ನವದೆಹಲಿ: ಜಾಗತಿಕ ಷೇರುಮಾರುಕಟ್ಟೆಯ ಭರ್ಜರಿ ವಹಿವಾಟಿನ ಪರಿಣಾಮ ಬುಧವಾರ(ಡಿಸೆಂಬರ್ 01) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಬರೋಬ್ಬರಿ 620 ಅಂಕ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಒಮಿಕ್ರಾನ್ ಆತಂಕ: ಅಂತಾರಾಷ್ಟ್ರೀಯ ವಿಮಾನ ಸಂಚಾರ ಪುನರಾರಂಭ ಮುಂದೂಡಿಕೆ: ಕೇಂದ್ರ
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 619.92 ಅಂಕ ಏರಿಕೆಯೊಂದಿಗೆ 57,684.79 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 183.70 ಅಂಕ ಏರಿಕೆಯೊಂದಿಗೆ 17,166.90 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.
ಇಂಡಸ್ ಇಂಡ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಎಸ್ ಬಿಐ, ಮಾರುತಿ, ಟೆಕ್ ಮಹೀಂದ್ರ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಡಾ.ರೆಡ್ಡೀಸ್, ಆಲ್ಟ್ರಾ ಟೆಕ್ ಸಿಮೆಂಟ್, ಸನ್ ಫಾರ್ಮಾ, ಭಾರ್ತಿ ಏರ್ ಟೆಲ್ ಮತ್ತು ಟೈಟಾನ್ ಷೇರುಗಳು ನಷ್ಟ ಕಂಡಿದೆ.
ಹಾಂಗ್ ಕಾಂಗ್, ಶಾಂಘೈ, ಸಿಯೋಲ್ ಮತ್ತು ಟೋಕಿಯೋ ಷೇರುಮಾರುಕಟ್ಟೆಯ ಸೆನ್ಸೆಕ್ಸ್ ಇಳಿಕೆ ಕಂಡಿದ್ದು, ಯುರೋಪ್ ಷೇರುಪೇಟೆಯಲ್ಲಿ ಧನಾತ್ಮಕ ವಹಿವಾಟು ನಡೆದಿರುವುದಾಗಿ ವರದಿ ತಿಳಿಸಿದೆ.