ಮುಂಬಯಿ: ಏಷ್ಯನ್ ಷೇರುಮಾರುಕಟ್ಟೆಯಲ್ಲಿನ ನೀರಸ ವಹಿವಾಟಿನ ಪರಿಣಾಮ ಸೋಮವಾರ (ಸೆಪ್ಟೆಂಬರ್ 13) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 190ಕ್ಕೂ ಅಧಿಕ ಅಂಕ ಕುಸಿತ ಕಂಡಿದೆ. ಇದರಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್ ಷೇರುಗಳು ನಷ್ಟ ಕಂಡಿದೆ.
ಇದನ್ನೂ ಓದಿ:ಸಿದ್ದರಾಮಯ್ಯ ಆಕಸ್ಮಾತ್ ಗೆದ್ದರೂ ವಿರೋಧ ಪಕ್ಷದಲ್ಲೇ ಕೂರಿಸುತ್ತೇನೆ: ಯಡಿಯೂರಪ್ಪ
ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 193.16 ಅಂಕಗಳಷ್ಟು ಇಳಿಕೆಯಾಗಿದ್ದು, 58,111.91 ಅಂಕಗಳಲ್ಲಿ ವಹಿವಾಟು ನಡೆಸಿದೆ. ಇದೇ ರೀತಿ ಎನ್ ಎಸ್ ಎ ನಿಫ್ಟಿ 37.90 ಅಂಕ ಇಳಿಕೆಯಾಗಿ 17,331.35 ಅಂಕಗಳಲ್ಲಿ ವಹಿವಾಟು ನಡೆಸಿದೆ.
ಸೆನ್ಸೆಕ್ಸ್ ಕುಸಿತದ ಪರಿಣಾಮ ಎಚ್ ಸಿಎಲ್ ಟೆಕ್, ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ನೆಸ್ಲೆ ಇಂಡಿಯಾ, ಆ್ಯಕ್ಸಿಸ್ ಬ್ಯಾಂಕ್, ಟೈಟಾನ್ ಹಾಗೂ ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ನಷ್ಟ ಕಂಡಿವೆ.
ಎಚ್ ಡಿಎಫ್ ಸಿ, ಭಾರ್ತಿ ಏರ್ ಟೆಲ್, ಮಾರುತಿ, ಐಟಿಸಿ, ಕೋಟಕ್ ಬ್ಯಾಂಕ್ ಮತ್ತು ಟಾಟಾ ಸ್ಟೀಲ್ ಷೇರುಗಳು ಲಾಭ ಗಳಿಸಿದೆ. ಶುಕ್ರವಾರ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 54.81 ಅಂಕ ಏರಿಕೆಯೊಂದಿಗೆ 58,305.07 ಅಂಕದೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿತ್ತು.