Advertisement

Share Market Business: ಷೇರು ವಹಿವಾಟು-ದಕ್ಷಿಣ ಭಾರತ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ!

05:02 PM May 15, 2024 | |

ಬೆಂಗಳೂರು: ಭಾರತದ ಮುಂಚೂಣಿ ಶೇರು ವ್ಯವಹಾರ ಮತ್ತು ಹೂಡಿಕೆ ವೇದಿಕೆಗಳಲ್ಲೊಂದಾದ ಫೈರ‍್ಸ್, ದೇಶಾದ್ಯಂತದ ಮಹಿಳಾ ಹೂಡಿಕೆದಾರರ ಪ್ರಮುಖ ಪ್ರವೃತ್ತಿ ಹಾಗೂ ಆದ್ಯತೆಗಳನ್ನು ಬಹಿರಂಗಪಡಿಸಿರುವುದಾಗಿ ವರದಿಯಲ್ಲಿ ತಿಳಿಸಿದೆ. ವೇದಿಕೆಯಲ್ಲಿರುವ ದತ್ತಾಂಶವನ್ನು ಬಳಸಿ, ಕಂಪನಿಯು ಅವರ ಆದ್ಯತೆಯ ಶೇರು ವ್ಯವಹಾರದ ಸಾಧನ, ಗಾತ್ರ, ಭೌಗೋಳಿಕ ಹಾಗೂ ಜನಸಂಖ್ಯಾಧರಿತ ವ್ಯಕ್ತಿಚಿತ್ರಣ ಹಾಗೂ ಇತ್ಯಾದಿ ವಿಚಾರಗಳನ್ನು ಕಂಪನಿಯು ಪರಿಶೀಲಿಸಿದೆ. ಸುಮಾರು ಒಂದು ಲಕ್ಷ ಮಹಿಳೆಯರು ಫೈರ‍್ಸ್ ವೇದಿಕೆಯಲ್ಲಿ ಹೂಡಿಕೆ ಹಾಗೂ ಶೇರು ವ್ಯವಹಾರ ನಡೆಸುತ್ತಾರೆ, ಇದು ವೇದಿಕೆಯ ಒಟ್ಟು ಬಳಕೆದಾರರಲ್ಲಿ ಶೇಕಡಾ 15ರಷ್ಟಾಗಿದೆ.

Advertisement

ಅವರು ಪ್ರಾಥಮಿಕವಾಗಿ ಉತ್ಪನ್ನ ಮಾರುಕಟ್ಟೆ, ಈಕ್ವಿಟಿ, ಎಂಸಿಎಕ್ಸ್ (ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್) ಹಾಗೂ ನಗದು ಶೇರು ವ್ಯವಹಾರದಲ್ಲಿ ತೊಡಗಿಸಿಕೊಳ್ಳುತ್ತಾರೆ. ಗಮನಿಸಲಾದ ಪ್ರಮುಖ ಅಂಶಗಳು ಕೆಳಗಿನಂತಿವೆ:

ಸರಾಸರಿ ದೈನಂದಿನ ವಹಿವಾಟಿನ ಪ್ರಮಾಣದ ಪ್ರಕಾರ, ಮಹಿಳೆಯರು ತಮ್ಮ ಸಾಮರ್ಥ್ಯಕ್ಕಿಂತ ಮೇಲ್ಪಟ್ಟು ವಹಿವಾಟು ನಡೆಸುತ್ತಾರೆ, ರಾಷ್ಟ್ರೀಯ ವಹಿವಾಟಿನಲ್ಲಿ ಶೇಕಡಾ 20ರಷ್ಟು ದೈನಂದಿನ ವ್ಯವಹಾರದ ಗಾತ್ರ ಅಂದರೆ, 29,351 ಕೋಟಿ ರೂಪಾಯಿ ವಹಿವಾಟು ಕೇವಲ 15% ಬಳಕೆದಾರರಿಂದಾಗುತ್ತದೆ.

