Advertisement

ಪ್ರತಿ ಜಿಲ್ಲೆಯಲ್ಲೂ ಶರಿಯಾ ಕೋರ್ಟ್‌?

10:30 AM Jul 09, 2018 | Harsha Rao |

ಲಕ್ನೋ: ದೇಶಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಶರಿಯಾ ನ್ಯಾಯಾಲಯ (ದಾರುಲ್‌-ಖಾಝಾ)ಗಳನ್ನು ನಿರ್ಮಿಸಲು ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಚಿಂತನೆ ನಡೆಸಿದೆ. ಇದೇ 15ರಂದು ದೆಹಲಿಯಲ್ಲಿ ನಡೆಯಲಿರುವ ಮಂಡಳಿಯ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ. ಪ್ರಸ್ತುತ ಉತ್ತರಪ್ರದೇಶದಲ್ಲಿ ಇಂಥ 40 ನ್ಯಾಯಾಲಯಗಳಿವೆ. ದೇಶದ ಎಲ್ಲ ಜಿಲ್ಲೆಗಳಲ್ಲೂ ಶರಿಯಾ ಕೋರ್ಟ್‌ ನಿರ್ಮಿಸುವ ಮೂಲಕ ಇಸ್ಲಾಮಿಕ್‌ ಕಾನೂನಿನ ಅನ್ವಯ ಎಲ್ಲ ವಿವಾದಗಳನ್ನು ಬಗೆಹರಿಸುವುದು ನಮ್ಮ ಉದ್ದೇಶ ಎಂದು ಮಂಡಳಿಯ ಹಿರಿಯ ಸದಸ್ಯ ಜಫ‌ರ್ಯಾಬ್‌ ಜಿಲಾನಿ ತಿಳಿಸಿದ್ದಾರೆ. ಈ ಕೋರ್ಟ್‌ ಕಾರ್ಯಾಚರಣೆಗೆ ತಲಾ 50 ಸಾವಿರ  ರೂ. ವೆಚ್ಚವಾಗುತ್ತದೆ. ಈ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದೂ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next