ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಅನಿಶ್ಚಿತ ವಹಿವಾಟಿನ ಪರಿಣಾಮ ಬುಧವಾರ (ಏಪ್ರಿಲ್ 06) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 480ಕ್ಕೂ ಅಧಿಕ ಅಂಕ ಕುಸಿತ ಕಂಡಿದ್ದು, 60,000 ಅಂಕಗಳ ಮಟ್ಟದಿಂದ ಕೆಳಕ್ಕಿಳಿದಿದೆ.
ಇದನ್ನೂ ಓದಿ:ಉರ್ದು ಮಾತನಾಡಲಿಲ್ಲ ಎಂದು ಚಂದ್ರು ಕೊಲೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 481.86 ಅಂಕ ಇಳಿಕೆಯಾಗಿದ್ದು, 59,694 ಅಂಕಗಳಲ್ಲಿ ಆರಂಭಿಕ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 138.25 ಅಂಕ ಕುಸಿತದೊಂದಿಗೆ 17,819.19 ಅಂಕ ತಲುಪಿದೆ.
ಸೆನ್ಸೆಕ್ಸ್ ಕುಸಿತದಿಂದ ಎಚ್ ಡಿಎಫ್ ಸಿ ಬ್ಯಾಂಕ್, ಎಚ್ ಡಿಎಫ್ ಸಿ, ಕೋಟಕ್ ಮಹೀಂದ್ರ ಬ್ಯಾಂಕ್, ವಿಪ್ರೋ, ಮಹೀಂದ್ರ ಆ್ಯಂಡ್ ಮಹೀಂದ್ರ, ಆ್ಯಕ್ಸಿಸ್ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಎನ್ ಟಿಪಿಸಿ, ಟಾಟಾ ಸ್ಟೀಲ್, ಎಲ್ ಆ್ಯಂಡ್ ಟಿ ಮತ್ತು ಆಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಲಾಭಗಳಿಸಿದೆ.
ಮಂಗಳವಾರ(ಏ.05) ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 435.24 ಅಂಕ ಏರಿಕೆಯೊಂದಿಗೆ 60,176.50 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 96 ಅಂಕ ಏರಿಕೆಯಾಗಿದ್ದು, 17,957.40 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿತ್ತು.