ಒಟ್ಟಾರೆ ಮಹಿಳಾ ಶೇರು ವ್ಯವಹಾರದಾರರಲ್ಲಿ ಸುಮಾರು ಅರ್ಧದಷ್ಟು ದಕ್ಷಿಣ ಭಾರತ ಹಾಗೂ ಮಹಾರಾಷ್ಟ್ರದವರಾಗಿದ್ದಾರೆ ಎಂಬುದು ವಿಶೇಷ.

ಮಹಿಳಾ ಷೇರುದಾರರು ಹೆಚ್ಚಿರುವ ಉನ್ನತ 5 ರಾಜ್ಯಗಳೆಂದರೆ, ಮಹಾರಾಷ್ಟ್ರ (22.38%), ಆಂಧ್ರಪ್ರದೇಶ (10.68%), ಕರ್ನಾಟಕ (7.65%) ಉತ್ತರ ಪ್ರದೇಶ (6.43%) ಹಾಗೂ ಕೇರಳ (5.78%). ಮಹಿಳಾ ಹೂಡಿಕೆದಾರರ ಪ್ರಮುಖ 5 ನಗರಗಳೆಂದರೆ, ಮುಂಬಯಿ (4.61%), ಬೆಂಗಳೂರು (4.19%) ಪುಣೆ (3.93%) ಥಾಣೆ (2.66%) ಹಾಗೂ ಹೈದರಾಬಾದ್ (2.62%). ಭೌಗೋಳಿಕ ಹಂಚಿಕೆ ಮಹಿಳೆಯರಲ್ಲಿ ನಗರ ಕೇಂದ್ರಿತ ಶೇರು ವ್ಯವಹಾರ ಚಟುವಟಿಕೆಗಳತ್ತ ಬೊಟ್ಟು ಮಾಡುತ್ತದೆ, ಅದರಲ್ಲಿ ಉನ್ನತ ನಗರಗಳು ಭಾರತದ ಪ್ರಮುಖ ಆರ್ಥಿಕ ಹಾಗೂ ಐಟಿ ಕೇಂದ್ರಗಳಾಗಿವೆ.

Advertisement

ನಾಗಪುರ (1.87%), ವಿಶಾಖಪಟ್ಟಣ (1.12%) ಸೂರತ್ (1.05%) ಹಾಗೂ ಗುಂಟೂರು (1.00%) ದಂತಹ ಎರಡನೇ ಸ್ತರದ ನಗರಗಳ ಮಹಿಳೆಯರು ಷೇರು ವಹಿವಾಟಿನಲ್ಲಿನ ಪಾಲ್ಗೊಳ್ಳುವಿಕೆಯನ್ನು ಫೈರ‍್ಸ್ ಸಾಕ್ಷೀಕರಿಸಿದೆ.

ದಕ್ಷಿಣದ ಪ್ರಾಬಲ್ಯ : ಆಂಧ್ರ ಪ್ರಥಮ ಸ್ಥಾನದಲ್ಲಿದ್ದರೆ, ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಒಳಗೊಂಡಂತೆ ಒಟ್ಟಾರೆ ಹೂಡಿಕೆದಾರರ ಪೈಕಿ ಶೇಕಡಾ 25ರಷ್ಟು ಮಹಿಳೆಯರು ದಕ್ಷಿಣದವರಾಗಿದ್ದಾರೆ.

ಬೆಂಗಳೂರು, ಹೈದರಾಬಾದ್ ಹಾಗೂ ಚೆನ್ನೈ ಸಹಜವಾಗಿಯೇ ಶೇರು ವ್ಯವಹಾರ ಚಟುವಟಿಕೆಯ ಪ್ರಮುಖ ಕೇಂದ್ರಗಳಾಗಿದ್ದು, ಪ್ರಾಂತ್ಯದ ಎರಡನೇ ಸ್ತರದ ನಗರಗಳಾದಂತಹ ವಿಶಾಖಪಟ್ಟಣ, ಮೈಸೂರು, ತ್ರಿಶೂರು ಹಾಗೂ ಗುಂಟೂರಿನ ಮಹಿಳೆಯರೂ ಶೇರು ವ್ಯವಹಾರದಲ್ಲಿ ತೊಡಗಿಸಿಕೊಂಡಿರುವುದು ಗಮನಾರ್ಹ.

