದ “ಸಂವಿಧಾನಾತ್ಮಕ ಹಕ್ಕುಗಳ ಸಂರಕ್ಷಣೆಗಾಗಿ ಕೈ ಜೋಡಿಸೋಣ’ ಎಂಬ ಘೋಷಣೆಯೊಂದಿಗೆ ನೆಹರೂ ಮೈದಾನದಲ್ಲಿ ರವಿವಾರ ನಡೆದ ಬೃಹತ್ “ಶರೀಅತ್ ಸಂರಕ್ಷಣಾ ರ್ಯಾಲಿ ಮತ್ತು ಸಮ್ಮೇಳನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರಿನ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಸಚಿವ ಯು.ಟಿ. ಖಾದರ್ ಮಾತನಾಡಿ, ಶರೀಅತ್ ರಕ್ಷಣೆಗೆ ಯಾವ ತ್ಯಾಗಕ್ಕೂ ಸಿದ್ಧ ಎಂದರು. ಸೈಯದ್ ಜಿಫ್ರಿ ಮುತ್ತುಕೋಯ ತಂšಳ್ ಅವರು ಶಹೀದ್ ಸಿ.ಎಂ. ಅಬ್ದುಲ್ಲ ಮುಸ್ಲಿಯಾರ್ ಅವರ ಕೃತಿಯನ್ನು ಬಿಡುಗಡೆಗೊಳಿಸಿ ಪುತ್ರ ಸಿ.ಎಂ. ಶಾಫಿ ಅವರಿಗೆ ನೀಡಿದರು. ಶೈಖುನಾ ಎಂ.ಟಿ. ಉಸ್ತಾದ್, ಅಬುಸ್ಸಮದ್ ಪೂಕೊಟೂರು, ಸೈಯದ್ ಸ್ವಾದಿಕಲಿ ಶಿಹಾಬ್ ತಂšಳ್ ಪಾಣಕ್ಕಾಡ್, ಎಸ್.ಬಿ. ದಾರಿಮಿ, ಹುಸೈನ್ ದಾರಿಮಿ, ವಕೀಲ ಓನಂಪಳ್ಳಿ ಮುಹಮ್ಮದ್ ಫೈಝಿ, ಹಝತ್ ನಝೀರ್ ಅಝ್ಹರಿ, ಶೈಖುನಾ ಮಿತ್ತಬೈಲ್ ಉಸ್ತಾದ್, ತಬೂಕ್ ದಾರಿಮಿ,ಅನೀಸ್ ಕೌಸರಿ, ಖಾಸೀಂ ದಾರಿಮಿ, ವಕೀಲ ಹನೀಫ್ ಮದನಿ, ಕೇಂದ್ರ ಜುಮಾ ಮಸೀದಿಯ ಖತೀಬ್ ಸದಕತುಲ್ಲಾ ಫೈಝಿ, ಸೈಯದ್ ಝೈನುಲ್ ಆಬಿದೀನ್ ತಂšಳ್, ಶೈಖುನಾ ಜಾಮಿಅಃ ಪ್ರೊಫೆಸರ್ ಅಲಿ ಕುಟ್ಟಿ ಮುಸ್ಲಿಯಾರ್, ಹಾಜಿ, ಶೈಖುನಾ ಖಾಸಿಂ ಉಸ್ತಾದ್, ಸೈಯದ್ ಅಲಿ ತಂšಳ್ ಕುಂಬೋಳ್, ಮಾಜಿ ಶಾಸಕ ಮೊದೀನ್ ಬಾವಾ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಮಹಮ್ಮದ್ ಮಸೂದ್, ಮುಹಮ್ಮದ್ ಹನೀಫ್ ಹಾಜಿ, ಮಾಜಿ ಮೇಯರ್ ಕೆ. ಅಶ್ರಫ್,ಬಿ.ಎಚ್. ಖಾದರ್ ಉಪಸ್ಥಿತರಿದ್ದರು. ಕೆಎಂಎ ಕೊಡುಂಗಾಯಿ, ಅನ್ವರ್ ಮುಸ್ಲಿಯಾರ್ ನಿರೂಪಿಸಿದರು.
ಹಸ್ತಕ್ಷೇಪ ಬೇಡ
ಸಮ್ಮೇಳನ ಸ್ವಾಗತ ಸಮಿತಿ ಸಂಚಾಲಕ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಅವರು ಪ್ರಸ್ತಾವನೆಗೈದು, ಎಲ್ಲ ಧರ್ಮೀಯರಿಗೂ ಬದುಕುವ ಹಕ್ಕನ್ನು ದೇಶದ ಸಂವಿಧಾನ ನೀಡಿದೆ. ಆದರೆ ಇತ್ತೀಚೆಗೆ ಸಂವಿಧಾನವನ್ನೇ ಬುಡಮೇಲು ಮಾಡಿ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸಲಾಗುತ್ತಿದೆ. ನಮ್ಮ ಧಾರ್ಮಿಕತೆ, ಸಂವಿಧಾನ, ಸಂಸ್ಕಾರ ಉಳಿಸಿ ಎಂಬುದು ನಮ್ಮ ಆಗ್ರಹ ಎಂದು ಹೇಳಿದರು.