ಮುಂಬೈ:ಹೂಡಿಕೆದಾರರು ಷೇರುಗಳ ಖರೀದಿಯಲ್ಲಿ ತೊಡಗಿದ ಪರಿಣಾಮ ಬುಧವಾರ(ಫೆ.24, 2021) ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 200 ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ಆರಂಭಿಸಿದೆ.
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 207 ಅಂಕಗಳ ಏರಿಕೆಯೊಂದಿಗೆ 49,958.41 ಅಂಕಗಳ ವಹಿವಾಟಿನ ಜತೆ ಮತ್ತೆ 50 ಸಾವಿರದ ಗಡಿಯತ್ತ ಮುನ್ನುಗ್ಗಿದೆ.
ಇದನ್ನೂ ಓದಿ:ಎಟಿಎಂ ನಲ್ಲಿ ಸಹಾಯದ ನೆಪವೊಡ್ಡಿ 70 ಸಾವಿರ ರೂ. ಲಪಟಾಯಿಸಿದ ವಂಚಕ!
ಅದೇ ರೀತಿ ಎನ್ ಎಸ್ ಇ ನಿಫ್ಟಿ 69.35 ಅಂಕಗಳ ಏರಿಕೆಯೊಂದಿಗೆ 14,777.15 ಅಂಕಗಳೊಂದಿಗೆ ವಹಿವಾಟು ನಡೆಸಿದೆ. ಸಂವೇದಿ ಸೂಚ್ಯಂಕ ಏರಿಕೆಯಿಂದ ಆ್ಯಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಎಸ್ ಬಿಐ, ರಿಲಯನ್ಸ್ ಇಂಡಸ್ಟ್ರೀಸ್, ಒಎನ್ ಜಿಸಿ ಮತ್ತು ಆಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಲಾಭಗಳಿಸಿವೆ.
ಮತ್ತೊಂದೆಡೆ ಟಿಸಿಎಸ್, ಪವರ್ ಗ್ರಿಡ್, ಇನ್ಫೋಸಿಸ್, ಎಚ್ ಯುಎಲ್ ಮತ್ತು ಟೆಕ್ ಮಹೀಂದ್ರ ಷೇರುಗಳು ನಷ್ಟ ಅನುಭವಿಸಿವೆ. ಮಂಗಳವಾರ(ಫೆ.23) ಮುಂಬಯಿ ಷೇರು ಪೇಟೆ ಸಂವೇದಿ
ಸೂಚ್ಯಂಕ 7.09 ಅಂಕಗಳ ಅಲ್ಪ ಏರಿಕೆ ಕಂಡು, ದಿನಾಂತ್ಯಕ್ಕೆ 49,751.41ಕ್ಕೆ ತಲುಪಿತ್ತು. ನಿಫ್ಟಿ ಕೂಡ 32.10 ಅಂಕಗಳ ಏರಿಕೆ ದಾಖಲಿಸಿ, 14,707.80ರಲ್ಲಿ ವಹಿವಾಟು ಅಂತ್ಯಗೊಳಿಸಿತ್ತು.