ಮುಂಬಯಿ: ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಗುರುವಾರ(ಆಗಸ್ಟ್ 05) ಆರಂಭಿಕ ಹಂತದಲ್ಲಿ 200 ಅಂಕಗಳಷ್ಟು ಏರಿಕೆ ಕಂಡಿದೆ. ಆದರೆ ಹೆಚ್ಚಿನ ಲಾಭಾಂಶ ಕಾಯ್ದಿರಿಸಿದ ಪರಿಣಾಮ ಜಾಗತಿಕ ಷೇರುಮಾರುಕಟ್ಟೆಯ ಮಿಶ್ರ ವಹಿವಾಟಿನ ಪರಿಣಾಮ ಮುಂಬಯಿ ಷೇರುಮಾರುಕಟ್ಟೆ ವಹಿವಾಟು ಅಲ್ಪ ಕುಸಿತ ಕಂಡಿದೆ.
ಇದನ್ನೂ ಓದಿ:ತಾಂತ್ರಿಕ ಸಮಸ್ಯೆಯಿಂದ ಕೊಚ್ಚಿ ಹೋದ ಪುಲಿಚಿಂತಲ ಅಣೆಕಟ್ಟಿನ 16ನೇ ಗೇಟ್..!
ಮುಂಬಯಿ ಷೇರು ಮಾರುಕಟ್ಟೆ ವಹಿವಾಟು ಆರಂಭದಲ್ಲಿ ಸಾರ್ವಕಾಲಿಕ 54,576 ಮಟ್ಟಕ್ಕೆ ತಲುಪಿದ್ದು, ಬಳಿಕ 8.33ರಷ್ಟು ಅಂಕ ಕುಸಿತ ಕಂಡಿದ್ದು, 54,361.44 ಅಂಕಗಳ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 8.95ರಷ್ಟು ಇಳಿಕೆಯಾಗಿದ್ದು, 16,249.85 ಅಂಕಗಳ ವಹಿವಾಟು ನಡೆಸಿದೆ.
ಸೆನ್ಸೆಕ್ಸ್ ಇಳಿಕೆ ಪರಿಣಾಮ ಇಂಡಸ್ ಇಂಡ್ ಬ್ಯಾಂಕ್, ಟೈಟಾನ್, ಟಾಟಾ ಸ್ಟೀಲ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಬಜಾಜ್ ಫೈನಾನ್ಸ್ ಮತ್ತು ಎಸ್ ಬಿಐ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಭಾರ್ತಿ ಏರ್ ಟೆಲ್, ಎಚ್ ಸಿಎಲ್ ಟೆಕ್, ಟೆಕ್ ಮಹೀಂದ್ರಾ ಮತ್ತು ಕೋಟಕ್ ಬ್ಯಾಂಕ್ ಷೇರು ಲಾಭಗಳಿಸಿದೆ.
ಬುಧವಾರ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 546.41 ಅಂಕಗಳಷ್ಟು ಏರಿಕೆಯೊಂದಿಗೆ ದಾಖಲೆಯ 54,369.77 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿತ್ತು. ನಿಫ್ಟಿ ಕೂಡಾ 128.05 ಅಂಕ ಏರಿಕೆಯೊಂದಿಗೆ 16,246.85ರ ಗಡಿ ತಲುಪಿತ್ತು.