ಮುಂಬಯಿ; ಜಾಗತಿಕ ಈಕ್ವಿಟಿ ಮತ್ತು ಷೇರುಮಾರುಕಟ್ಟೆಯಲ್ಲಿ ಧನಾತ್ಮಕ ವಹಿವಾಟಿನ ಪರಿಣಾಮ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಶುಕ್ರವಾರ(ಜೂನ್ 11) 241 ಅಂಕಗಳ ಏರಿಕೆ ಕಂಡಿದೆ. ಇದರಿಂದ ಇನ್ಫೋಸಿಸ್, ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ಲಾಭ ಗಳಿಸಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಬೇಹುಗಾರಿಗೆ ಜಾಲ ಪತ್ತೆಗೆ ಮುನ್ನುಡಿ ಬರೆಯಿತು ಆ ಒಂದು ಕರೆ!
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 241,05 ಅಂಕಗಳ ಏರಿಕೆಯೊಂದಿಗೆ 52,541.52 ಅಂಕಗಳ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 72 ಅಂಕ ಏರಿಕೆಯಾಗಿದ್ದು, 15,809.75ರ ಗಡಿ ದಾಟಿದೆ.
ಸೆನ್ಸೆಕ್ಸ್ ಏರಿಕೆಯಿಂದ ಪವರ್ ಗ್ರಿಡ್, ರಿಲಯನ್ಸ್ ಇಂಡಸ್ಟ್ರೀಸ್, ಒಎನ್ ಜಿಸಿ, ಎಚ್ ಸಿಎಲ್ ಟೆಕ್, ಸನ್ ಫಾರ್ಮಾ, ಇನ್ಫೋಸಿಸ್ ಮತ್ತು ಎಚ್ ಡಿಎಫ್ ಸಿ, ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ಲಾಭ ಗಳಿಸಿದೆ. ಮತ್ತೊಂದೆಡೆ ಬಜಾಜ್ ಫಿನ್ ಸರ್ವ್, ಎಚ್ ಯುಎಲ್, ಬಜಾಜ್ ಫೈನಾನ್ಸ್, ಟೈಟಾನ್ ಮತ್ತು ಟೆಕ್ ಮಹೀಂದ್ರ ಷೇರು ನಷ್ಟ ಕಂಡಿದೆ.
ಗುರುವಾರ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 358.83 ಅಂಕ ಏರಿಕೆಯೊಂದಿಗೆ 52,300.47 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿತ್ತು. ನಿಫ್ಟಿ 102.40 ಅಂಕ ಏರಿಕೆಯಾಗಿದ್ದು, 15,737.75ರ ಗಡಿ ತಲುಪಿತ್ತು.