ಮುಂಬೈ: ಬಾಂಬೆ ಷೇರುಪೇಟೆಯಲ್ಲಿ ಗುರುವಾರ ಹೂಡಿಕೆದಾರರಿಗೆ ಭರ್ಜರಿ ಲಾಭ ತಂದಿದ್ದು, ಹೂಡಿಕೆದಾರರು ಇಂದು ಕೂಡಾ ಲಾಭಾಂಶವನ್ನು ಕಾಯ್ದಿರಿಸಿದ ಪರಿಣಾಮ ಶುಕ್ರವಾರ (ಸೆಪ್ಟೆಂಬರ್ 17) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 125.27 ಅಂಕ ಕುಸಿತ ಕಂಡಿದ್ದು, 59,015.89 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯವಾಗಿದೆ.
ಇದನ್ನೂ ಓದಿ:ನನ್ನ ಜೊತೆ ನೀನಿದ್ರೆ ಮಾತ್ರ ನಟಿಸುತ್ತೇನೆ ಅಂದಿದ್ದ ಶಂಕರ್ : ಉದಯವಾಣಿ ಜೊತೆ ‘ಅನಂತ’ಮಾತು
ಬಾಂಬೆ ಷೇರುಪೇಟೆಯ ಮಧ್ಯಂತರ ಅವಧಿಯಲ್ಲಿ ಸಾರ್ವಕಾಲಿಕ ಗರಿಷ್ಠ 59,737.32 ಅಂಕಗಳಿಗೆ ಏರಿಕೆಯಾಗಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ ಇಂದು 44.35 ಅಂಕ ಇಳಿಕೆಯಾಗಿದ್ದು, 17, 585.15 ಅಂಕಗಳಲ್ಲಿ ವಹಿವಾಟು ಮುಕ್ತಾಯವಾಗಿದೆ.
ಸೆನ್ಸೆಕ್ಸ್ ಇಳಿಕೆಯಿಂದ ಟಾಟಾ ಸ್ಟೀಲ್, ಎಸ್ ಬಿಐ, ಟಿಸಿಎಸ್, ಎಚ್ ಯುಎಲ್, ರಿಲಯನ್ಸ್ ಇಂಡಸ್ಟ್ರೀಸ್, ಸನ್ ಫಾರ್ಮಾ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ನಷ್ಟ ಕಂಡಿವೆ. ಏತನ್ಮಧ್ಯೆ ಕೋಟಕ್ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್, ಭಾರ್ತಿ ಏರ್ ಟೆಲ್, ಮಾರುತಿ, ನೆಸ್ಲೆ ಇಂಡಿಯಾ ಮತ್ತು ಬಜಾಜ್ ಫಿನ್ ಸರ್ವ್ ಷೇರುಗಳು ಲಾಭಗಳಿಸಿವೆ.
ಗುರುವಾರ ಬಾಂಬೆ ಷೇರುಪೇಟೆ ಸೂಚ್ಯಂಕ 417.96 ಅಂಕಗಳಷ್ಟು ಏರಿಕೆಯಾಗಿ, 59,141.15 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿತ್ತು. ಎನ್ ಎಸ್ ಇ ನಿಫ್ಟಿ ಕೂಡಾ ದಾಖಲೆ ಗಡಿ ಮುಟ್ಟಿತ್ತು.