ಆರ್ಥಿಕವಾಗಿ ಸ್ವತಂತ್ರರಾಗಿರುವ ಮಹಿಳೆಯರೇ ಹೂಡಿಕೆ ಹಾಗೂ ಶೇರು ವಹಿವಾಟು ನಡೆಸುತ್ತಿರುವುದು ವಯಸ್ಸಿನ ಆಧಾರದಲ್ಲಿ, ವೇದಿಕೆಯಲ್ಲಿರುವ 58% ಮಹಿಳಾ ವಹಿವಾಟುದಾರರು 26 ರಿಂದ 40 ವರ್ಷ ವಯೋಮಾನದ ಒಳಗಿನವರಾಗಿದ್ದಾರೆ, 41 ರಿಂದ 55 ವರ್ಷ ವಯೋಮಾನದವರು 24% ಇದ್ದರೆ, 9.5% ಮಹಿಳೆಯರು 55 ವರ್ಷ ಮೇಲ್ಪಟ್ಟವರಾಗಿದ್ದಾರೆ ಹಾಗೂ 18 ರಿಂದ 25 ವರ್ಷ ವಯೋಮಾನದವರು 8.5% ಇದ್ದಾರೆ. ಈ ಅಂಕಿ ಅಂಶ ಏನು ಹೇಳುತ್ತದೆ ಎಂದರೆ, 26 ರಿಂದ 55 ವರ್ಷ ವಯೋಮಾನದ ಮಹಿಳಾ ವಹಿವಾಟುದಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ (82%). ಇದರೊಂದಿಗೆ ಅವರಲ್ಲಿ ಬಹುತೇಕರು ಮೆಟ್ರೋ ಹಾಗೂ ನಗರ ಪ್ರದೇಶದವರಾಗಿದ್ದು, ಅವರಲ್ಲಿ ಬಹುತೇಕರು ಉದ್ಯೋಗಸ್ಥರಾಗಿದ್ದು ಆರ್ಥಿಕವಾಗಿ ಸ್ವತಂತ್ರರಾಗಿದ್ದಾರೆ. ಪುರುಷ ಹೂಡಿಕೆದಾರರಿಗೆ ಹೋಲಿಸಿದರೆ, ದತ್ತಾಂಶ ಕೆಲ ಆಸಕ್ತಿದಾಯಕ ಅಂಶವನ್ನು ತೋರಿಸುತ್ತದೆ.

21% ಪುರುಷ ವಹಿವಾಟುದಾರರು 18 ರಿಂದ 25 ವರ್ಷ ವಯೋಮಾನದವರಾಗಿದ್ದಾರೆ ಆದರೆ, ಇದೇ ವಯೋಮಾನದ ಮಹಿಳಾ ಹೂಡಿಕೆದಾರರು ಕೇವಲ 8.5% ಇದ್ದಾರೆ.

• 24% ಮಹಿಳಾ ವಹಿವಾಟುದಾರರು 41 ರಿಂದ 55 ವರ್ಷದೊಳಗಿನವರಾಗಿದ್ದಾರೆ ಆದರೆ, ಇದೇ ವಯೋಮಾನದ ಪುರುಷ ವಹಿವಾಟುದಾರರು ಕೇವಲ 16.5% ರಷ್ಟಿದ್ದಾರೆ.

•55 ವರ್ಷಕ್ಕೂ ಮೇಲ್ಪಟ್ಟ ಮಹಿಳಾ ವಹಿವಾಟುದಾರರ ಸಂಖ್ಯೆ 9.5% ರಷ್ಟಿದ್ದರೆ, ಅದೇ ವಯೋಮಾನದ ಪುರುಷ ವಹಿವಾಟುದಾರರ ಸಂಖ್ಯೆ 3.3% ರಷ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next