Advertisement
ಮಧ್ಯಾಂತರದಲ್ಲಿ 258.8 ಪಾಯಿಂಟ್ಸ್ ವರೆಗೆ ಏರಿಕೆಯಾಗಿ, 61, 392.68ರ ವರೆಗೆ ಜಿಗಿದಿತ್ತು. ಆದರೆ ಐರೋಪ್ಯ ಒಕ್ಕೂಟದ ಷೇರು ಪೇಟೆಯಲ್ಲಿ ನಿರಾಶಾದಾಯಕ ವಹಿವಾಟು ಕಂಡುಬಂದಿತ್ತು. ಹೀಗಾಗಿ, ಅದರ ಪ್ರಭಾವ ಬಾಂಬೆ ಷೇರುಪೇಟೆಯಲ್ಲಿ ಕೂಡ ವ್ಯಕ್ತವಾಗಿದೆ. ಆದರೆ ಪ್ರಸಕ್ತ ವರ್ಷಕ್ಕೆ ಹೋಲಿಕೆ ಮಾಡಿದರೆ ಬಿಎಸ್‌ಇ ಸೂಚ್ಯಂಕ 2,586.92 ಪಾಯಿಂಟ್ಸ್ ಏರಿಕೆಯಾಗಿದೆ. ಇನ್ನು ನಿಫ್ಟಿ ದಿನದ ಸೂಚ್ಯಂಕ 85.70 ಪಾಯಿಂಟ್ಸ್ ಇಳಿಕೆಯಾಗಿ 18, 105.30 ರಲ್ಲಿ ಮುಕ್ತಾಯವಾಯಿತು. ವರ್ಷದ ಲೆಕ್ಕಾಚಾ ರಕ್ಕೆ ಬಂದರೆ ನಿಫ್ಟಿ 751.25 ಪಾಯಿಂಟ್ಸ್ ಜಿಗಿದಿದೆ. ಡಿ. 1ರಂದು ಸೂಚ್ಯಂಕ 63,583.07 ಪಾಯಿಂಟ್ಸ್‌ವರೆಗೆ ಗರಿಷ್ಠ ಏರಿಕೆಯಾಗಿತ್ತು. ಜೂ. 17ರಂದು ವರ್ಷದ ಕನಿಷ್ಠವೆಂದರೆ 50, 921.22 ಪಾಯಿಂಟ್ಸ್‌ಗೆ ಕುಸಿದಿತ್ತು.
ಏರಿಕೆ: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 14 ಪೈಸೆ ಏರಿಕೆಯಾಗಿದೆ. ಹೀಗಾಗಿ, ದಿನಾಂತ್ಯಕ್ಕೆ 82.73 ರೂ.ಗೆ ಮುಕ್ತಾಯ ವಾಗಿದೆ. ಒಟ್ಟಾರೆ ಹೇಳುವುದಿದ್ದರೆ 2022ರಲ್ಲಿ ಡಾಲರ್ ಎದುರು ರೂಪಾಯಿ ಶೇ.11.36 ಕುಸಿತ ಕಂಡಿದೆ.